ರಷ್ಯಾದ ಸೈನಿಕರು ಖಾರಕಿವದಲ್ಲಿನ ಸೇನಾ ಆಸ್ಪತ್ರೆಯ ಮೇಲೆ ದಾಳಿ

ಕೀವ (ಯುಕ್ರೇನ್) – ಯುಕ್ರೇನ್‌ನ ಖಾರಕಿವ್ ಮತ್ತು ಖೆರಸನ ದಲ್ಲಿ ತಡರಾತ್ರಿ ಭಯಂಕರ ಯುದ್ಧ ನಡೆಯುತ್ತಿತ್ತು. ರಷ್ಯಾದ ಸೈನಿಕರು ಖಾರಕೀವನಲ್ಲಿ ಸೇನಾ ಆಸ್ಪತ್ರೆಯ ಮೇಲೆ ‘ಪ್ಯಾರಾಟುಪರ್‌ಸ’ ಇಳಿಸಿದರು ಮತ್ತು ತೀವ್ರ ದಾಳಿ ನಡೆಸಿದರು. ಈ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಯುಕ್ರೇನಿನ ಸೈನಿಕರ ಮೇಲೆ ಔಷಧೋಪಚಾರ ನಡೆಯುತ್ತಿತ್ತು.

ಯುಕ್ರೇನ್ ವಾಸಿಗಳ ಜಿಗುಟುತನದಿಂದ ಹೋರಾಟ !

೭ ದಿನ ಕಳೆದರೂ, ಯುಕ್ರೇನ್ ರಷ್ಯಾದ ವಶಕ್ಕೆ ಸಂಪೂರ್ಣವಾಗಿ ಬಂದಿಲ್ಲ. ಆದ್ದರಿಂದ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದೀಮಿರ ಪುತಿನ ಇವರು ಯುಕ್ರೇನ್ ಮೇಲೆ ಪರಮಾಣು ಪ್ರಯೋಗ ಮಾಡುವುದಕ್ಕಾಗಿ ಸೈನ್ಯದಳಕ್ಕೆ ಸಿದ್ಧರಿರಲು ಆದೇಶಿಸಿದ್ದಾರೆ. ಇದರಿಂದ ಈ ಪಡೆಯು ಯುದ್ಧಾಭ್ಯಾಸ ಆರಂಭಿಸಿದ್ದಾರೆ. ‘ಯುಕ್ರೇನ್ ಸಹಜವಾಗಿ ವಶಪಡಿಸಿಕೊಳ್ಳಬಹುದು’, ಎಂದು ಪುತಿನ ಅವರಿಗೆ ಅನಿಸಿತ್ತು; ಆದರೆ ಯುಕ್ರೇನ್ ಸೈನಿಕ ಮತ್ತು ನಾಗರೀಕರ ಜಿಗುಟುತನದ ಹೋರಾಟದಿಂದ ರಷ್ಯನ್ ಸೈನ್ಯದ ಕ್ರಮಗಳಿಗೆ ತೊಂದರೆ ಉಂಟಾಗುತ್ತದೆ.