ಪೊಲೀಸರ ಸಮವಸ್ತ್ರವನ್ನು ಅವಮಾನಿಸುವ ಮತ್ತು ದಾರಿ ತಪ್ಪಿಸುವ ಜಾಹೀರಾತು ತೆರವು ; ಆದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದು ಯಾವಾಗ ? – ಸುರಾಜ್ಯ ಅಭಿಯಾನ

ಗೃಹಮಂತ್ರಿಗಳ ಆದೇಶ – ನವಾಜುದ್ದೀನ್ ಸಿದ್ದಿಕಿ ಮತ್ತು ‘ ಬಿಗ್ ಕ್ಯಾಶ್ ‘ ಮೇಲೆ ಕ್ರಮ ಕೈಗೊಳ್ಳಲಾಗುವುದು !

(ಎಡದಿಂದ ) ಸುರಾಜ್ಯ ಅಭಿಯಾನದ ವತಿಯಿಂದ ಶ್ರೀ. ರವಿ ನಲಾವಡೆ ಮತ್ತು ಶ್ರೀ. ಸತೀಶ ಸೋನಾರ , ಮಹಾರಾಷ್ಟ್ರದ ಗೃಹಮಂತ್ರಿ ಶ್ರೀ. ಯೋಗೇಶ್ ಕದಮ ಇವರಿಗೆ ಮನವಿ ನೀಡಿದರು

ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ಬೆಂಬೆತ್ತುವಿಕೆಯ ನಂತರ ಪೊಲೀಸರ ಸಮವಸ್ತ್ರದಲ್ಲಿ ನಟ ನವಾಜವುದ್ದಿನ ಸಿದ್ದಿಕಿ ಇವರನ್ನು ತೋರಿಸಿ ಜನರಿಗೆ ಜೂಜಾಡಲು ಪ್ರಚೋದಿಸುವ ವಿವಾದಿತ ‘ ಬಿಗ್ ಕ್ಯಾಶ್ ಪೋಕರ್ ‘ ಜಾಹೀರಾತು ಸೋಶಿಯಲ್ ಮೀಡಿಯಾದಿಂದ ಕೊನೆಗೂ ತೆರವುಗೊಂಡಿದೆ ; ಆದರೆ ಇಲ್ಲಿಯವರೆಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸುರಾಜ್ಯ ಅಭಿಯಾನದ ವತಿಯಿಂದ ಶ್ರೀ. ಸತೀಶ ಸೋನಾರ ಮತ್ತು ಶ್ರೀ. ರವಿ ನಲಾವಡೆ ಇವರು ಮಹಾರಾಷ್ಟ್ರದ ಗೃಹಮಂತ್ರಿ ಶ್ರೀ. ಯೋಗೇಶ್ ಕದಮ ಇವರನ್ನು ಭೇಟಿ ಮಾಡಿದರು ಮತ್ತು ಈ ಜಾಹೀರಾತು ಪೊಲೀಸ ಪಡೆಯ ಪ್ರತಿಷ್ಠೆಗೆ ಧಕ್ಕೆ ತರುವಂತಹ ಗಂಭೀರ ಪ್ರಕರಣ ಎಂದು ಗಮನಕ್ಕೆ ತರಲಾಯಿತು. ಈ ಭೇಟಿಯಲ್ಲಿ ವಿಷಯದ ಗಾಂಭೀರ್ಯವನ್ನು ಗಮನಿಸಿ ಗೃಹ ರಾಜ್ಯ ಮಂತ್ರಿ ಶ್ರೀ. ಯೋಗೇಶ ಕದಮ ಇವರು ಮುಂಬಯಿ ಪೊಲೀಸ ಅಧಿಕಾರಿಗಳಿಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುವ ಆದೇಶ ನೀಡಿದ್ದಾರೆ.

ಈ ಜಾಹೀರಾತನ್ನು ತೆರವುಗೊಳಿಸಲಾಗಿದ್ದರೂ, ನಟ ನವಾಜುದ್ದಿನ ಸಿದ್ದಿಕಿ ಮತ್ತು ‘ ಬಿಗ್ ಕ್ಯಾಶ್ ‘ ನ ಮಾಲಿಕ ಅಂಕೂರ್ ಸಿಂಗ್ ಇವರ ಮೇಲೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸುರಾಜ್ಯ ಅಭಿಯಾನವು ಈ ಪ್ರಕರಣದ ಕುರಿತು ಆಗಾಗ ಫೇಸ್ಬುಕ್, ಯೂಟ್ಯೂಬ್ ಮತ್ತು ಟ್ವಿಟರ್ (X) ಇವುಗಳ ದೂರು ನಿವಾರಣೆ ಅಧಿಕಾರಿಗಳ ಬಳಿ ದೂರುಗಳನ್ನು ನೀಡಿತ್ತು; ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೊನೆಗೆ ದೂರು ಅಪಿಲ ಸಮಿತಿ (GAC) ಗೆ ದೂರು ನೀಡಿದ ನಂತರ ಈ ಜಾಹೀರಾತು ತೆರವುಗೊಳಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಮಿತಾ ಸಚದೇವಾ ಇವರಿಂದಾದ ಕಾನೂನುರೀತ್ಯಾ ಹಸ್ತಕ್ಷೇಪದಿಂದ ಈ ಯಶಸ್ಸು ದೊರೆತಿದೆ.

ಯಾವ ಪೊಲೀಸ ಇಲಾಖೆ ಜೂಜ ಆಡುವವರ ಮೇಲೆ ದೂರು ದಾಖಲಿಸಿ ಅವರನ್ನು ಬಂಧಿಸುತ್ತದೆಯೋ, ಅದೇ ಪೊಲೀಸರ ಉಡುಪಿನಲ್ಲಿ ಇಂತಹ ಜಾಹೀರಾತು ತಯಾರಿಸುತ್ತಾರೆ, ಇದು ಪೊಲೀಸ ಪಡೆಯ ಪ್ರತಿಷ್ಠೆಯನ್ನು ಕಳಂಕಿತಗೊಳಿಸುವುದು ಮತ್ತು ವ್ಯಾವಸಾಯಿಕ ಲಾಭಕ್ಕಾಗಿ ಸಮಾಜದ ದಾರಿ ತಪ್ಪಿಸುವುದಾಗಿದೆ. ‘ಉಪಯುಕ್ತ ಆಟ ‘ ಎಂದು ಹೇಳಿ ‘ಜೂಜು ‘ ಈ ಅಪರಾಧ ನಿವಾರಿಸಲು ಇರುವಂತಹ ಅವಶ್ಯಕ ಕೌಶಲ್ಯ ಎಂದು ಪೊಲೀಸರ ಉಡುಪಿನಲ್ಲಿ ನವಾಜುದ್ದಿನ ಸಿದ್ದಿಕಿ ಇವರಿಂದ ಪ್ರಸಾರ ಮಾಡಲಾಗಿತ್ತು. ಹಾಗೂ ಇದರಲ್ಲಿ ಭಗವದ್ ಗೀತೆಯನ್ನು ಸಹ ಅವಮಾನಿಸಲಾಗಿತ್ತು. ಆದ್ದರಿಂದ ಸುರಾಜ್ಯ ಅಭಿಯಾನ ದಿಂದ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ‘ ಬಿಗ್ ಕ್ಯಾಶ್ ಪೋಕರ್ ‘ ಕಂಪನಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಪೊಲೀಸ್ ಪಡೆಯ ಪ್ರತಿಷ್ಠೆಯ ದುರುಪಯೋಗ ತಡೆಯಲು ಕಠಿಣ ನೀತಿ ರೂಪಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಲಾಗಿದೆ.