ಪ್ರಧಾನಿ ಮೋದಿ ಅಮೇರಿಕಾ ಪ್ರವಾಸ !

ನವದೆಹಲಿ – ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ ೨೨ರಂದು ಅಮೇರಿಕಾದ ಪ್ರವಾಸಕ್ಕೆ ತೆರಳಿದರು. ಅವರ ಜೊತೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೊವಾಲ ಮತ್ತು ವಿದೇಶಾಂಗ ಸಚಿವ ಹರ್ಷ ಶೃಂಗಲಾ ಈ ಉನ್ನತ ಮಟ್ಟದ ಶಿಷ್ಟ ಮಂಡಲ ಸೇರಿವೆ. ೫ ದಿನದ ಅಮೇರಿಕಾ ಪ್ರವಾಸಕ್ಕಾಗಿ ಪ್ರಧಾನಿ ‘ಕ್ವಾಡ ಪರಿಷತ್ತು’ ಹಾಗೂ ಕೋವಿಡ್ ಜಾಗತಿಕ ಪರಿಷತ್ತಿನಲ್ಲಿಯೂ ಭಾಗವಹಿಸಲಿದ್ದಾರೆ ಹಾಗೂ ವಿಶ್ವಸಂಸ್ಥೆ ಮಹಾಸಭೆಯ ಅಧಿವೇಶನವನ್ನೂ ಸಂಬೋಧಿಸಿ ಮಾತನಾಡಲಿದ್ದಾರೆ. ಕೊರೊನಾ ಮಹಾಮಾರಿಯ ನಂತರ ಮೊದಲಬಾರಿಗೆ ಪ್ರಧಾನಿ ಮೋದಿ ಇವರು ದೀರ್ಘಪ್ರವಾಸ ಮಾಡುತ್ತಿದ್ದಾರೆ. ಈ ಪ್ರವಾಸದಲ್ಲಿ ಮೋದಿಯವರು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡನ ಇವರನ್ನು ಪ್ರತ್ಯಕ್ಷವಾಗಿ ಭೇಟಿಯಾಗಲಿದ್ದಾರೆ. ಕ್ವಾಡ ಪರಿಷತ್ತಿನಲ್ಲಿ, ಭಾರತ, ಅಮೇರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ ಈ ದೇಶಗಳು ಒಳಗೊಂಡಿವೆ.