ಕಾಂಗ್ರೆಸ್ ಸಂಸದ ಸುಧಾಕರನ್ ೫೦ ವರ್ಷಗಳ ಹಿಂದೆ ನನ್ನ ಮಕ್ಕಳನ್ನು ಅಪಹರಿಸುವ ಸಂಚು ರೂಪಿಸಿದ್ದರು ! – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರೋಪ

ಒಂದುವೇಳೆ ಇಂತಹ ಪಿತೂರಿ ನಡೆದಿದ್ದರೆ, ವಿಜಯನ್ ಅವರು ಆಗಲೇ ಅಥವಾ ಈಗಲೂ ಮುಖ್ಯಮಂತ್ರಿ ಆಗಿರುವಾಗ ಪೊಲೀಸರಿಗೆ ಏಕೆ ದೂರು ನೀಡಲಿಲ್ಲ ? ಅಥವಾ ಅವರು ಈಗ ರಾಜಕೀಯ ಲಾಭಕ್ಕಾಗಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆಯೇ ?

(ಎಡದಿಂದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸುಧಾಕರನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್)

ಕಣ್ಣೂರು (ಕೇರಳ) – ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಸಂಸದ ಕೆ. ಸುಧಾಕರನ್ ಇವರು ೫೦ ವರ್ಷಗಳ ಹಿಂದೆ ನನ್ನ ಮಕ್ಕಳನ್ನು ಅಪಹರಿಸಲು ಸಂಚು ರೂಪಿಸಿದ್ದರು ಎಂದು ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ಸುಧಾಕರನ್ ಅವರ ಒಂದು ಸಂದರ್ಶನದ ಬಗ್ಗೆ ಪ್ರತಿಕ್ರಿಯಿಸುವಾಗ ವಿಜಯನ್ ಈ ಆರೋಪ ಮಾಡಿದ್ದಾರೆ.

೧. ಮುಖ್ಯಮಂತ್ರಿ ವಿಜಯನ್ ಅವರು, ೧೯೭೦ ರ ದಶಕದಲ್ಲಿ ನಾನು ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡ ಮತ್ತು ಸುಧಾಕರನ್ ಅವರ ಸ್ನೇಹಿತರೊಬ್ಬರು ಸುಧಾಕರನ್ ನನ್ನ ಮಕ್ಕಳನ್ನು ಅಪಹರಿಸಲು ಯೋಜಿಸುತ್ತಿದ್ದಾನೆ ಎಂದು ನನಗೆ ಜಾಗರೂಕತೆಯಿಂದ ಇರಲು ಹೇಳಲಾಯಿತು. ನನ್ನ ಮಕ್ಕಳು ಚಿಕ್ಕವರಾಗಿದ್ದರು. ಈ ಸಂಚಿನ ಬಗ್ಗೆ ನಾನು ನನ್ನ ಹೆಂಡತಿಗೆ ಏನನ್ನೂ ಹೇಳಲಿಲ್ಲ.

೨. ಸಂದರ್ಶನದಲ್ಲಿ ಮಾಹಿತಿ ನೀಡುವಾಗ ಸುಧಾಕರನ್ ಇವರು, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ರಾಜಕೀಯ ಹೋರಾಟದ ಸಮಯದಲ್ಲಿ ನಾನು ವಿಜಯನ್ ಅವರನ್ನು ಹೊಡೆದಿದ್ದೆ ಎಂದು ಹೇಳಿದ್ದರು.

. ಈ ಘಟನೆಗೆ ಪ್ರತಿಕ್ರಿಯಿಸಿದ ವಿಜಯನ್, ಸುಧಾಕರನ್ ಸುಳ್ಳು ಹೇಳಿದ್ದಾನೆ. ಅವರು ಕನಸಿನಲ್ಲಿ ಥಳಿಸಿರಬಹುದು ಎಂದು ಹೇಳಿದ್ದರು

. ವಿಜಯನ್ ಅವರು ಆರೋಪ ಮಾಡುವಾಗ ಕಾಂಗ್ರೆಸ್ ಮುಖಂಡ ಪಿ. ರಾಮಕೃಷ್ಣನ್ ಮತ್ತು ಎಂ. ದಿವಾಕರನ್ ಸ್ವತಃ ಸುಧಾಕರನ್ ಅವರನ್ನು ಭ್ರಷ್ಟ, ಕೊಲೆಗಾರ ಮತ್ತು ಅಪಹರಣಕಾರ ಎಂದು ಹೇಳಿದ್ದರು. ಕಣ್ಣೂರಿನಲ್ಲಿ ಪಕ್ಷದ ಕಚೇರಿ ನಿರ್ಮಾಣದ ವೇಳೆ ಸುಧಾಕರನ್ ಅವರ ಮೇಲೆ ಭ್ರಷ್ಟಾಚಾರದ ಆರೋಪವಿದೆ ಎಂದೂ ಹೇಳಿದರು. (ಅಂತಹ ಆರೋಪಗಳಿದ್ದರೆ, ಮುಖ್ಯಮಂತ್ರಿಯಾಗಿರುವ ವಿಜಯನ್ ಈ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಏಕೆ ಆದೇಶಿಸಲಿಲ್ಲ ? – ಸಂಪಾದಕ)