Suriname Shri Rama Land : ‘ಶ್ರೀ ರಾಮನ ಭೂಮಿ’ ಎಂಬ ಹೆಸರಿನಿಂದಲೇ ದೇಶದ ‘ಸುರಿನಾಮ’ ಎಂಬ ಹೆಸರು ಪ್ರಚಲಿತವಾಯಿತು!

ದಕ್ಷಿಣ ಅಮೇರಿಕಾದ ಸುರಿನಾಮ ದೇಶದ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಸುನೈನಾ ಪಿ.ಆರ್. ಮೋಹನ ನೀಡಿದ ಮಾಹಿತಿ

ಸುರಿನಾಮ ದೇಶದ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಸುನೈನಾ ಪಿ.ಆರ್. ಮೋಹನ

ಉಜ್ಜೈನಿ (ಮಧ್ಯಪ್ರದೇಶ) – ಇಲ್ಲಿ ‘ವಿಕ್ರಮೋತ್ಸವ 2025’ ಅಡಿಯಲ್ಲಿ ನಡೆದ ಅಂತರರಾಷ್ಟ್ರೀಯ ಪೌರಾಣಿಕ ಚಲನಚಿತ್ರೋತ್ಸವದ ನಾಲ್ಕನೇ ದಿನದಂದು ದಕ್ಷಿಣ ಅಮೆರಿಕಾದ ದೇಶಗಳಾದ ‘ಸುರಿನಾಮ ಮತ್ತು ದಕ್ಷಿಣ ಆಫ್ರಿಕಾ’ ದೇಶದಿಂದ ಬಂದಿದ್ದ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ‘ಸುರಿನಾಮ’ ದೇಶದ ರಾಯಭಾರ ಕಚೇರಿಯ ಎರಡನೇ ಕಾರ್ಯದರ್ಶಿ ಸುನೈನಾ ಪಿ.ಆರ್. ಮೋಹನ್ ಇವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಹತ್ವವನ್ನು ಎತ್ತಿ ತೋರಿಸಿದರು. ‘ಸುರಿನಾಮ’ ಪದದ ಬಗ್ಗೆ ವಿವರಿಸಿದ ಸುನೈನಾ ಅವರು ಮೂಲತಃ ‘ಶ್ರೀ ರಾಮ’ ಎಂಬ ಪದದಿಂದ ಸುರಿನಾಮ ಎಂಬ ಹೆಸರು ಬಂದಿದೆ ಎಂದು ಹೇಳಿದರು. ನಮ್ಮ ಪೂರ್ವಜರು ಭಾರತದಿಂದ ಅಲ್ಲಿಗೆ ವಲಸೆ ಬಂದಾಗ, ಅವರು ಅದನ್ನು ‘ಶ್ರೀ ರಾಮನ ಭೂಮಿ’ ಎಂದು ಕರೆದರು, ಅದು ನಂತರ ಸುರಿನಾಮ ಆಯಿತು.

ಉಜ್ಜೈನಿಗೆ ಬಂದ ನಂತರ, ಅವರಿಗೆ ಸ್ವಂತ ಮನೆಯಲ್ಲಿರುವಂತೆ ಭಾಸವಾಯಿತು ಎಂದು ಸುನೈನಾ ಹೇಳಿದರು. “ಭಾರತ ನಮ್ಮ ಪೂರ್ವಜರ ಭೂಮಿಯಾಗಿದೆ ಮತ್ತು ಇಲ್ಲಿಂದಲೇ ನಮ್ಮ ಪೂರ್ವಜರು ಸುರಿನಾಮನಂತಹ ದೇಶಗಳಿಗೆ ಹೋಗಿ ನೆಲೆಸಿದರು. “ನಮ್ಮ ಪೂರ್ವಜರು ಭಾರತೀಯ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ, ಭಕ್ತಿ ಭಾವನೆಗಳು ಮತ್ತು ಧಾರ್ಮಿಕ ಆಚರಣೆಗಳಂತಹ ಸಂಪ್ರದಾಯಗಳನ್ನು ಸಂರಕ್ಷಿಸಿದ್ದಾರೆ. ಭಾರತೀಯ ಯುವಕರು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎಂದಿಗೂ ಮರೆಯಬಾರದು, ಎಂದು ಅವರು ಕರೆ ನೀಡಿದರು. ಹಿಂದಿಯಲ್ಲಿ ಮಾತನಾಡುತ್ತಾ, ಅವರು ಶಿವನಿಗೆ ಸಮರ್ಪಿತವಾದ ಭಾವಪೂರ್ಣ ಭಜನೆಯನ್ನೂ ಪ್ರಸ್ತುತಪಡಿಸಿದರು.