ಭಟ್ಕಳದಲ್ಲಿ೬ ವರ್ಷದಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯ ಬಂಧನ !

ಆಧಾರಕಾರ್ಡ್, ಪ್ಯಾನ್‍ಕಾರ್ಡ್, ರೇಶನ ಕಾರ್ಡ್ ಇತ್ಯಾದಿ ಕಾಗದಪತ್ರ ಪತ್ತೆ !

* ಶತ್ರುರಾಷ್ಟ್ರದ ನಾಗರಿಕರು ೬ ವರ್ಷದಿಂದ ಅಕ್ರಮವಾಗಿ ವಾಸಿಸುತ್ತಿರುವ ವಿಷಯವು ಗೂಡಾಚಾರ ಇಲಾಖೆಗೆ ಯಾಕೆ ಗೊತ್ತಾಗಲಿಲ್ಲ? ಅಥವಾ ನಿದ್ರೆ ಮಾಡುತ್ತಿದ್ದರೇ ?

* ಶತ್ರುರಾಷ್ಟ್ರದ ನಾಗರಿಕರಿಗೆ ಭಾರತದ ಅಧಿಕೃತ ಸರಕಾರಿ ದಾಖಲೆಗಳನ್ನು ಯಾರು ಮಾಡಿಕೊಟ್ಟರು, ಇದು ಜನರ ಮುಂದೆ ಬರಬೇಕು ! ಇಂತಹ ದೇಶದ್ರೋಹಿಗಳನ್ನು ಸರಕಾರವು ಗಲ್ಲಿಗೇರಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ಭಟ್ಕಳ – ಎಂಟು ವರ್ಷದಿಂದ ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖತೀಜಾ ಮೆಹರಿನ (೩೩ ವರ್ಷ) ಎಂದು ಅವಳ ಹೆಸರಾಗಿದ್ದು ಆಕೆಯ ಬಳಿ ಭಾರತದ ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಜನ್ಮದಾಖಲೆ ಮುಂತಾದ ಎಲ್ಲ ಮಹತ್ವದ ಸರಕಾರಿ ದಾಖಲೆಗಳಿರುವುದು ಬೆಳಕಿಗೆ ಬಂದಿದೆ. ಆಕೆಯನ್ನು ನ್ಯಾಯಾಲಯ ಕಸ್ಟಡಿಗೆ ಕಳುಹಿಸಲಾಗಿದೆ, ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯು ಭಟ್ಕಳ ಮೂಲದ ಮೊಹಿದ್ದೀನ್ ರುಕ್ಕುದ್ದೀನ್ ಎಂಬುವನೊಂದಿಗೆ ೨೦೧೪ ರಲ್ಲಿ ದುಬೈನಲ್ಲಿ ವಿವಾಹವಾಗಿದ್ದಳು. ನಂತರ ಅವಳು ೩ ತಿಂಗಳ ಪ್ರವಾಸಿ ವಿಸಾದಿಂದ ಭಾರತಕ್ಕೆ ಬಂದಳು ಮತ್ತು ೨೦೧೫ ರಿಂದ ಈಕೆ ಭಟ್ಕಳದಲ್ಲಿ ಅಕ್ರಮವಾಗಿ ವಾಸಿಸಲಾರಂಭಿಸಿದಳು. ಆಕೆಗೆ ೩ ಮಕ್ಕಳೂ ಇವೆ. ಈ ಕಾಲಾವಧಿಯಲ್ಲಿ ಆಕೆ ನಕಲಿ ಕಾಗದಪತ್ರಗಳ ಆಧಾರದಲ್ಲಿ ಈ ಮೇಲಿನ ಎಲ್ಲಾ ದಾಖಲೆಗಳನ್ನು ಮಾಡಿಸಿಕೊಂಡಳು.

(ಸೌಜನ್ಯ: Dighvijay 24X7 News )