ಚೀನಾ ರಷ್ಯಾದ ಗೋದಿಯನ್ನು ಆಮದು ಮಾಡಿಕೊಳ್ಳುವುದರ ಮೇಲೆ ಹಾಕಿರುವ ನಿರ್ಬಂಧ ತೆರವುಗೊಳಿಸಿತು !

ರಷ್ಯಾದ ರಾಷ್ಟ್ರಧ್ಯಕ್ಷ ಪುತಿನ್ ಮತ್ತು ಚೀನಾದ ಅಧ್ಯಕ್ಷ ಶೀ-ಜಿನಪಿಂಗ್

ಬಿಜಿಂಗ – ಯುಕ್ರೇನ್ ಮೇಲೆ ಆಕ್ರಮಣ ನಡೆಸಿದ್ದರಿಂದ ಅಮೇರಿಕಾ, ಬ್ರಿಟನ್ ಹಾಗೂ ಯುರೋಪಿಯನ್ ದೇಶಗಳಿಂದ ರಷ್ಯಾದ ಮೇಲೆ ನಿರ್ಬಂಧ ಹೇರುವ ಬಗ್ಗೆ ಕೃತಿ ಮಾಡುತ್ತಿರುವಾಗ ಚೀನಾ ಮಾತ್ರ ರಷ್ಯಾದ ಗೋದಿಯನ್ನು ಆಮದು ಮಾಡುವುದರ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಫೆಬ್ರುವರಿ 8 ರಂದು ರಷ್ಯಾದ ರಾಷ್ಟ್ರಧ್ಯಕ್ಷ ಪುತಿನ್ ಮತ್ತು ಚೀನಾದ ಅಧ್ಯಕ್ಷ ಶೀ-ಜಿನಪಿಂಗ್ ಇವರಲ್ಲಿ ನಡೆದಿರುವ ಒಪ್ಪಂದದ ಭಾಗವೇ ಈ ನಿರ್ಧಾರವೆಂದು ಚೀನಾ ಹೇಳಿದೆ. ಆದರೆ ಚೀನಾದ ಈ ಕೃತಿಯೆಂದರೆ ರಷ್ಯಾದ ಯುಕ್ರೇನ್ ಮೇಲಿನ ಆಕ್ರಮಣದ ನೇರ ಬೆಂಬಲ ನೀಡಿದಂತಿದೆ ಎಂದು ಹೇಳಲಾಗುತ್ತಿದೆ. ರಷ್ಯಾ ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಗೋಧಿ ಉತ್ಪಾದನೆ ದೇಶವಾಗಿದೆ; ಆದರೆ `ಬ್ಯಾಕ್ಟೀರಿಯಾ’ ಮಿಶ್ರಿತ ಗೋಧಿಯ ಭಯದಿಂದ ಚೀನಾ ರಷ್ಯಾದ ಗೋಧಿಯ ಆಮದಿನ ಮೇಲೆ ನಿರ್ಬಂಧ ಹೇರಿತ್ತು.