Attempt To Rape In Train : ಭಾಗ್ಯನಗರ (ತೆಲಂಗಾಣ)ಇಲ್ಲಿ ಚಲಿಸುವ ರೈಲಿನಲ್ಲಿ ಯುವತಿಯ ಮೇಲೆ ಬಲಾತ್ಕಾರಕ್ಕೆ ಯತ್ನ

ಸಂತ್ರಸ್ಥೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ರೈಲಿನಿಂದ ಹಾರಿದಳು !

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ರಾಜಧಾನಿ ಭಾಗ್ಯನಗರದಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಯುವತಿಯ ಮೇಲೆ ಬಲಾತ್ಕಾರಕ್ಕೆ ಯತ್ನ ನಡೆದಿದೆ. ಯುವತಿ ತನ್ನನ್ನು ತಾನು ಉಳಿಸಿಕೊಳ್ಳಲು ಚಲಿಸುವ ರೈಲಿನಿಂದ ಹಾರಿದಳು. ನಂತರ ಅವಳು ಗಾಯಗೊಂಡಳು. (ಇದು ರೈಲ್ವೆ ಪೊಲೀಸರು ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು) ಸಂತ್ರಸ್ಥೆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

1. ಭಾಗ್ಯನಗರದ ಸಿಕಂದರಾಬಾದ ರೈಲು ನಿಲ್ದಾಣದಿಂದ ಮೆಡಚಲಕ್ಕೆ ಹೋಗುತ್ತಿರುವ ‘ಎಮ್.ಎಮ್.ಟಿ.ಎಸ್.’ ರೈಲಿನ ಮಹಿಳಾ ಬೋಗಿಯಲ್ಲಿ ಯುವತಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

2. ಸಂತ್ರಸ್ಥೆ ಯುವತಿಯು ಪೊಲೀಸರಿಗೆ “ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಅಲ್ವಾಲ ರೈಲು ನಿಲ್ದಾಣದಲ್ಲಿ ಇಳಿದರು” ತದನಂತರ ನಾನು ಬೋಗಿಯಲ್ಲಿ ಒಬ್ಬಂಟಿಯಾಗಿದ್ದೆ. ಅಷ್ಟರಲ್ಲಿ, ಒಬ್ಬ ಯುವಕ ನನ್ನ ಬಳಿಗೆ ಬಂದು ನನಗೆ ಕಿರುಕುಳ ನೀಡಲು ಮತ್ತು ನನ್ನ ಮೇಲೆ ಬಲವಂತ ಮಾಡಲು ಪ್ರಾರಂಭಿಸಿದನು. ಆಗ ನನ್ನನ್ನು ನಾನು ರಕ್ಷಿಸಿಕೊಳ್ಳಲು ಚಲಿಸುವ ರೈಲಿನಿಂದ ಹಾರಿದೆ.” ಎಂದು ತಿಳಿಸಿದ್ದಾಳೆ.

3. ಪೊಲೀಸರ ಪ್ರಕಾರ, ಯುವತಿಯ ತಲೆ, ಗಲ್ಲ, ಬಲಗೈ ಮತ್ತು ಸೊಂಟಕ್ಕೆ ಗಾಯಗಳಾಗಿವೆ. ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರು ಅವಳನ್ನು ಗಾಯಗೊಂಡ ಸ್ಥಿತಿಯಲ್ಲಿ ನೋಡಿದರು. ಅವರು ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

4. ಈ ಹಿಂದೆ, ಫೆಬ್ರವರಿ 6, 2025 ರಂದು ಇದೇ ರೀತಿಯ ಘಟನೆ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಟಪಾಡಿ ಬಳಿ ಚಲಿಸುವ ರೈಲಿನಲ್ಲಿ ಆಗಿತ್ತು ಆ ಸಮಯದಲ್ಲಿ 36 ವರ್ಷದ ಗರ್ಭಿಣಿ ಮಹಿಳೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಲಾಗಿತ್ತು. ಅವಳು ವಿರೋಧಿಸಿದ್ದರಿಂದ ಅವಳನ್ನು ಚಲಿಸುವ ರೈಲಿನಿಂದ ತಳ್ಳಲಾಗಿತ್ತು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ತೆಲಂಗಾಣದಲ್ಲಿ ಅಸುರಕ್ಷಿತ ಮಹಿಳೆಯರು !