ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ದಾಳಿಯಾಗುವ ಸಾಧ್ಯತೆ ! – ಬಾಂಗ್ಲಾದೇಶದ ಸೇನಾಮುಖ್ಯಸ್ಥ

ಢಾಕಾ – ಮಹಮ್ಮದ ಯೂನಸರವರು ಮಧ್ಯಂತರ ಸರಕಾರದ ಅಧಿಕಾರ ವಹಿಸಿಕೊಂಡ ನಂತರ ಬಾಂಗ್ಲಾದೇಶದ ಪರಿಸ್ಥಿತಿಯು ಇಂದಿಗೂ ಸಹಜ ಸ್ಥಿತಿಗೆ ಮರಳಿಲ್ಲ. ದೇಶದ ಮೇಲೆ ಆರ್ಥಿಕ ಸಂಕಟಗಳು. ಈಗ ಬಾಂಗ್ಲಾದೇಶದ ಸೇನಾಮುಖ್ಯಸ್ಥರಾದ ಜನರಲ ವಕಾರ-ಉಝ-ಜಮಾನರವರು ಮುಂದಿನ ತಿಂಗಳು ದೇಶದಲ್ಲಿ ಭಯೋತ್ಪಾದಕ ದಾಳಿಗಳ ಸಾಧ್ಯತೆ ಇರುವುದರಿಂದ ಸತರ್ಕತೆಯನ್ನು ಹೆಚ್ಚಿಸುವಂತೆ ನಿರ್ದೇಶನ ನೀಡಿದ್ದಾರೆ.

1. ಢಾಕಾದಲ್ಲಿ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಜನರಲ ವಕಾರರವರು ಮುಂದಿನ ತಿಂಗಳಲ್ಲಿ ಭಯೋತ್ಪಾದಕ ದಾಳಿಗಳು ಸಂಭವಿಸಬಹುದು ಎಂದು ಸೂಚಿಸಿದರು. ಅವರು ಎಲ್ಲಾ ಭದ್ರತಾ ವ್ಯವಸ್ಥೆಗಳಿಗೆ ಎಚ್ಚರಿಕೆಯಿಂದ ಇರಲು ತಿಳಿಸಿದರು.

2. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ದಾಳಿಗಳ ಹಲವಾರು ಪ್ರಕರಣಗಳು ವರದಿಯಾಗುತ್ತಿರುವಾಗ ಸೇನಾ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಆಗಸ್ಟ್ 2024 ರಲ್ಲಿ ಶೇಖ ಹಸೀನಾ ಸರಕಾರವನ್ನು ಉರುಳಿಸಿದ ನಂತರ ದೇಶದಲ್ಲಿ ಅಸ್ಥಿರತೆ ಹೆಚ್ಚಾಗಿದೆ.

2.ಜನರಲ್ ವಕಾರ ರವರು ಬಾಂಗ್ಲಾದೇಶದ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆಯೂ ಬೆಳಕು ಚೆಲ್ಲಿದರು. ಅವರು, `ಕಳೆದ ವರ್ಷದಂತೆ ಅಪರಾಧದ ಪ್ರಮಾಣವು ಮುಂದುವರೆದಿದ್ದರೂ, ಕೆಲವು ಬಹಿರಂಗ ಘಟನೆಗಳು ಜನರ ಮನಸ್ಸಿನಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿವೆ. ನಾವು ಈ ಅಪರಾಧಗಳನ್ನು ತಡೆಯಬೇಕು ಮತ್ತು ಅವುಗಳನ್ನು ನಿಯಂತ್ರಿಸಬೇಕು’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರು ಮತ್ತು ಜಿಹಾದಿ ಮಾನಸಿಕತೆಯ ಜನರನ್ನು ಮುಕ್ತವಾಗಿ ಬಿಟ್ಟರೆ ಇನ್ನೂ ಏನು ಆಗಬಹುದು ? ಬಾಂಗ್ಲಾದೇಶವು ಪಾಕಿಸ್ತಾನದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ಅಲ್ಲಿ ಅರಾಜಕತೆ ಉಂಟಾದರೆ ಆಶ್ಚರ್ಯಪಡಬೇಕಾಗಿಲ್ಲ !