ಬಕರಿ ಈದ್‌ಗಾಗಿ ನಿರ್ಬಂಧವನ್ನು ಸಡಿಲಗೊಳಿಸಿದ ಕೇರಳ ಸರಕಾರಕ್ಕೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ !
ಯಾವುದೇ ಅಹಿತಕರ ಘಟನೆ ನಡೆದರೆ, ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ !
ನವ ದೆಹಲಿ – ಯಾವುದೇ ರೀತಿಯ ಒತ್ತಡಕ್ಕೆ ಮಣಿದು ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಯಾವುದೇ ರೀತಿಯ ಅಹಿತಕರ ಘಟನೆ ನಡೆದರೆ, ಜನರು ಅದನ್ನು ನಮ್ಮ ಗಮನಕ್ಕೆ ತಂದುಕೊಡಬಹುದು. ಅದನ್ನು ಪರಿಗಣಿಸಿ ಅದಕ್ಕನುಸಾರ ಕ್ರಮ ಕೈಗೊಳ್ಳಲಾಗುವುದು, ಎಂಬ ಪದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಕೇರಳ ಸರಕಾರಕ್ಕೆ ಬಕರಿ ಈದ್‌ಗಾಗಿ ಕೊರೊನಾದ ನಿಯಮಗಳಲ್ಲಿ ಸಡಲಿಕೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ನ್ಯಾಯಾಲಯವು ಕೇರಳ ಸರಕಾರಕ್ಕೆ ಕಾವಡ ಯಾತ್ರೆಯ ಬಗ್ಗೆ ನೀಡಿದ ಆದೇಶದ ಉದಾಹರಣೆಯನ್ನು ಮುಂದಿಟ್ಟು ಬಕರಿ ಈದ್‌ನಲ್ಲೂ ಈ ನಿಯಮಗಳನ್ನು ಪಾಲಿಸುವಂತೆ ಆದೇಶವನ್ನು ನೀಡಿದೆ. ಕೇರಳ ಸರಕಾರವು ಈ ಸಮಯದಲ್ಲಿ ‘ನಿರ್ಬಂಧ ಸಡಿಲಗೊಳಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ’, ಎಂಬ ಯುಕ್ತಿವಾದವನ್ನು ಮಾಡಿತ್ತು. ‘ಹಬ್ಬ ಹರಿದಿನಗಳಲ್ಲಿ ನಮ್ಮ ಅಂಗಡಿಗಳು ತೆರೆದರೆ ನಿರ್ಬಂಧದ ಸಮಯದಲ್ಲಿ ತಗಲಿದ್ದ ಆರ್ಥಿಕ ಬಿಕ್ಕಟ್ಟಿನಿಂದ ಸ್ವಲ್ಪ ಮಟ್ಟಿಗಾದರೂ ಹೊರಬರಬಹುದು’, ಎಂದೂ ವ್ಯಾಪಾರಿಗಳ ಹೇಳಿಕೆಯಾಗಿದೆ ಎಂದು ಸರಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಬಗ್ಗೆ ನ್ಯಾಯಾಲಯವು ಸರಕಾರಕ್ಕೆ ಚಾಟಿ ಬೀಸಿದೆ. ದೆಹಲಿಯ ಓರ್ವ ನಾಗರಿಕನು ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಾ ‘ನ್ಯಾಯಾಲಯವು ಇದರಲ್ಲಿ ಮಧ್ಯಸ್ಥಿಕೆ ಮಹಿಸಬೇಕು’, ಎಂದು ವಿನಂತಿಸಿದ್ದರು. ಇತರ ರಾಜ್ಯಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿರುವಾಗ ಕೇರಳದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ, ಎಂದೂ ಕೂಡ ಅರ್ಜಿಯಲ್ಲಿ ನಮೂದಿಸಲಾಗಿತ್ತು. ಕೇರಳ ಸರಕಾರವು ಜುಲೈ ೧೮, ೧೯ ಮತ್ತು ೨೦ ಈ ಮೂರು ದಿನ ಬಕರಿ ಈದ್ ನಿಮಿತ್ತ ಸಂಚಾರಬಂದಿಯ ನಿರ್ಬಂಧವನ್ನು ಸಡಿಲ ಗೊಳಿಸಿತ್ತು.
Supreme Court comes down heavily on Kerala government – https://t.co/p1xcF7XbXR
— PGurus (@pGurus1) July 20, 2021
೧. ‘ವ್ಯಾಪಾರಿಗಳು ಸರಕನ್ನು ಸಂಗ್ರಹಿಸಿದ್ದು ನಿರ್ಬಂಧವನ್ನು ಸಡಿಲ ಗೊಳಿಸದಿದ್ದರೂ, ನಾವು ಅಂಗಡಿಯನ್ನು ತೆರೆಯುವೆವು ಎಂದು ಎಚ್ಚರಿಕೆಯನ್ನು ನೀಡಿರುವ ಬಗ್ಗೆ ಕೇರಳ ಸರಕಾರವು ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. (ವ್ಯಾಪಾರಿಗಳು ಸರಕಾರಕ್ಕೆ ಈ ರೀತಿಯ ಬೆದರಿಕೆಯನ್ನು ನೀಡುತ್ತಾರೆ ಹಾಗೂ ಸರಕಾರವು ಅದನ್ನು ಸುಮ್ಮನೆ ಸ್ವೀಕಾರ ಮಾಡುತ್ತದೆ ಎಂದು ಹೀಗೆ ಹೇಳಲು ಸಾಧ್ಯವಿಲ್ಲ. ಕೇರಳದಲ್ಲಿ ಮುಸಲ್ಮಾನ ಪ್ರೇಮಿ ಕಮ್ಯುನಿಸ್ಟ ಸರಕಾರಕ್ಕೆ ಮುಸಲ್ಮಾನರಿಗೆ ಸಡಲಿಕೆ ನೀಡುವ ಇಚ್ಛೆ ಇದ್ದುದರಿಂದಲೇ ಅದು ವ್ಯಾಪಾರಿಗಳ ಮೇಲೆ ಹೊರಿಸಲು ಪ್ರಯತ್ನಿಸುತ್ತಿದೆ, ಇದನ್ನು ಅರ್ಥ ಮಾಡಿಕೊಳ್ಳದಷ್ಟು ಹಿಂದೂಗಳು ದಡ್ಡರಲ್ಲ ! – ಸಂಪಾದಕರು)
೨. ಜುಲೈ ೨೦ ರಂದು ನಿರ್ಬಂಧ ಸಡಿಲ ಗೊಳಿಸುವ ಕೊನೆಯ ದಿನವಾಗಿದ್ದರಿಂದ ಹಾಗೂ ಅದೇ ದಿನ ಆಲಿಕೆ ಆಗಿದ್ದರಿಂದ ಈ ಬಗ್ಗೆ ಆದೇಶ ನೀಡಲು ನಿರಾಕರಿಸಲಾಯಿತು. ‘ಇಂದು ಆದೇಶ ನೀಡಿದರೆ ಅದಕ್ಕೆ ಯವುದೇ ಅರ್ಥವಿಲ್ಲ’, ಎಂದು ನ್ಯಾಯಾಲಯವು ಈ ಸಮಯದಲ್ಲಿ ಹೇಳಿತು. (ಈ ರೀತಿಯ ಸಡಿಲಿಕೆ ನೀಡಿದರೆ ನ್ಯಾಯಾಲಯವು ಕೇರಳ ಸರಕಾರಕ್ಕೆ ದಂಡ ವಿಧಿಸಬೇಕಿತ್ತು, ಎಂದು ಜನರಿಗೆ ಅನಿಸುತ್ತದೆ ! -ಸಂಪಾದಕರು)
೩. ಜುಲೈ ೧೯ ರಂದು ನಡೆದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯವು, ವೈದ್ಯಕೀಯ ತುರ್ತು ಇರುವಂತಹ ಸಮಯದಲ್ಲಿ ನಿರ್ಬಂಧದಲ್ಲಿ ಸಡಿಲಿಕೆ ನೀಡುವ ಕೇರಳ ಸರಕಾರದ ನಿರ್ಧಾರವು ಆಶ್ಚರ್ಯಕರವಾಗಿದೆ. ಸರಕಾರವು ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಇಂತಹ ಗಂಭೀರ ಕಾಲದಲ್ಲಿ ಸರಕಾರವು ಜನರನ್ನು ಸಾವಿನ ದವಡೆಯಲ್ಲಿ ತಳ್ಳಲು ಸಿದ್ಧತೆಯನ್ನು ಮಾಡುತ್ತಿದೆ ಎಂದು ಅನಿಸುತ್ತದೆ ಎಂದು ಹೇಳಿತ್ತು.