ಪುತಿನ್ ಇವರು ಜೋ ಬಾಯಿಡೆನರನ್ನು ಡೋಲಿನಂತೆ ಬಾರಿಸುತ್ತಿದ್ದಾರೆ – ಅಮೇರಿಕದ ಮಾಜಿ ರಾಷ್ಟ್ರಧ್ಯಕ್ಷ ಡೋನಾಲ್ಡ ಟ್ರಂಪ್‍ರ ಟೀಕೆ

ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್‍ ಮತ್ತು ಅಮೇರಿಕದ ರಾಷ್ಟ್ರಾಧ್ಯಕ್ಷ ಬಾಯಿಡನ್‍

ವಾಷಿಂಗ್ಟನ್ (ಅಮೇರಿಕ) – ನನ್ನ ಆಡಳಿತಾವಧಿಯಲ್ಲಿ ಯುದ್ಧವಾಗಲಿಲ್ಲ. ನಾನು ಅಮೇರಿಕವನ್ನು ಯುದ್ಧದಿಂದ ಹೊರತೆಗೆದೆನು. ದುರ್ಬಲ ರಾಷ್ಟ್ರಾಧ್ಯಕ್ಷರಿಂದ ಈ ಜಗತ್ತು ಯಾವಾಗಲೂ ಹೆದರಿಕೆಯ ನೆರಳಲ್ಲಿಯೇ ಇರುವುದು. ವ್ಲಾದಿಮಿರ್ ಪುತಿನ್ ಇವರು ಜೋ ಬಾಯಿಡನ್‍ರನ್ನು ಒಂದು ಡೋಲಿನ ರೀತಿಯಲ್ಲಿ ಬಾರಿಸುತ್ತಿದ್ದಾರೆ ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್‍ರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು. ಟ್ರಂಪರವರು ಮುಂದೆ ಮಾತನಾಡುತ್ತಾ, ರಾಷ್ಟ್ರಾಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಹಗರಣವಾಗಿಲ್ಲದಿದ್ದರೆ ಇದೆಲ್ಲವೂ ನಡೆಯುತ್ತಿರಲಿಲ್ಲ ಹಾಗೂ ನಾನು ಪುನಃ ಅಮೇರಿಕದ ರಾಷ್ಟ್ರಾಧ್ಯಕ್ಷನಾಗಿದ್ದರೆ ಖಂಡಿತ ಇದೆಲ್ಲ ನಡೆಯುತ್ತಿರಲಿಲ್ಲ’ ಎಂದು ಹೇಳಿದರು.