‘ಹಿಂದುತ್ವ ಫಾರ್ ಗ್ಲೋಬಲ್ ಗುಡ್’ (ಜಗತ್ತಿನ ಕಲ್ಯಾಣಕ್ಕಾಗಿ ಹಿಂದುತ್ವ) ಎಂಬ ಅಂತರಾಷ್ಟ್ರೀಯ ಪರಿಷತ್ತಿನ ಆಯೋಜನೆ !

‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಎಂಬ ಅಂತರಾಷ್ಟ್ರೀಯ ಪರಿಷತ್ತಿನ ಮಾಧ್ಯಮದಿಂದಾದ ಹಿಂದೂದ್ವೇಷಿ ಪ್ರಸಾರಕ್ಕೆ ಪ್ರತಿವಾದ ಮಾಡಲು ಈ ಪರಿಷತ್ತಿನ ಆಯೋಜನೆ !

ಹಿಂದೂ ದ್ವೇಷಗಳ ವೈಚಾರಿಕ ಭಯೋತ್ಪಾದನೆಯನ್ನು ತಡೆಯಲು ಪ್ರಯತ್ನಿಸುತ್ತಿರುವ ಹಿಂದುತ್ವನಿಷ್ಠ ಆಯೋಜಕರಿಗೆ ಅಭಿನಂದನೆಗಳು ! – ಸಂಪಾದಕರು

ಕಾರ್ಯಕ್ರಮವನ್ನು ನೋಡಲು ಲಿಂಕ್ 

ಈ ಪರಿಷತ್ತು ಅಕ್ಟೋಬರ್ 1 ರಿಂದ 3 ರವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ 8 ಗಂಟೆಯ ಸಮಯದಲ್ಲಿ ನಡೆಯಲಿದೆ. ಇದರ ನೇರ ಪ್ರಸಾರ

Live : fb.com/hindutvaforglobalgood  ಎಂಬ ಲಿಂಕ್ ನಲ್ಲಿ ಇರಲಿದೆ.  

ನವದೆಹಲಿ – ಅಮೆರಿಕದಲ್ಲಿನ ಹಿಂದೂದ್ವೇಷಿಗಳಿಂದ ಇತ್ತೀಚೆಗೆ ”ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ (ಜಾಗತಿಕ ಮಟ್ಟದಲ್ಲಿನ ಹಿಂದುತ್ವದ ಉಚ್ಚಾಟನೆ) ಎಂಬ ಅಂತರಾಷ್ಟ್ರೀಯ ‘ಆನ್ ಲೈನ್’ ಪರಿಷತ್ತಿನ ಮಾಧ್ಯಮದಿಂದ ಹಿಂದೂಗಳ ವಿರುದ್ಧ ದ್ವೇಷವನ್ನು ಹರಡಲಾಗಿತ್ತು. ಇದರಲ್ಲಿ ದೊಡ್ಡಪ್ರಮಾಣದಲ್ಲಿ ಹಿಂದೂಧರ್ಮ, ಹಿಂದುತ್ವನಿಷ್ಠ ಸಂಘಟನೆಗಳು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಿಷಕಾರಲಾಗಿತ್ತು. ಇದರಿಂದ ಉಂಟಾದ ಹಿಂದೂದ್ವೇಷದ ಕರಿನೆರಳಿನ ವಾತಾವರಣವನ್ನು ದೂರಗೊಳಿಸಿ ಹಿಂದುತ್ವದ ಚೈತನ್ಯವನ್ನು ನಿರ್ಮಾಣ ಮಾಡಲು ‘ಹಿಂದುತ್ವ ಫಾರ್ ಗ್ಲೋಬಲ್ ಗುಡ್ : ದಿ ಎಸೆನ್ಸ್ ಆಫ್ ಹಿಂದೂಯಿಸಂ’ ಅಂದರೆ ‘ಜಗತ್ತಿನ ಕಲ್ಯಾಣಕ್ಕಾಗಿ ಹಿಂದುತ್ವ: ಹಿಂದೂ ಧರ್ಮದ ಸಾರ’ ಎಂಬ ಅಂತರಾಷ್ಟ್ರೀಯ ಪರಿಷತ್ತನ್ನು ಆಯೋಜಿಸಲಾಗಿದೆ. ಈ ಮಧ್ಯಮದಿಂದ ಹಿಂದುತ್ವದ ಮಹತ್ವವನ್ನು ಜಗತ್ತಿನ ಎದುರು ಮಂಡಿಸಲಾಗುವುದು. ಅಕ್ಟೋಬರ್ 1 ರಿಂದ 3 ರವರೆಗೆ ನಡೆಯಲಿರುವ ಆನ್ ಲೈನ್ ಅಂತರಾಷ್ಟ್ರೀಯ ಪರಿಷತ್ತಿನಲ್ಲಿ 18 ಭಾಗಗಳನ್ನು ಆಯೋಜಿಸಲಾಗಿದೆ ಇವುಗಳನ್ನು ವಿವಿಧ ಕ್ಷೇತ್ರದಲ್ಲಿನ ಗಣ್ಯರು ಸಂಬೋಧಿಸಲಿದ್ದಾರೆ.

ಹಿಂದುತ್ವ ಫಾರ್ ಗ್ಲೋಬಲ್ ಗುಡ್ ಈ ಪರಿಷತ್ತನ್ನು ಸಂಬೋಧಿಸಲಿರುವ ಗೌರವಾನ್ವಿತರು !

1. ಡಾ. ಚಂದನ ಉಪಾಧ್ಯಾಯ, ಪ್ರಾಧ್ಯಾಪಕರು, ಬನಾರಸ್ ಹಿಂದೂ ವಿಶ್ವವಿದ್ಯಾಲಯ
2. ಡಾ. ಸಂಗೀತ ರಾಗಿ, ಪ್ರಾಧ್ಯಾಪಕರು, ದೆಹಲಿ ವಿಶ್ವವಿದ್ಯಾಲಯ
3. ಡಾ.ರತನ ಶಾರದಾ, ಲೇಖಕ ಮತ್ತು ಸ್ತಂಬ ಲೇಖಕರು
4. ಡಾ. ಸತ್ ಪ್ರಶರ, ಮಾಜಿ ಸಂಚಾಲಕರು, ಐಐಎಂ ಇಂದೂರ, ಮಧ್ಯಪ್ರದೇಶ
5. ಡಾ. ಓಮೆಂದ್ರ ರತ್ನು, ಜಯಪುರ, ರಾಜಸ್ಥಾನ
6. ಪ್ರಾ. ಸುಜಾತಾ ತ್ರಿಪಾಠಿ, ಲಾಲ ಬಹದ್ದೂರ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ
7. ಡಾ. ಕೆ. ಪರಮೇಶ್ವರನ್, ಪ್ರಾಧ್ಯಾಪಕರು, ಗುಜರಾತ ಕಾನೂನು ರಾಷ್ಟ್ರೀಯ ವಿಶ್ವವಿದ್ಯಾಲಯ
8. ಶ್ರೀ. ಆದಿತ್ಯ ಸತ್ಸಂಗಿ, ಸಂಸ್ಥಾಪಕರು, ಅಮೇರಿಕನ್ಸ್ ಫಾರ್ ಹಿಂದುಸ್
9. ಪ್ರಾ. ಡಾ. ಲಾವಣ್ಯ ವೇಮಸಾನಿ, ಶಾನಿ ಸ್ಟೇಟ್ ವಿಶ್ವವಿದ್ಯಾಲಯ, ಓಹಿಯೋ, ಅಮೇರಿಕಾ