Baba Vanga Prediction : ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವೆ ಮೂರನೇ ಮಹಾಯುದ್ಧ ! – ಬಾಬಾ ವೆಂಗಾ

ಮಹಿಳಾ ಭವಿಷ್ಯಜ್ಞಾನಿ ಬಾಬಾ ವೆಂಗಾ ಮಾಡಿರುವ ಭವಿಷ್ಯವಾಣಿಗಳು!

ನವ ದೆಹಲಿ – ಯೂರೋಪಿನ ಬಲ್ಗೇರಿಯಾ ದೇಶದವರಾದ ಬಾಬಾ ವೆಂಗಾ ಎಂಬ ಭವಿಷ್ಯಜ್ಞಾನಿ ಮಹಿಳೆ ಮಾಡಿರುವ ಭವಿಷ್ಯವಾಣಿಗಳು ಬೆಳಕಿಗೆ ಬರುತ್ತಿವೆ. ಅವರ ಭವಿಷ್ಯವಾಣಿಯ ಪ್ರಕಾರ 2025 ರಲ್ಲಿ ಸಿರಿಯಾ ದೇಶದ ಪತನ ಪ್ರಾರಂಭವಾಗುತ್ತಿದ್ದಂತೆ ಜಗತ್ತಿನಲ್ಲಿ ಮೂರನೇ ಮಹಾಯುದ್ಧ ಆರಂಭವಾಗಲಿದೆ. ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವೆ ಮೂರನೇ ಮಹಾಯುದ್ಧವಾಗಲಿದೆ. ಈ ಯುದ್ಧವು ಮುಖ್ಯವಾಗಿ ಯೂರೋಪಿನಲ್ಲಿ ಆರಂಭವಾಗಲಿದೆ. ಇದರಿಂದಾಗಿ ಯೂರೋಪಿನ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗಲಿದೆ.

ಜರ್ಮನಿಯ ಒಂದು ನಗರದಲ್ಲಿ ಇಸ್ಲಾಮಿಕ್ ಆಳ್ವಿಕೆ ಬರಲಿದೆ!

ಬಾಬಾ ವೆಂಗಾ ಮಾಡಿರುವ ಭವಿಷ್ಯವಾಣಿಯ ಪ್ರಕಾರ, ಯೂರೋಪಿನ ಜರ್ಮನಿ ದೇಶದ ಒಂದು ನಗರದಲ್ಲಿ ಇರಾನ್‌ನ ಮುಸ್ಲಿಂ ಆಳ್ವಿಕೆ ಸ್ಥಾಪನೆಯಾಗಲಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಜರ್ಮನಿಯಲ್ಲಿ ಸದ್ಯಕ್ಕೆ ಸುಮಾರು 5 ಪ್ರತಿಶತ ಮುಸ್ಲಿಂ ಜನಸಂಖ್ಯೆಯಿದೆ ಮತ್ತು ಅದು ವೇಗವಾಗಿ ಹೆಚ್ಚುತ್ತಿದೆ. ಯಾವಾಗ ಇಡೀ ಜರ್ಮನಿಯಲ್ಲಿ ಮುಸ್ಲಿಂ ಆಳ್ವಿಕೆ ಬರುತ್ತದೆಯೋ, ಆಗ ಅಮೆರಿಕಾ ಸಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಇದರಿಂದ ಜಗತ್ತಿನ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಮನುಷ್ಯನು ಬೇರೆ ಗ್ರಹದ ಸಮೂಹದೊಂದಿಗೆ ಮೊದಲ ಸಂವಾದ ನಡೆಸಲಿದ್ದಾನೆ

2025 ರಲ್ಲಿ ಮನುಷ್ಯನು ಬ್ರಹ್ಮಾಂಡದ ಬೇರೆ ಗ್ರಹದ ಸಮೂಹದೊಂದಿಗೆ ಮೊದಲ ಸಂವಾದ ನಡೆಸಲಿದ್ದಾನೆ ಎಂದು ಬಾಬಾ ವೆಂಗಾ ಭವಿಷ್ಯ ನುಡಿದಿದ್ದಾರೆ.