ದೆಹಲಿಯಲ್ಲಿ ಬ್ರಿಟಿಷ್ ಕಾಲದ ಕಾನೂನುಗಳನ್ನು ರದ್ದುಗೊಳಿಸುವಂತೆ ‘ಭಾರತ್ ಜೊಡೋ ಆಂದೋಲನ’ವನ್ನು ಆಯೋಜಿಸಲಾಗಿತ್ತು !

ಇಲ್ಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಆಗಸ್ಟ್ ೮ ರಂದು ದೇಶದಲ್ಲಿ ಬ್ರಿಟೀಷರ ಕಾಲದ ಕಾನೂನುಗಳನ್ನು ರದ್ದುಗೊಳಿಸಲು ಆಯೋಜಿಸಲಾಗಿದ್ದ ‘ಭಾರತ್ ಜೊಡೋ ಆಂದೋಲನ’ದಲ್ಲಿ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ತಥಾಕಥಿತ ಪ್ರಚೋದನಕಾರಿ ಘೋಷಣೆ ನೀಡಿದ ಆರೋಪದಲ್ಲಿ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.

ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ !

ಹೊಸ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡುವ ಈ-ಮೇಲ್ ಅಲ್-ಕೈದಾದ ಓರ್ವ ಭಯೋತ್ಪಾದಕನಿಂದ ಬಂದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಶಾಸಕರ ಸಂಬಳ ೭೨ ಸಾವಿರದಿಂದ ೧ ಲಕ್ಷ ೭೦ ಸಾವಿರಕ್ಕೆ ಏರಿಕೆ !

ಶಾಸಕರ ಸಂಬಳವನ್ನು ಹೆಚ್ಚಿಸುವ ದೆಹಲಿಯ ಎ.ಎ.ಪಿ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಅನುಮೋದಿಸಿದೆ. ಇದರ ಪರಿಣಾಮವಾಗಿ ಈಗ ದೆಹಲಿಯ ಶಾಸಕರ ಒಟ್ಟು ಸಂಬಳ ೭೨ ಸಾವಿರ ದಿಂದ ೧ ಲಕ್ಷ ೭೦ ಸಾವಿರಕ್ಕೆ ಏರಿಕೆಯಾಗಲಿದೆ.

ಭಾರತದಲ್ಲಿ ತುರ್ತು ಉಪಯೋಗಕ್ಕೆ ‘ಜಾನ್ಸನ್ ಆಂಡ್ ಜಾನ್ಸನ್’ ಲಸಿಕೆಗೆ ದಕ್ಕಿತು ಒಪ್ಪಿಗೆ

ಕೇಂದ್ರ ಸರಕಾರವು ಅಮೇರಿಕಾದ ‘ಜಾನ್ಸನ್ ಆಂಡ್ ಜಾನ್ಸನ್’ ಸಂಸ್ಥೆಯು ತಯಾರಿಸಿದ ಕೊರೋನಾ ವಿರುದ್ಧದ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಇತರ ಸಂಸ್ಥೆಗಳು ತಯಾರಿಸಿದ ಕೊರೋನಾ ವಿರುದ್ಧದ ಲಸಿಕೆಗಳ ಎರಡು ಡೋಸ್ ತೆಗೆದುಕೊಳ್ಳಬೇಕಾಗುತ್ತದೆ.

ದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಕ್ತಪಾತದ ಸಿದ್ಧತೆಯಲ್ಲಿ ಭಯೋತ್ಪಾದಕರು !

ದೇಶದ ರಾಜಧಾನಿ ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುವಾಗ ಭದ್ರತೆಯ ದೃಷ್ಟಿಯಲ್ಲಿಯೂ ಎಚ್ಚರಿಕೆಯನ್ನು ನಿರ್ವಹಿಸಲಾಗುತ್ತಿದೆ. ಭಯೋತ್ಪಾದಕರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ದೆಹಲಿಯಲ್ಲಿ ‘ಹಜ್ ಹೌಸ್’ ವಿರುದ್ಧ ಹಿಂದುತ್ವನಿಷ್ಠರ ಹಾಗೂ ಸ್ಥಳೀಯರ ಆಂದೋಲನ !

ಆಗಸ್ಟ್ 6ರಂದು ದ್ವಾರಕಾ ಭಾಗದಲ್ಲಿರುವ ಭರಥಲ ಚೌಕನಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಹಾಗೂ 32 ಸ್ಥಳೀಯರು ಪ್ರಸ್ತಾವಿತ ‘ಹಜ್ ಹೌಸ್’ನ ವಿರುದ್ಧ ಆಂದೋಲನ ನಡೆಸಿದರು. ಈ ಸಮಯದಲ್ಲಿ 350 ಕ್ಕಿಂತಲೂ ಹೆಚ್ಚಿನ ಜನರು ಆಂದೋಲನದಲ್ಲಿ ಸಹ ಭಾಗಿಯಾಗಿದ್ದರು.

ಈ ಸಲದ ಶ್ರೀ ಕೃಷ್ಣಜನ್ಮಾಷ್ಟಮಿಯ ನಿಮಿತ್ತ್ತ ವಿಶ್ವ ಹಿಂದೂ ಪರಿಷತ್ತಿನಿಂದ ದೇಶಾದ್ಯಂತ ಕಾರ್ಯಕ್ರಮದ ಆಯೋಜನೆ

ಈ ವರ್ಷ ವಿಶ್ವ ಹಿಂದೂ ಪರಿಷತ್ತು ಶ್ರೀಕೃಷ್ಣಜನ್ಮಾಷ್ಟಮಿಯ ಹಿನ್ನೆಲೆಯಲ್ಲಿ ದೇಶಾದ್ಯಂತ ಕಾರ್ಯಕ್ರಮದ ಯೋಜನೆ ಮಾಡಲಿದೆ. ಈ ಬಗ್ಗೆ ಯೋಜನೆಯನ್ನು ಮಾಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು, ಶ್ರೀ ಕೃಷ್ಣಜನ್ಮಾಷ್ಟಮಿಯು ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನಾ ದಿನವಾಗಿದೆ.

ಗುಪ್ತಚರ ಇಲಾಖೆ ಮತ್ತು ಕೇಂದ್ರ ತನಿಖಾ ದಳ ಇವು ನ್ಯಾಯವ್ಯವಸ್ಥೆಗೆ ಸಹಾಯ ಮಾಡುತ್ತಿಲ್ಲ ! – ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿ

ಗುಪ್ತಚರ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳ ಇವು ನ್ಯಾಯವ್ಯವಸ್ಥೆಗೆ ಸ್ವಲ್ಪವೂ ಸಹಾಯ ಮಾಡುತ್ತಿಲ್ಲ. ಯಾವಾಗ ನ್ಯಾಯಾಧೀಶರು ದೂರು ನೀಡುತ್ತಾರೆ, ಆಗ ಅವರು ಪ್ರತಿಕ್ರಿಯಿಸುವುದಿಲ್ಲ, ಎಂಬ ಪದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿತು.

ಹಿಂದೂ ರಾಷ್ಟ್ರ ಸ್ಥಾಪನೆಗೆ ‘ಹಿಂದ ಸಾಮ್ರಾಜ್ಯ ಪಾರ್ಟಿ’ ಎಂಬ ರಾಜಕೀಯ ಪಕ್ಷ ಸ್ಥಾಪನೆ!

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿಶಂಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ‘ಹಿಂದ್ ಸಾಮ್ರಾಜ್ಯ ಪಾರ್ಟಿ’ ಎಂಬ ಪಕ್ಷವು ಅಧಿಕೃತವಾಗಿ ಸ್ಥಾಪನೆಯಾಗಿದೆ ಎಂದು ಘೋಷಿಸಲಾಯಿತು.

ದೆಹಲಿಯಲ್ಲಿ ಕಾನೂನುಬಾಹಿರವಾಗಿ ವಾಸ್ತವ್ಯವಿರುವ ನೈಜೀರಿಯಾದ ನೂರಕ್ಕಿಂತ ಹೆಚ್ಚುನಾಗರಿಕರು

ದೆಹಲಿಯಲ್ಲಿ ನೂರಕ್ಕೂ ಹೆಚ್ಚು ನೈಜೀರಿಯಾದ ನಾಗರಿಕರು ಕಾನೂನುಬಾಹಿರವಾಗಿ ವಾಸ್ತವ್ಯ ಮಾಡುತ್ತಿದ್ದಾರೆ. ಇವರುಗಳಲ್ಲಿ ಕೆಲವರು ವೈದ್ಯಕೀಯ, ಪ್ರವಾಸೀ ಇತ್ಯಾದಿ ವೀಸಾ ತೆಗೆದುಕೊಂಡು ಭಾರತದಲ್ಲಿ ಬಂದಿದ್ದರು. ಮತ್ತು ವೀಸಾದ ಅವಧಿ ಮುಗಿದ ನಂತರವೂ ಅವರು ದೆಹಲಿಯಲ್ಲಿಯೇ ವಾಸಿಸುತ್ತಿದ್ದಾರೆ.