ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಲ್ಲಿ ಬರುವ ಧಾರ್ಮಿಕ ಸ್ಥಳಗಳ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೇರಳ ಉಚ್ಚ ನ್ಯಾಯಾಲಯ !

ಕೇರಳದ ಕೊಲ್ಲಮ್ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ ರ ಅಗಲೀಕರಣದ ಕೆಲಸ ನಡೆಯುತ್ತಿರುವಾಗ ನಡುವೆ ಬರುತ್ತಿರುವ ಧಾರ್ಮಿಕ ಸ್ಥಳಗಳನ್ನು ರಕ್ಷಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ.

ಕೇರಳದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತರಿಗೆ ನೀಡಿದ ಅಲ್ಪಸಂಖ್ಯಾತ ಸ್ಥಾನದ ಬಗ್ಗೆ ಮರುಪರಿಶೀಲಿಸಬೇಕು ! – ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೇರಳದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರಿಗೆ ನೀಡಲಾಗಿರುವ ‘ಅಲ್ಪಸಂಖ್ಯಾತ’ ಸ್ಥಾನಮಾನದ ಬಗ್ಗೆ ಮರುಪರಿಶೀಲಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಆದೇಶ ನೀಡಬೇಕು, ಎಂದು ಅರ್ಜಿಯೊಂದನ್ನು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ಕಾವಡ ಯಾತ್ರೆಯ ಬಗ್ಗೆ ನೀಡಿದ ಆದೇಶದ ಉದಾಹರಣೆಯನ್ನು ಮುಂದಿಟ್ಟುಕೊಂಡು ನಿಯಮವನ್ನು ಪಾಲಿಸಿ !

ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ, ಜನರು ಅದನ್ನು ನಮ್ಮ ಗಮನಕ್ಕೆ ತಂದುಕೊಡಬಹುದು. ಅದನ್ನು ಪರಿಗಣಿಸಿ ಅದಕ್ಕನುಸಾರ ಕ್ರಮ ಕೈಗೊಳ್ಳಲಾಗುವುದು

‘ರಾತ್ರಿ ೯ ಗಂಟೆಯ ನಂತರ ಹೊರಬರುವ ಮಹಿಳೆಯರು ವೇಶ್ಯೆರಾಗಿದ್ದಾರೆ ಹಾಗಾಗಿ ಅವರನ್ನು ಕೊಲ್ಲಬೇಕು !'(ಅಂತೆ) – ಕೇರಳದ ‘ಇಸ್ಲಾಮಿಕ್ ವಿದ್ವಾಂಸರ’ ಫತ್ವಾ

ಇಂತಹ ಸಮಾಜ ವಿರೋಧಿ ಮತ್ತು ಹಿಂಸಾತ್ಮಕ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸರು ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ? ಅವರ ಮೇಲಧಿಕಾರಿಗಳು ಸಹ ಅಂತಹ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು !

ಗಾಂಜಾ ಮಾಫಿಯಾರಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ : ಓರ್ವ ಪೊಲೀಸ್ ಅಧಿಕಾರಿ ಗಾಯಾಳು

ಕುಟ್ಟಿಚಾಲದ ಬಳಿಯ ನೆಲ್ಲಿಕ್ಕುನ್ನುನಲ್ಲಿ ಗಾಂಜಾ ಮಾಫಿಯಾದಿಂದ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್‍ನಿಂದ ದಾಳಿ ಮಾಡಲಾಯಿತು. ಇದರಲ್ಲಿ ಟಿನೊ ಜೊಸೇಫ್ ಹೆಸರಿನ ಓರ್ವ ಪೊಲೀಸ ಅಧಿಕಾರಿ ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳದ ಮಾಕಪ್‍ನ ಯುವ ಶಾಖೆಯ ಕಾರ್ಯಕರ್ತನಿಂದ ೬ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ

ರಾಜ್ಯದ ಇಡುಕಿ ಜಿಲ್ಲೆಯಲ್ಲಿನ ಕಮ್ಯುನಿಸ್ಟ ಪಕ್ಷದ ಡೆಮೊಕ್ರೆಟಿಕ ಯುಥ ಫೆಡರೆಶನ್ ಆಫ್ ಇಂಡಿಯಾ ಈ ಯುವ ಶಾಖೆಯ ೨೨ ವರ್ಷದ ಕಾರ್ಯಕರ್ತ ಅರ್ಜುನ ಇವನನ್ನು ೬ ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.

ಕೇರಳ ವಿಧಾನಸಭೆಯಲ್ಲಿ ಹಾನಿಯನ್ನುಂಟು ಮಾಡಿದ ಶಾಸಕರ ಮೇಲಿನ ಖಟ್ಲೆಯನ್ನು ಹಿಂಪಡೆಯಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ !

೨೦೧೫ ರಂದು ಕೇರಳ ವಿಧಾನಸಭೆಯಲ್ಲಿ ಲೆಫ್ಟ ಡೆಮೊಕ್ರೆಟಿಕ್ ಫ್ರಂಟ್‍ನ (ಎಲ್.ಡಿ.ಎಫ್.ನ) ಶಾಸಕರಿಂದ ಆಗಿದ್ದ ಹಾನಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಅವರ ಮೇಲಿನ ಖಟ್ಲೆಯನ್ನು ಹಿಂಪಡೆಯುವಂತೆ ಆದೇಶಿಸುವುದನ್ನು ನಿರಾಕರಿಸಿದೆ. ಈ ಬಗ್ಗೆ ಮುಂದಿನ ಆಲಿಕೆ ಜುಲೈ ೧೫ ರಂದು ನಡೆಯಲಿದೆ.

ಭಾರತದ ಪ್ರಪ್ರಥಮ ಸ್ವದೇಶಿ ವಿಮಾನವಾಹಕ ಯುದ್ಧನೌಕೆಯು ಜುಲೈ ೨೦೨೧ ರಿಂದ ಕಾರ್ಯನಿರ್ವಹಿಸಲಿದೆ ! – ರಕ್ಷಣಾಸಚಿವ ರಾಜನಾಥ ಸಿಂಗ್

ಮುಂದಿನ ವರ್ಷ ಭಾರತವು ಸ್ವತಂತ್ರವಾಗಿ ೭೫ ವರ್ಷ ಪೂರ್ಣಗೊಳ್ಳುತ್ತಿರುವಾಗ ಈ ಯುದ್ಧನೌಕೆ ನಿರ್ಮಾಣವಾಗುವುದು ಮಹತ್ವದ ಅಂಶವಾಗಿದೆ. ಈ ಯುದ್ಧನೌಕೆಯ ಮಾರಕ ಶಕ್ತಿಯು ಅಗಾಧವಾಗಿದ್ದು ಅದು ವೈವಿಧ್ಯಮಯವಾಗಿದೆ. ಭಾರತದ ರಕ್ಷಣೆಯ ಕ್ಷಮತೆಯು ಇದರಿಂದ ಹೆಚ್ಚಾಗಲಿದೆ.

ಹೆಂಡತಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವುದನ್ನು ವಿರೋಧಿಸಲು ಸಹಾಯ ಕೇಳಿದ ಕ್ರೈಸ್ತ ಕಾರ್ಯಕರ್ತನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ !

ರಾಜ್ಯದ ಆಡಳಿತಾರೂಢ ಮಾಕಪವು ತನ್ನ ಕ್ರೈಸ್ತ ಕಾರ್ಯಕರ್ತ ಪಿ.ಟಿ. ಗಿಲ್‍ಬರ್ಟ್ ಇವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಆತ ತನ್ನ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಇಸ್ಲಾಂನಲ್ಲಿ ಮತಾಂತರಿಸಿದ ಬಗ್ಗೆ ವಿರೋಧಿಸಿದ್ದರಿಂದ ಆತನನ್ನು ಪಕ್ಷದಿಂದ ತೆಗೆದುಹಾಕುವ ಕ್ರಮ ಕೈಗೊಳ್ಳಲಾಗಿದೆ. ಆತನು ಮತಾಂತರದ ವಿರುದ್ಧ ದೂರನ್ನು ದಾಖಲಿಸಿದ್ದನು.

ಕಾಂಗ್ರೆಸ್ ಸಂಸದ ಸುಧಾಕರನ್ ೫೦ ವರ್ಷಗಳ ಹಿಂದೆ ನನ್ನ ಮಕ್ಕಳನ್ನು ಅಪಹರಿಸುವ ಸಂಚು ರೂಪಿಸಿದ್ದರು ! – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರೋಪ

ವಿಜಯನ್ ಅವರು ಆರೋಪ ಮಾಡುವಾಗ ಕಾಂಗ್ರೆಸ್ ಮುಖಂಡ ಪಿ. ರಾಮಕೃಷ್ಣನ್ ಮತ್ತು ಎಂ. ದಿವಾಕರನ್ ಸ್ವತಃ ಸುಧಾಕರನ್ ಅವರನ್ನು ಭ್ರಷ್ಟ, ಕೊಲೆಗಾರ ಮತ್ತು ಅಪಹರಣಕಾರ ಎಂದು ಹೇಳಿದ್ದರು. ಕಣ್ಣೂರಿನಲ್ಲಿ ಪಕ್ಷದ ಕಚೇರಿ ನಿರ್ಮಾಣದ ವೇಳೆ ಸುಧಾಕರನ್ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದೆ ಎಂದೂ ಹೇಳಿದರು.