ಮಹಮ್ಮದ ಪೈಗಂಬರರ ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆನಿಸುವುದಿಲ್ಲ!- ರಷ್ಯಾದ ರಾಷ್ಟ್ರಪತಿ ವ್ಲಾದಿಮಿರ್ ಪುಟಿನ್

ಕೇವಲ ಪೈಗಂಬರ ಅಷ್ಟೇ ಅಲ್ಲ, ಯಾವುದೇ ಧರ್ಮದ ಶ್ರದ್ಧಾಸ್ಥಾನದ ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆನಿಸುವುದಿಲ್ಲ ಎಂದು ಪುಟಿನ್ ಇವರು ಹೇಳಬೇಕಾಗಿತ್ತು! ಕಾರಣ ಮತಾಂಧರು ಹಿಂದೂಗಳು, ಸಿಖ್, ಕ್ರಿಶ್ಚಿಯನ್ ಮುಂತಾದ ಧರ್ಮದವರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದ್ದಾರೆ. ಇದನ್ನೂ ಕೂಡ ಜಗತ್ತಿನಾದ್ಯಂತ ಕಟುವಾಗಿ ವಿರೋಧಿಸಬೇಕು!- ಸಂಪಾದಕರು 

ರಷ್ಯಾದ ರಾಷ್ಟ್ರಪತಿ ವ್ಲಾದಿಮಿರ್ ಪುಟಿನ್

ಮಾಸ್ಕೊ(ರಶಿಯಾ)– ಮಹಮ್ಮದ ಪೈಗಂಬರ ಅಪಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆನಿಸುವುದಿಲ್ಲ. ಇದರಿಂದ ಇಸ್ಲಾಂ ಧರ್ಮ ಪಾಲಿಸುವ ಜನರ ಭಾವನೆಗಳು ನೋಯುತ್ತವೆ. ಕಲೆಯ ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಬಾರದು. ಜನರ ಧಾರ್ಮಿಕ ಶ್ರದ್ಧೆಗಳನ್ನು ಅಪಮಾನ ಮಾಡುವುದರಿಂದ ಕಟ್ಟಾಮತಾಂಧರ ವಾದಕ್ಕೆ ಪ್ರೋತ್ಸಾಹ ದೊರಕಿದಂತಾಗುತ್ತದೆ. ಪ್ಯಾರಿಸ್‍ನಲ್ಲಿ ಜರುಗಿದ ಪ್ರಕರಣ ಇದರ ಉದಾಹರಣೆಯಾಗಿದೆಯೆಂದು ರಷ್ಯಾದ ರಾಷ್ಟ್ರಪತಿ ವ್ಲಾದಿಮಿರ್ ಪುಟಿನ್ ಇವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಹೇಳಿದರು. ಫ್ರಾನ್ಸ್ ನಲ್ಲಿ ವರ್ಷ 2015 ರಲ್ಲಿ `ಶಾರ್ಲಿ ಹೆಬ್ದೊ’ ನಿಯತಕಾಲಿಕ ಪತ್ರಿಕೆಯು ಮಹಮ್ಮದ ಪೈಗಂಬರರ ವ್ಯಂಗಚಿತ್ರವನ್ನು ಪ್ರಕಟಿಸಿದ್ದರಿಂದ ಅವರ ಪ್ಯಾರಿಸ್‍ನ ಕಾರ್ಯಾಲಯದ ಮೇಲೆ ಜಿಹಾದಿ ಭಯೋತ್ಪಾದಕರು ಆಕ್ರಮಣ ಮಾಡಿದ್ದರು. ಇದರಲ್ಲಿ 13 ಜನರ ಹತ್ಯೆಯಾಗಿತ್ತು. ಪುಟಿನ್‍ರ ಈ ಹೇಳಿಕೆಯನ್ನು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್‍ಖಾನ್ ಸ್ವಾಗತಿಸಿದ್ದಾರೆ.