ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರೊಂದಿಗೆ ೩೫ ನಿಮಿಷಗಳ ವರೆಗೆ ಮಾತುಕತೆ ನಡೆಸಿದರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೊದಿಮಿರ ಝೆಲೆಂಸ್ಕಿಯವರೊಂದಿಗೆ ದೂರವಾಣಿ ಮುಖಾಂತರ ೩೫ ನಿಮಿಷಗಳ ವರೆಗೆ ಚರ್ಚಿಸಿದರು. ಇಬ್ಬರೂ ಮುಖಂಡರು ಉಕ್ರೇನನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದರು.

ನಮ್ಮ ಬೇಡಿಕೆ ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆ ನಿಲ್ಲಿಸುವೆವು ! – ಪುತಿನ್

ನಮ್ಮ ಬೇಡಿಕೆಗಳು ಒಪ್ಪಿದರೆ, ಮಾತ್ರ ಉಕ್ರೇನಿನ ಮೇಲಿನ ಸೈನ್ಯ ಕಾರ್ಯಾಚರಣೆಯನ್ನು ನಿಲ್ಲಿಸುವೆವು, ಎಂದು ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಇವರು ಹೇಳಿದರು. ರಷ್ಯಾ ಫೆಬ್ರವರಿ ೨೪, ೨೦೨೨ ರಿಂದ ಉಕ್ರೆನಿನ ಮೇಲೆ ದಾಳಿ ಆರಂಭಿಸಿತ್ತು.

ರಶಿಯಾದ ಮೇಲೆ ಹೇರಿರುವ ನಿರ್ಬಂಧ ಯುದ್ಧದ ಘೋಷಣೆಯಂತಿದೆ

ಪಾಶ್ಚಿಮಾತ್ಯ ದೇಶಗಳಿಂದ ಅವರ ದೇಶದ ಮೇಲೆ ಹೇರಲಾಗಿರುವ ನಿರ್ಬಂಧವು ಯುದ್ಧದ ಘೋಷಣೆಯಂತಿದೆ ಎಂದು ರಶಿಯಾ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಹೇಳಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಉಕ್ರೇನ್‍ನಲ್ಲಿ ಇನ್ನೂ ಕೆಟ್ಟ ಕಾಲ ಬರಲಿದೆ ! – ಫ್ರಾನ್ಸ್‍ನ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್

ಫ್ರಾನ್ಸ್‍ನ ರಾಷ್ಟ್ರಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಇವರು ರಷ್ಯಾದ ರಾಷ್ಟ್ರಧ್ಯಕ್ಷ ವ್ಲಾದಿಮಿರ ಪುತಿನ್ ಇವರ ಜೊತೆಗೆ ಸಂಚಾರ ವಾಣಿಯಲ್ಲಿ 90 ನಿಮಿಷ ಚರ್ಚೆ ನಡೆಸಿದನಂತರ `ಉಕ್ರೇನ್ ನಲ್ಲಿ ನಿನ್ನ ಕೆಟ್ಟ ಕಾಲ ಬರಲಿದೆ,’ ಎಂಬ ಎಚ್ಚರಿಕೆ ನೀಡಿದರು.

ರಷ್ಯಾದ ಸೈನಿಕರು ಖಾರಕಿವದಲ್ಲಿನ ಸೇನಾ ಆಸ್ಪತ್ರೆಯ ಮೇಲೆ ದಾಳಿ

ಯುಕ್ರೇನ್‌ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್‌ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು.

ಪುತಿನ್ ಅವರ ಕುಟುಂಬವು ಸೈಬೇರಿಯಾದ ಶಿಬಿರದಲ್ಲಿ ಅಡಗಿದ್ದಾರೆ !

ರಷ್ಯಾದಲ್ಲಿಯ `ಮಾಸ್ಕೋ ಸ್ಟೇಟ್ ಇನಸ್ಟಿಟ್ಯುಟ್ ಆಫ್ ಇಂಟರನ್ಯಾಷನಲ್ ರಿಲೇಶನ್’ ನ ಪ್ರಾಧ್ಯಾಪಕ ವಾಲೆರಿ ಸೊಲೊವಿ ಇವರ ಹೇಳಿಕೆಯ ಪ್ರಕಾರ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ತಮ್ಮ ಕುಟುಂಬವನ್ನು ಸೈಬೇರಿಯಾದಲ್ಲಿಯ ಅಲ್ತಾಯಿ ಪರ್ವತದಲ್ಲಿರುವ ಶಿಬಿರದಲ್ಲಿ ಅಡಗಿಸಿಟ್ಟಿದ್ದಾರೆ.

ಅಮೇರಿಕದಿಂದ ರಶಿಯಾದ ರಾಷ್ಟ್ರಾಧ್ಯಕ್ಷ ಪುತಿನರ ಮೇಲೆ ವೈಯಕ್ತಿಕ ನಿರ್ಬಂಧ

ರಶಿಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ವಿದೇಶಮಂತ್ರಿ ಸೆರಗೆ ಲಾವಹರೋವಹ ಇವರನ್ನು ರಶಿಯಾದ ಯುಕ್ರೆನ್ ಮೇಲಿನ ಆಕ್ರಮಣಕ್ಕಾಗಿ ನೇರ ಜವಾಬ್ದಾರಿಯನ್ನು ಮಾಡಿ ಅಮೇರಿಕವು ಅವರ ಮೇಲೆ ವೈಯಕ್ತಿಕ ನಿರ್ಬಂಧವನ್ನು ಹಾಕಿದೆ.

ಪುತಿನ್ ಇವರು ಜೋ ಬಾಯಿಡೆನರನ್ನು ಡೋಲಿನಂತೆ ಬಾರಿಸುತ್ತಿದ್ದಾರೆ – ಅಮೇರಿಕದ ಮಾಜಿ ರಾಷ್ಟ್ರಧ್ಯಕ್ಷ ಡೋನಾಲ್ಡ ಟ್ರಂಪ್‍ರ ಟೀಕೆ

ನನ್ನ ಆಡಳಿತಾವಧಿಯಲ್ಲಿ ಯುದ್ಧವಾಗಲಿಲ್ಲ. ನಾನು ಅಮೇರಿಕವನ್ನು ಯುದ್ಧದಿಂದ ಹೊರತೆಗೆದೆನು. ದುರ್ಬಲ ರಾಷ್ಟ್ರಾಧ್ಯಕ್ಷರಿಂದ ಈ ಜಗತ್ತು ಯಾವಾಗಲೂ ಹೆದರಿಕೆಯ ನೆರಳಲ್ಲಿಯೇ ಇರುವುದು ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್‍ರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು

ಚೀನಾ ರಷ್ಯಾದ ಗೋದಿಯನ್ನು ಆಮದು ಮಾಡಿಕೊಳ್ಳುವುದರ ಮೇಲೆ ಹಾಕಿರುವ ನಿರ್ಬಂಧ ತೆರವುಗೊಳಿಸಿತು !

ಯುಕ್ರೇನ್ ಮೇಲೆ ಆಕ್ರಮಣ ನಡೆಸಿದ್ದರಿಂದ ಅಮೇರಿಕಾ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳಿಂದ ರಷ್ಯಾದ ಮೇಲೆ ನಿರ್ಬಂಧ ಹೇರುವ ಬಗ್ಗೆ ಕೃತಿ ಮಾಡುತ್ತಿರುವಾಗ ಚೀನಾ ಮಾತ್ರ ರಷ್ಯಾದ ಗೋದಿಯನ್ನು ಆಮದು ಮಾಡುವುದರ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.

ಮಹಮ್ಮದ ಪೈಗಂಬರರ ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆನಿಸುವುದಿಲ್ಲ!- ರಷ್ಯಾದ ರಾಷ್ಟ್ರಪತಿ ವ್ಲಾದಿಮಿರ್ ಪುಟಿನ್

ಕೇವಲ ಪೈಗಂಬರ ಅಷ್ಟೇ ಅಲ್ಲ, ಯಾವುದೇ ಧರ್ಮದ ಶ್ರದ್ಧಾಸ್ಥಾನದ ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆನಿಸುವುದಿಲ್ಲ ಎಂದು ಪುಟಿನ್ ಇವರು ಹೇಳಬೇಕಾಗಿತ್ತು! ಕಾರಣ ಮತಾಂಧರು ಹಿಂದೂಗಳು, ಸಿಖ್, ಕ್ರಿಶ್ಚಿಯನ್ ಮುಂತಾದ ಧರ್ಮದವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದ್ದಾರೆ.