‘ರಾತ್ರಿ ೯ ಗಂಟೆಯ ನಂತರ ಹೊರಬರುವ ಮಹಿಳೆಯರು ವೇಶ್ಯೆರಾಗಿದ್ದಾರೆ ಹಾಗಾಗಿ ಅವರನ್ನು ಕೊಲ್ಲಬೇಕು !'(ಅಂತೆ) – ಕೇರಳದ ‘ಇಸ್ಲಾಮಿಕ್ ವಿದ್ವಾಂಸರ’ ಫತ್ವಾ

ಪೊಲೀಸರಿಂದ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ !

* ಈ ಬಗ್ಗೆ ಮಹಿಳಾ ಆಯೋಗ, ಮಹಿಳಾ ಸ್ವಾತಂತ್ರ್ಯವಾದಿ ಸಂಘಟನೆಗಳು ಇವರೆಲ್ಲ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ ? ದೇವಾಲಯ ಪ್ರವೇಶದ ವಿಷಯದಲ್ಲಿ ಮಹಿಳೆಯರ ಹಕ್ಕುಗಳ ನೆನಪಾಗುವ ಸ್ತ್ರೀವಾದಿಗಳು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ ? ಅಥವಾ ಅವರೆಲ್ಲರಿಗೆ ಇದು ಮಹಿಳೆಯರ ಅವಮಾನವೆಂದು ಅನಿಸುವುದಿಲ್ಲವೇ ?

* ಓರ್ವ ನಟಿಯು ಇತ್ತೀಚೆಗೆ ವಿಡಿಯೋ ಪ್ರಸಾರ ಮಾಡಿದ ನಂತರ, ವೀಕ್ಷಕರು ವ್ಯವಸ್ಥಿತ ಬಟ್ಟೆಗಳನ್ನು ಧರಿಸಲು ಸಲಹೆ ನೀಡಿದರು. ಈ ಬಗ್ಗೆ, ಕೆಲವು ಸುಧಾರಣಾವಾದಿ ಕಲಾವಿದರು, ಮಾಧ್ಯಮಗಳು ‘ಮಹಿಳಾ ಸ್ವಾತಂತ್ರ್ಯದ ಕತ್ತು ಹಿಸುಕಲಾಗುತ್ತಿದೆ’, ಎಂದು ಕೂಗಾಡುತ್ತಾ ಸಲಹೆಗಾರರನ್ನು ದೂಷಿಸಿದರು ! ಇಂತಹ ಕಲಾವಿದರು, ಮಾಧ್ಯಮಗಳು ಈಗ ಈ `ಇಸ್ಲಾಮಿಕ್ ವಿದ್ವಾಂಸರ’ ವಿರುದ್ಧ ಮಾತನಾಡಲು ಧೈರ್ಯಮಾಡುತ್ತವೆಯೇ ?

* ಇಂತಹ ಸಮಾಜ ವಿರೋಧಿ ಮತ್ತು ಹಿಂಸಾತ್ಮಕ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸರು ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ? ಅವರ ಮೇಲಧಿಕಾರಿಗಳು ಸಹ ಅಂತಹ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು !

ತಿರುವನಂತಪುರಂ : ಕೇರಳದ ‘ಇಸ್ಲಾಮಿಕ್ ವಿದ್ವಾಂಸ’ ಸಲಿಹ್ ಬಥೆರಿ ಅವರು ಫತ್ವಾ ಹೊರಡಿಸಿದ್ದು, ರಾತ್ರಿ ೯ ಗಂಟೆಯ ನಂತರ ಹೊರಗೆ ಹೋಗುವ ಮಹಿಳೆಯರು ವೇಶ್ಯೆಯರಾಗಿದ್ದು ಅವರನ್ನು ಕೊಲ್ಲಬೇಕು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಅವರು ‘ವಿಡಿಯೋ’ ಪ್ರಸಾರ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಕೇರಳದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಗೋವಿಂದಚಾಮಿಗೆ ಶಿಕ್ಷೆ ನೀಡಲಾಗಿತ್ತು. ಸಲಿಹ್ ಪ್ರಸಾರ ಮಾಡಿದ ಅವರ ವೀಡಿಯೊದಲ್ಲಿ ಅತ್ಯಾಚಾರಿ ಗೋವಿಂದಚಾಮಿಗೆ ಸಮರ್ಥನೆ ನೀಡಿದ್ದಾರೆ. ಗೋವಿಂದಚಾಮಿ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಹತ್ಯೆ ಮಾಡಿದ್ದನು. ಆ ಸಮಯದಲ್ಲಿ ಗೋವಿಂದಚಾಮಿ, ‘ಹುಡುಗಿ ರಾತ್ರಿಯಲ್ಲಿ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದಳು ಮತ್ತು ರಾತ್ರಿಯಲ್ಲಿ ಪ್ರಯಾಣಿಸುವ ಪ್ರತಿ ಹುಡುಗಿಯೂ ವೇಶ್ಯೆಯೇ ಆಗಿರುತ್ತಾಳೆ’ ಎಂದು ಹೇಳಿದ್ದನು. ಈ ಸಮಯದಲ್ಲಿ ಗೋವಿಂದಚಾಮಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರನ್ನು ಸಹ ಸಲಿಹ್ ಟೀಕಿಸಿದ್ದಾನೆ. ಈ ಪ್ರಕರಣದಲ್ಲಿ ಸಲಿಹ್ ವಿರುದ್ಧ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. (ಕಮ್ಯುನಿಸ್ಟ್ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿ ಪೊಲೀಸರು ಅಲ್ಪಸಂಖ್ಯಾತರ ಓಲೈಕೆ ಮಾಡಿದರೆ ಆಶ್ಚರ್ಯವೇ ? – ಸಂಪಾದಕರು)