ಚಂದ್ರನ ಅತಿ ಹತ್ತಿರ ತಲುಪಿದ ಭಾರತದ ಐತಿಹಾಸಿಕ ಚಂದ್ರಯಾನ-3 !

ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ‘ಚಂದ್ರಯಾನ-3’ ಈಗ ಚಂದ್ರನ ಅತಿ ಹತ್ತಿರ ತಲುಪಿದೆ. ಭಾರತೀಯ ‘ಇಸ್ರೋ’ ಆಗಸ್ಟ್ 14 ರ ಬೆಳಗ್ಗೆ 11:30 ರಿಂದ 12:30 ರ ಸಮಯದಲ್ಲಿ ‘ಚಂದ್ರಯಾನ-3’ ಚಂದ್ರನೊಂದಿಗಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿದೆ.

ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನನ್ನು ರದ್ದುಪಡಿಸಬಾರದು !

ಹಿಂದಿನ ಭಾಜಪ ಆಡಳಿತ ಸರಕಾರವು ರಾಜ್ಯದಲ್ಲಿ ಮತಾಂತರ ನಿಷೇಧ ಹಾಗೆಯೇ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಿತ್ತು. ಅದನ್ನು ಸದ್ಯದ ಕಾಂಗ್ರೆಸ್ ಸರಕಾರವು ರದ್ದುಗೊಳಿಸಬಾರದು ಹಾಗೆಯೇ ಅದರ ತೀವ್ರತೆನ್ನೂ ಕಡಿಮೆ ಮಾಡಬಾರದು ಎಂಬ ಮನವಿಯನ್ನು ಇಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಮಾಡಲಾಯಿತು.

ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡುವವರ ಶಿರಚ್ಛೇದ ಬೆದರಿಕೆ ಹಾಕಿದವರ ಬಂಧನ !

ಪ್ರವಾದಿ ಮುಹಮ್ಮದ್ ರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೊಹಮ್ಮದ್ ಅಯಾಜ್ ಮತ್ತು ಅಕ್ಬರ್ ಸೈಯದ್ ನನ್ನು ರಾಜ್ಯದ ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

ಕೊನೆಗೂ ಪೊಲೀಸರ ಬಲೆಗೆ ಬಿದ್ದ ದೀಪಕ್ ರಾವ್ ಕೊಲೆ ಆರೋಪಿ ಉಲ್ಲಂಜೆ ನೌಷದ್ ಅರೆಸ್ಟ್‌

ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು ಒಂದೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಮೊಹಮ್ಮದ್ ನೌಷದ್ ಅಲಿಯಾಸ್ ಉಲ್ಲಂಜೆ ನೌಷದ್(28)ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ !

ಉಡುಪಿಯ ಕಾಲೇಜೊಂದರ ಶೌಚಾಲಯದ ವಿಧ್ಯಾರ್ಥಿನಿಯರ ಫೋಟೊ ತೆಗೆದ ಪ್ರಕರಣ ತಾಜಾ ಇರುವಾಗ, ಇಂತಹ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಓರ್ವ ವಿಧ್ಯಾರ್ಥಿನಿಯ “ಇನ್ ಸ್ಟಾಗ್ರಾಂ” ಖಾತೆಯನ್ನು ಹ್ಯಾಕ್ ಮಾಡಿ, ಸಂಬಂಧಪಟ್ಟ ವಿಧ್ಯಾರ್ಥಿನಿಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗಿದೆ.

ಹೆಂಡತಿ ತನ್ನ ಗಂಡನನ್ನು ‘ಕಪ್ಪು’ ಎಂದು ಕರೆದು ಅವಮಾನಿಸುವುದು ಕ್ರೌರ್ಯ ! – ಕರ್ನಾಟಕ ಉಚ್ಚ ನ್ಯಾಯಾಲಯ

ರಾಜ್ಯದ ಉಚ್ಚ ನ್ಯಾಯಾಲಯ ನೀಡಿದ ಒಂದು ತೀರ್ಪಿನಲ್ಲಿ, ಹಂಡತಿಯು ತನ್ನ ಗಂಡನನ್ನು ಕಪ್ಪು ಎಂದು ಕರೆದು ಅವಮಾನಿಸುವುದು ಕ್ರೌರ್ಯ ಎಂದು ಹೇಳಿದೆ. ಇದರ ಆಧಾರದ ಮೇಲೆ ವಿಚ್ಛೇದನ ನೀಡಬಹುದು ಎಂದು ಪ್ರತಿಕ್ರಿಯಿಸಿ ಉಚ್ಚ ನ್ಯಾಯಾಲಯ ದಂಪತಿಯೊಂದರ ವಿಚ್ಛೇದನೆಗೆ ಒಪ್ಪಿಗೆ ನೀಡಿದೆ.

ಪ್ರಖರ ಹಿಂದುತ್ವನಿಷ್ಠ ರಶ್ಮಿ ಸಾಮಂತ ಅವರ ‘ಎ ಹಿಂದೂ ಇನ್ ಆಕ್ಸ್‌ಫರ್ಡ್’ ಪುಸ್ತಕದ ಲೋಕಾರ್ಪಣೆ !

ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಬಯಲಿಗೆ ಎಳೆಯುವ ಪ್ರಯತ್ನಕ್ಕೆ ಹಿಂದುದ್ವೇಷಿ ಜಮಾತ್ ವಿರೋಧಿಸುವುದರಲ್ಲಿ ಆಶ್ಚರ್ಯವೇನಿದೆ ? ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಕಾರ್ಯ ಮಾಡುತ್ತಿರುವ ರಶ್ಮಿ ಸಾಮಂತ್ ಇವರಂತಹ ಹಿಂದುತ್ವನಿಷ್ಠರನ್ನು ಬೆಂಬಲಿಸಲು ಹಿಂದೂಗಳು ದೃಢವಾಗಿ ಅವರೊಂದಿಗೆ ನಿಲ್ಲಬೇಕಾಗಿದೆ !

10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕ್ರೈಸ್ತ ಮುಖ್ಯೋಪಾಧ್ಯಾಪಕನ ಬಂಧನ !

ವರ್ತೂರಿನ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ‘ಬೆಥೆಲ್ಸ್ ಬ್ಯಾಪ್ಟಿಸ್ಟ್ ಅಕಾಡೆಮಿ’ ಶಾಲೆಯ ಮುಖ್ಯೋಪಾಧ್ಯಾಪಕ ಲ್ಯಾಬರ್ಟ್ ಪುಷ್ಪರಾಜ್ (ವಯಸ್ಸು 65) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರಿನ ಪ್ರಸಿದ್ಧ ದೇವೀರಮ್ಮನ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ

ತಾಲೂಕಿನ ಪ್ರಸಿದ್ಧ ದೇವೀರಮ್ಮ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿಯು, ದರ್ಶನಕ್ಕೆ ಆಗಮಿಸುವ ಭಕ್ತರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ತಿಳಸಿದೆ.

ದೇವತೆಗಳ ಕುರಿತು ಇನ್ ಸ್ಟಾಗ್ರಾಂನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನ ಬಂಧನ

ಇನ್ ಸ್ಟಾಗ್ರಾಂನಲ್ಲಿ ದೇವತೆಗಳ ಕುರಿತು ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಿಕರ್ನಕಟ್ಟೆಯ ಹಿಲ್ ರೋಡ್ ನಿವಾಸಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿಯನ್ನು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.