ಕರ್ನಾಟಕದ ಹಿಂದೂ ದೇವಾಲಯಗಳಿಗೆಂದು ಮೀಸಲಿಟ್ಟ ಹಣವನ್ನು ಇತರ ಧಾರ್ಮಿಕ ಸಂಸ್ಥೆಗಳಿಗೆ ಖರ್ಚು ಮಾಡಲಾಗುವುದಿಲ್ಲ !

ಹಿಂದೂ ಸಂಘಟನೆಗಳ ವಿರೋಧದ ನಂತರ ಕರ್ನಾಟಕ ಸರಕಾರದ ಆದೇಶ

ಬೆಂಗಳೂರು – ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಹಾಗೂ ದತ್ತಿ ಇಲಾಖೆಯ ಹಣವನ್ನು ಇನ್ನು ಮುಂದೆ ಯಾವುದೇ ಹಿಂದೂಯೇತರ ಧಾರ್ಮಿಕ ಸಂಸ್ಥೆಗೆ ನೀಡಲು ಬಳಸಬಾರದು ಎಂದು ಕರ್ನಾಟಕ ಸರಕಾರವು ಆದೇಶಿಸಿದೆ.

೧. ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂ ದೇವಾಲಯಗಳಿಗೆ ಮೀಸಲಿಟ್ಟ ಹಣವನ್ನು ಪುರೋಹಿತರು ಮತ್ತು ಇತರ (ಮುಸ್ಲಿಂ ಇತ್ಯಾದಿ) ಧಾರ್ಮಿಕ ಸಂಸ್ಥೆಗಳ ನೌಕರರಿಗೆ ನೀಡಲಾಗುತ್ತದೆ. ಇದರ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಇತ್ತೀಚೆಗೆ ವ್ಯಕ್ತಪಡಿಸಿದ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ‘ಇಂತಹ ಎಲ್ಲಾ ಆರ್ಥಿಕ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಆದೇಶಿಸಿದ್ದಾರೆ.

೨. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಒಂದು ಮನವಿಯಲ್ಲಿ, ರಾಜ್ಯದ ಅಂದಾಜು ೨೭೦೦೦ ಹಿಂದೂ ದೇವಾಲಯಗಳನ್ನು ಒಳಗೊಂಡಿರುವ ‘ತಾಸ್ತಿಕ್’ ನಿಧಿಯಡಿಯಲ್ಲಿ ೧೩೩ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ ಆದರೆ ಈ ನಿಧಿಯನ್ನು ಪಡೆದವರಲ್ಲಿ ೭೬೪ ಹಿಂದೂಯೇತರ ಧಾರ್ಮಿಕ ಸಂಸ್ಥೆಗಳು ಒಳಗೊಂಡಿವೆ. ಸಚಿವರು ಹೇಳಿದಂತೆ ತಕ್ಷಣ ನೋಟಿಸ್ ನೀಡುವ ಮೂಲಕ ಇದನ್ನು ನಿಲ್ಲಿಸಲು ಆದೇಶ ಹೊರಡಿಸಲಾಗುವುದು.

೩. ಧಾರ್ಮಿಕ ದತ್ತಿ ವಿಭಾಗದ ನಿಧಿಯಿಂದ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಮಸೀದಿಗಳ ಇಮಾಮ್‍ಗಳಿಗೆ ನಷ್ಟಪರಿಹಾರ ನೀಡಲು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ೫೦೦ ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದ್ದರು, ಇದರಲ್ಲಿ ದೇವಾಲಯದ ಅರ್ಚಕರು ಮತ್ತು ‘ಸಿ’ ದರ್ಜೆಯ ದೇವಾಲಯಗಳ ಸಿಬ್ಬಂದಿಗೆ ಜೊತೆಗೆ ಮಸೀದಿಗಳಲ್ಲಿನ ಇಮಾಮ್‍ಗಳು ಮತ್ತು ಮುಅಝಿನ (ಬಾಂಗ ನೀಡುವವರು) ಇವರಿಗೆ ಒಂದು ಬಾರಿ ಪರಿಹಾರವನ್ನು ನೀಡಲಾಗಿತ್ತು.

. ವಿಶ್ವ ಹಿಂದೂ ಪರಿಷತ್ತು ಪುರೋಹಿತರಿಗೆ ನೀಡಲಾದ ನಷ್ಟಪರಿಹಾರವನ್ನು ಸ್ವಾಗತಿಸಿತು ಮತ್ತು ಮಾನವಶಕ್ತಿ ಅಭಿವೃದ್ಧಿ ಮಂಡಳಿಯ ನಿಧಿಯಿಂದ ಮಸೀದಿಗಳಿಗೆ ಪರಿಹಾರವನ್ನು ನೀಡುವ ಸರಕಾರದ ಈ ನಿರ್ಧಾರವನ್ನು ವಿರೋಧಿಸಿತು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿದ ವಿಎಚ್‍ಪಿ ನಾಯಕರು ಸರಕಾರದ ನಿರ್ಧಾರವನ್ನು ವಿರೋಧಿಸಿದ್ದರು.