ಉಕ್ರೇನ್‍ನಲ್ಲಿ ಇನ್ನೂ ಕೆಟ್ಟ ಕಾಲ ಬರಲಿದೆ ! – ಫ್ರಾನ್ಸ್‍ನ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್

ಫ್ರಾನ್ಸ್‍ನ ರಾಷ್ಟ್ರಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್

ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‍ನ ರಾಷ್ಟ್ರಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಇವರು ರಷ್ಯಾದ ರಾಷ್ಟ್ರಧ್ಯಕ್ಷ ವ್ಲಾದಿಮಿರ ಪುತಿನ್ ಇವರ ಜೊತೆಗೆ ಸಂಚಾರ ವಾಣಿಯಲ್ಲಿ 90 ನಿಮಿಷ ಚರ್ಚೆ ನಡೆಸಿದನಂತರ `ಉಕ್ರೇನ್ ನಲ್ಲಿ ನಿನ್ನ ಕೆಟ್ಟ ಕಾಲ ಬರಲಿದೆ,’ ಎಂಬ ಎಚ್ಚರಿಕೆ ನೀಡಿದರು. `ಪುತಿನ ಅವರಿಗೆ ಸಂಪೂರ್ಣ ಉಕ್ರೇನ್ ವಶಕ್ಕೆ ಪಡೆದು ಕೊಳ್ಳಬೇಕಿದೆ’ ಎಂದು ಮೈಕ್ರಾನ್ ಇವರು ಹೇಳಿರುವ ಮಾಹಿತಿಯನ್ನು ಅವರ ನಿಕಟವರ್ತಿಯು ನೀಡಿದ್ದಾರೆ.

ಮೈಕ್ರಾನ್ ಪುತಿನ ಇವರಿಗೆ `ನಾಗರಿಕರ ಮೃತ್ಯು ಆಗದಿರಲು ಮತ್ತು ಸಹಾಯ ಹಸ್ತ ಮುಟ್ಟಿಸುವ ಬಗ್ಗೆ ಕಾಳಜಿ ವಹಿಸಬೇಕು’, ಎಂದು ವಿನಂತಿಸಿದ್ದಾರೆ. ಅದರ ಬಗ್ಗೆ ಪುತಿನ್ ಇವರು, `ನಾನು ಹೀಗೆ ಮಾತು ನೀಡಲು ಸಾಧ್ಯವಿಲ್ಲ’, ಎಂದು ಹೇಳಿದ್ದಾರೆ ಎಂದು ಮ್ಯಾಕ್ರೋನ್ ಇವರ ನಿಕಟವರ್ತಿ ಹೇಳಿದರು.