ಬೆಂಗಳೂರು – ಸಾಮಾಜಿಕ ಮಾಧ್ಯಮಗಳ (ಸೋಶಿಯಲ್ ಮೀಡಿಯಾ) ನಿಷೇಧಿಸಬೇಕು. ನಾನು ನಿಮಗೆ ಹೇಳುವುದರಿಂದ ಒಳ್ಳೆಯದೇ ಆಗುವುದು. ಇಂದು ಶಾಲೆಗೆ ಹೋಗುವ ಮಕ್ಕಳಿಗೆ ಅದು ಚಟವಾಗಿ ಪರಿಣಮಿಸಿದೆ. ನನಗೆ ಅನಿಸುತ್ತದೆ ಇದಕ್ಕಾಗಿ ಮದ್ಯಪಾನಕ್ಕಾಗಿ ಇರುವ ಹಾಗೆ ವಯೋಮಿತಿಯ ಶರತ್ತು ವಿಧಿಸಬೇಕು, ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದ್ರ ಮತ್ತು ನ್ಯಾಯಮೂರ್ತಿ ವಿಜಯಕುಮಾರ ಪಾಟೀಲ ಇವರ ಖಂಡಪೀಠವು ಸಲಹೆ ನೀಡಿದೆ.
೧. ನ್ಯಾಯಾಲಯವು, ಈ ಮಕ್ಕಳು ೧೭ ಅಥವಾ ೧೮ ವರ್ಷದವರಾಗಿದ್ದರೂ, ದೇಶದ ಹಿತದ ದೃಷ್ಟಿಯಿಂದ ಯಾವ ವಿಷಯ ಒಳ್ಳೆಯದು ಮತ್ತು ಯಾವುದು ಒಳ್ಳೆಯದಲ್ಲ ?’, ಇದನ್ನು ತಿಳಿಯುವಷ್ಟು ಪರಿಪಕ್ವತೆ ಅವರಲ್ಲಿ ಇರುತ್ತದೆಯೇ ? ಕೇವಲ ಸಾಮಾಜಿಕ ಮಾಧ್ಯಮಗಳಷ್ಟೇ ಅಲ್ಲದೆ ಇಂಟರ್ನೆಟ್ ನಲ್ಲಿನ ಕೆಲವು ವಿಷಯಗಳು ತೆಗೆದು ಹಾಕಬೇಕು. ಈ ವಿಷಯ ಮನಸ್ಸು ಕಲುಷಿತ ಗೊಳಿಸುತ್ತದೆ. ಸರಕಾರವು ಸಾಮಾಜಿಕ ಮಾಧ್ಯಮಗಳ ಬಳಕೆಗಾಗಿ ವಯೋಮಿತಿಯನ್ನು ಜಾರಿಗೊಳಿಸುವುದರ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
೨. ‘ಎಕ್ಸ್ ಕಾರ್ಪ್’ (ಹಿಂದಿನ ಟ್ವಿಟರ್) ಈ ಕಂಪನಿಯು ಕರ್ನಾಟಕ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠಕ್ಕೆ ಜೂನ್ ೩೦ ರ ಆದೇಶಕ್ಕೆ ಆವಾಹನೆ ನೀಡಿತ್ತು. ಅದರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ‘ಎಕ್ಸ್’ಗೆ ಕೆಲವು ಟ್ವೀಟ್ಸ್ ಗಳನ್ನು ತೆಗೆದು ಹಾಕಲು ಆದೇಶ ನೀಡಿತ್ತು. ಈ ಆದೇಶದ ವಿರೋಧದಲ್ಲಿನ ಅರ್ಜಿ ತಿರಸ್ಕರಿಸಲಾಗಿತ್ತು. ಇದರ ವಿರುದ್ಧ ಸಲ್ಲಿಸಿರುವ ಅರ್ಜಿಯ ಬಗ್ಗೆ ವಿಚಾರಣೆ ನಡೆಯಿತು.
೩. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಮಾಹಿತಿ ತಂತ್ರಜ್ಞಾನ ಕಾನೂನಿನ ಕಲಂ ೬೯ ಅ ದ ಅಂತರ್ಗತ ಫೆಬ್ರವರಿ ೨, ೨೦೨೧ ರಿಂದ ಫೆಬ್ರುವರಿ ೨೮, ೨೦೨೨ ಈ ಸಮಯದಲ್ಲಿನ ಸರಕಾರಿ 10 ಆದೇಶಗಳನ್ನು ಪ್ರಸಾರಗೊಳಿಸಲಾಗಿತ್ತು. ಅದರ ಪ್ರಕಾರ ‘ಎಕ್ಸ್’ ಗೆ (ಹಿಂದಿನ ಟ್ವಿಟರ್) ೧ ಸಾವಿರದ ೪೭೪ ಖಾತೆಗಳನ್ನು, ೧೭೫ ಟ್ವೀಟ್ ಗಳನ್ನು ೨೫೬ ಜಾಲತಾಣಗಳು ಮತ್ತು ಒಂದು ‘ಹ್ಯಾಶ್ ಟ್ಯಾಗ್’ (ಚರ್ಚೆ ನಡೆಸಲು ಆಯ್ದ ವಿಷಯ) ಬಂದ್ ಮಾಡಡುವಂತೆ ಆದೇಶ ನೀಡಿತ್ತು. ಅದರಲ್ಲಿನ ೩೯ ಅಂಶಗಳ ಸಂದರ್ಭದಲ್ಲಿನ ಆದೇಶಕ್ಕೆ ‘ಎಕ್ಸ್’ ನಿಂದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯವು ‘ಎಕ್ಸ್ ಕಾರ್ಪ್’ಗೆ ೫೦ ಲಕ್ಷ ರೂಪಾಯ ವೆಚ್ಚ ನೀಡುವ ಆದೇಶ ನೀಡಿದೆ.
Karnataka HC suggests imposing age limit for using social media, says ‘children are addicted to it’ https://t.co/1GeWouLyT0
— Scroll.in (@scroll_in) September 20, 2023
ಸಂಪಾದಕೀಯ ನಿಲುವುಇದನ್ನು ನ್ಯಾಯಾಲಯ ಏಕೆ ಹೇಳಬೇಕಾಗುತ್ತದೆ ? ಸರಕಾರಕ್ಕೆ ಇದು ತಿಳಿಯುವುದಿಲ್ಲವೇ ? |