ನವ ದೆಹಲಿ – ಹಿಂದೂ ಸೇನೆ ಸಂಘಟನೆಯ ಕಾರ್ಯಕರ್ತರು ಎಂ.ಐ.ಎಂ.ನ ಅಧ್ಯಕ್ಷ ಹಾಗೂ ಸಂಸದ ಅಸದುದ್ದಿನ್ ಓವೈಸಿ ಇವರ ಇಲ್ಲಿಯ ‘೨೪ ಅಶೋಕ ಮಾರ್ಗ’ ದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ ಹಾನಿಯನ್ನು ಉಂಟುಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೫ ಜನರನ್ನು ಬಂಧಿಸಿದ್ದಾರೆ. ಕಾರ್ಯಕರ್ತರು ಓವೈಸಿಯ ಮನೆಯ ಹೊರಗಡೆ ಹೆಸರಿನ ಫಲಕ, ದೀಪಗಳು ಮತ್ತು ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಹಿಂದೂ ಸೇನೆಯ ಅಧ್ಯಕ್ಷ ವಿಷ್ಣುಭಕ್ತ ಇವರು, ಅಸದುದ್ದಿನ ಓವೈಸಿ ಮತ್ತು ಅವರ ಸಹೋದರ ಅಕ್ಬರುದ್ದಿನ ಓವೈಸಿ ಇವರು ಈ ಮೊದಲು ಮಾಡಿರುವ ಹಿಂದೂದ್ವೇಷಿ ಹೇಳಿಕೆಗಳಿಂದ ಕಾರ್ಯಕರ್ತರು ಆಕ್ರೋಶಗೊಂಡು ದಾಳಿ ಮಾಡಿದ್ದಾರೆ. ಪ್ರಸಾರ ಮಾಧ್ಯಮದಲ್ಲಿ ಚರ್ಚೆಯಲ್ಲಿರಲು ಓವೈಸಿ ಸತತ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿರುತ್ತಾರೆ. ಆದ್ದರಿಂದ ಉತ್ತರಪ್ರದೇಶದಲ್ಲಿ ಅವರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಅವರ ಸಹೋದರನನ್ನೂ ಹಿಂದೂ ವಿರೋಧಿ ಹೇಳಿಕೆ ನೀಡಿದ ಕಾರಣ ಬಂಧಿಸಲಾಗಿತ್ತು. ಒಂದು ವಿಶಿಷ್ಟ ಧರ್ಮದ ಜನರಲ್ಲಿ ತನ್ನ ಪ್ರತಿಷ್ಠೆ ಕಾಯ್ದುಕೊಳ್ಳಲು ಓವೈಸಿ ಸತತ ಹಿಂದೂಗಳನ್ನು ಕೀಳಾಗಿ ನೋಡುತ್ತಾರೆ. ಓವೈಸಿ ತಮ್ಮ ಭಾಷಣಗಳಲ್ಲಿ ಹಿಂದೂ ವಿರೋಧಿ ಹೇಳಿಕೆ ನೀಡಬಾರದು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಯ ಜೊತೆ ಆಟವಾಡಬಾರದು ಎಂದು ಸಹ ವಿಷ್ಣು ಗುಪ್ತ ಅವರು ಕರೆ ನೀಡಿದರು.
#AsaduddinOwaisi के दिल्ली स्थित घर में हुई तोड़फोड़ मामले में पुलिस ने 5 लोगों को गिरफ्तार किया हैhttps://t.co/cXJIOCaljm
— AajTak (@aajtak) September 22, 2021
ಈ ಘಟನೆಗೆ ಭಾಜಪವೇ ಜವಾಬ್ದಾರ ! – ಸಂಸದ ಅಸದುದ್ದಿನ್ ಓವೈಸಿ
ಜನರು ಈ ಕಟ್ಟರತೆಗೆ ಭಾಜಪವೇ ಕಾರಣಕರ್ತವಾಗಿದೆ. ಒಬ್ಬ ಸಂಸದನ ಮನೆಯ ಮೇಲೆ ಈ ರೀತಿ ದಾಳಿಯಾಗುತ್ತದೆ ಎಂದರೆ, ಇದರಿಂದ ಯಾವ ಸಂದೇಶ ಹೋಗುತ್ತದೆ ?’, ಎಂದು ಓವೈಸಿಯವರು ದಾಳಿಯ ನಂತರ ಪ್ರಶ್ನಿಸಿದ್ದಾರೆ.