ಹಿಂದುತ್ವನಿಷ್ಠ ನಾಯಕ ಪ್ರೀತ ಸಿಂಹ ಇವರಿಗೆ ಜಾಮೀನು

ದೆಹಲಿಯ ಜಂತರ ಮಂತರನ ಆಂದೋಲನದಲ್ಲಿ ತಥಾಕಥಿತ ಆಕ್ಷೇಪಾರ್ಹ ಘೋಷಣೆ ನೀಡಿದ ಪ್ರಕರಣ

ಪ್ರೀತ ಸಿಂಹ

ನವ ದೆಹಲಿ – ಇಲ್ಲಿಯ ಜಂತರ ಮಂತರನಲ್ಲಿ ಆಗಸ್ಟ್ ತಿಂಗಳಿನಲ್ಲಿ ‘ಭಾರತ ಜೋಡೊ ಆಂದೋಲನ’ದ ಸಮಯದಲ್ಲಿ ಮುಸಲ್ಮಾನರ ವಿರುದ್ಧ ತಥಾಕಥಿತ ಆಕ್ಷೇಪಾರ್ಹ ಘೋಷಣೆ ನೀಡಿದ ಪ್ರಕರಣದಲ್ಲಿ ಬಂಧಿಸಲಾದ ‘ಸೇವ್ ಇಂಡಿಯಾ ಫೌಂಡೇಶನ್’ನ ಅಧ್ಯಕ್ಷ ಪ್ರೀತ ಸಿಂಹ ಇವರನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಸಿಂಹ ಇವರ ನ್ಯಾಯವಾದಿ ವಿಷ್ಣುಶಂಕರ ಜೈನ ಇವರ ಯುಕ್ತಿ ವಾದದಿಂದ ನ್ಯಾಯಾಲಯವು ಇವರಿಗೆ ಜಾಮೀನು ನೀಡಿದೆ.

ಹಿಂದೂರಾಷ್ಟ್ರದ ಬೇಡಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಯೋಗ್ಯವಲ್ಲ !

ಹಿಂದಿನ ವಿಚಾರಣೆಯ ಸಮಯದಲ್ಲಿ ಪ್ರೀತ ಸಿಂಹ ಇವರು ತಾನು ಹೇಳಿದ ಹಿಂದೂ ರಾಷ್ಟ್ರದ ಬೇಡಿಕೆಯು ಯೋಗ್ಯವಾಗಿದೆ ಎಂದು ಹೇಳಿದ್ದರು. ಅವರು, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಎಂದರೆ ಧರ್ಮಗಳ ನಡುವೆ ಶತ್ರುತ್ವಕ್ಕೆ ಪ್ರೋತ್ಸಾಹ ನೀಡುವಂತಹದ್ದಲ್ಲ. ಆದ್ದರಿಂದ ನಾನು ನನ್ನ ಬೇಡಿಕೆಯ ಬಗ್ಗೆ ಬದ್ಧನಾಗಿದ್ದೇನೆ. ಇದು ನ್ಯಾಯಾಲಯಕ್ಕೆ ತಪ್ಪು ಎಂದೆನಿಸಿದರೆ, ನಾನು ಜಾಮೀನು ಕೇಳುವುದಿಲ್ಲ ಎಂದು ಹೇಳಿದ್ದರು.