ಹಿಂದುಗಳ ಮೇಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ‘ಆಜ ತಕ್’ ವಾರ್ತಾ ವಾಹಿನಿಯ ಪತ್ರಕರ್ತ ಸುಧೀರ ಚೌಧರಿ ಇವರ ವಿರುದ್ಧ ದೂರು ದಾಖಲು !

ಕೇವಲ ಅಲ್ಪಸಂಖ್ಯಾತರಿಗಾಗಿ ಹಮ್ಮಿಕೊಂಡಿರುವ ‘ಸ್ವಾವಲಂಬಿ ಸಾರಥಿ ಯೋಜನೆ’ಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು !

ಬೆಂಗಳೂರು – ‘ಆಜ ತಕ್’ ವಾರ್ತಾ ವಾಹಿನಿಯ ಪತ್ರಕರ್ತ ಸುಧೀರ ಚೌಧರಿ ಇವರ ವಿರುದ್ಧ ಕಥಿತ ಸಾಮಾಜಿಕ ಸೌಹಾರ್ದತೆ ಹದಗೆಡೆಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ವಿಕಾಸ ವಿಭಾಗದಿಂದ ನೀಡಿರುವ ದೂರಿನ ನಂತರ ಈ ಅಪರಾಧ ದಾಖಲಿಸಲಾಗಿದೆ. ಹಾಗೂ ಇದರಲ್ಲಿ ವಾಹಿನಿಯ ಮುಖ್ಯ ಸಂಪಾದಕರು ಮತ್ತು ಆಯೋಜಕರಿಗೂ ಆರೋಪಿ ಎಂದು ಹೇಳಿದ್ದಾರೆ. ದೂರಿನಲ್ಲಿ, ‘ಆಜ ತಕ’ ವಾಹಿನಿಯ ಒಂದು ಕಾರ್ಯಕ್ರಮದ ಸೂತ್ರ ಸಂಚಾಲನೆ ಮಾಡುವ ಪತ್ರಕರ್ತ ಸುಧೀರ ಚೌಧರಿ ರಾಜ್ಯ ಸರಕಾರದ ಒಂದು ಯೋಜನೆಯ (ಸ್ವಾವಲಂಬಿ ಸಾರಥಿ ಯೋಜನೆಯ) ಅನುದಾನದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅದರಲ್ಲಿ, ಈ ಯೋಜನೆಯ ಅಂತರ್ಗತ ದೊರೆಯುವ ಅನುದಾನ ಕೇವಲ (ಮುಸಲ್ಮಾನರಿಗೆ) ಅಲ್ಪಸಂಖ್ಯಾತರಿಗೆ ದೊರೆಯಲಿದೆ ಹಿಂದುಗಳಿಗಲ್ಲ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಬಡ ಹಿಂದುಗಳಿಗೆ ಯೋಜನೆಯ ಅಂತರ್ಗತ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ಸೂತ್ರ ಸಂಚಾಲಕರು ಉದ್ದೇಶಪೂರ್ವಕವಾಗಿ ಸರಕಾರಿ ಯೋಜನೆಯ ಬಗ್ಗೆ ತಪ್ಪಾದ ಮಾಹಿತಿ ನೀಡಿದರು ! – ಸಚಿವ ಪ್ರಿಯಾಂಕ ಖರ್ಗೆ ಇವರ ಆರೋಪ

ಸಚಿವ ಪ್ರಿಯಾಂಕ ಖರ್ಗೆ

ಈ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದಲ್ಲಿನ ಸಚಿವ ಪ್ರಿಯಾಂಕ ಖರ್ಗೆ ಇವರು, ‘ಆಜ ತಕ್’ ದ ಸೂತ್ರ ಸಂಚಾಲಕರು ಉದ್ದೇಶಪೂರ್ವಕವಾಗಿ ಸರಕಾರಿ ಯೋಜನೆಗಳ ಬಗ್ಗೆ ತಪ್ಪಾದ ಮಾಹಿತಿ ನೀಡುತ್ತಿದ್ದಾರೆ. ಇದರ ಆರಂಭ ಭಾಜಪದ ಶಾಸಕರಿಂದ ಆಗಿತ್ತು ಮತ್ತು ಪ್ರಸಾರ ಮಾಧ್ಯಮಗಳಿಂದ ಅದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಸರಕಾರ ಇದರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು ಎಂದು ಹೇಳಿದರು.

‘ಸ್ವಾವಲಂಬಿ ಸಾರಥಿ ಯೋಜನೆ’ಯಲ್ಲಿ ಹಿಂದೂ ಧರ್ಮೀಯರ ಸಮಾವೇಶ ಏಕೆ ಇಲ್ಲ ?’ ಈ ಪ್ರಶ್ನೆಯಿಂದ ನನ್ನ ಮೇಲೆ ದೂರು ದಾಖಲು ! – ಸುಧೀರ ಚೌಧರಿ
ಸುಧೀರ್ ಚೌಧರಿ ಇವರು ಟ್ವೀಟ್ ಮಾಡಿ. ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದಿಂದ ನನ್ನ ವಿರುದ್ಧ ದೂರ ದಾಖಲಿಸಿರುವ ಮಾಹಿತಿ ದೊರೆತಿದೆ. ನನ್ನ ಪ್ರಶ್ನೆಗೆ ಉತ್ತರವೆಂದು ದೂರು ದಾಖಲಿಸಿದ್ದಾರೆಯೇ ? ಮತ್ತು ಅದು ಕೂಡ ಜಾಮೀನರಹಿತ ! ಅಂದರೆ ನನ್ನನ್ನು ಬಂಧಿಸಲು ಸಂಪೂರ್ಣ ಸಿದ್ಧತೆ ಮಾಡಲಾಗಿದೆ. ನನ್ನ ಪ್ರಶ್ನೆ, ಸ್ವಾವಲಂಬಿ ಸಾರಥಿ ಯೋಜನೆಯಲ್ಲಿ ಹಿಂದೂ ಧರ್ಮೀಯರ ಸಮಾವೇಶ ಏಕೆ ಇಲ್ಲ ? ಎಂದು ಪ್ರಶ್ನೆ ಇತ್ತು. ನಾನು ಹೋರಾಟಕ್ಕಾಗಿ ಸಿದ್ಧನಿದ್ದೇನೆ. ಇನ್ನು ನ್ಯಾಯಾಲಯದಲ್ಲಿ ಭೇಟಿ ಮಾಡೋಣ ! ಎಂದು ಹೇಳಿದ್ದಾರೆ.

ಭಾಜಪದಿಂದ ವಿರೋಧ

ಭಾಜಪದ ಸಂಸದ ತೇಜಸ್ವಿ ಸೂರ್ಯ

ಸುಧೀರ ಚೌಧರಿ ಇವರ ಮೇಲಿನ ದೂರಿನ ಬಗ್ಗೆ ಭಾಜಪದ ಸಂಸದ ತೇಜಸ್ವಿ ಸೂರ್ಯ ಟಿಪಿಸಿದ್ದಾರೆ. ಸೂರ್ಯ ಇವರು, ಸುಧೀರ ಚೌಧರಿ ಇವರು ಸರಕಾರಿ ಯೋಜನೆಯ ಬಗ್ಗೆ ಪ್ರಶ್ನೆ ಕೇಳಿದ ನಂತರ ಸರಕಾರ ಪತ್ರಕರ್ತರಿಗೆ ಗುರಿ ಮಾಡುತ್ತಿದ್ದಾರೆ. ಇದು ನೇರ ಪತ್ರಿಕೋದ್ಯಮದ ಮೇಲೆ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಏನಿದು ಸ್ವಾವಲಂಬಿ ಸಾರಥಿ ಯೋಜನೆ ?

‘ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆ’ಯ ಅಡಿಯಲ್ಲಿ ರಾಜ್ಯದಲ್ಲಿನ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗ ಯುವಕರಿಗೆ ವಾಹನ ಖರೀದಿಗಾಗಿ ಸರಕಾರದಿಂದ ಅನುದಾನ ನೀಡಲಾಗುವುದು. ಇದರಲ್ಲಿ ಮುಸಲ್ಮಾನ, ಕ್ರೈಸ್ತ, ಜೈನ್, ಸಿಖ್, ಬೌದ್ಧ ಮತ್ತು ಪಾರಸಿ ಇವರಿಗೆ ಈ ಲಾಭ ದೊರೆಯುವುದು. (ಕಾಂಗ್ರೆಸ್ಅನ್ನು ಆಯ್ಕೆಯನ್ನು ಮಾಡಿದ ಹಿಂದುಗಳಿಗೆ ಈ ಯೋಜನೆ ಒಪ್ಪಿಗೆ ಇದೆಯೇ ? – ಸಂಪಾದಕರು)

ಸಂಪಾದಕೀಯ ನಿಲುವು

ಪ್ರಸಾರ ಮಾಧ್ಯಮಗಳ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ ಎಂದು ಕೂಗಾಡುವ ಪ್ರಗತಿ (ಅಧೋಗತಿ)ಪರರು, ಜಾತ್ಯತೀತ ಪತ್ರಕರ್ತರು ಈ ಅನ್ಯಾಯದ ಬಗ್ಗೆ ಮೌನ ಏಕೆ ?