ಪುತಿನ್ ಅವರ ಕುಟುಂಬವು ಸೈಬೇರಿಯಾದ ಶಿಬಿರದಲ್ಲಿ ಅಡಗಿದ್ದಾರೆ !

ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ರ ಕುಟುಂಬ

ಮಾಸ್ಕೋ (ರಷ್ಯಾ) – ರಷ್ಯಾದಲ್ಲಿಯ `ಮಾಸ್ಕೋ ಸ್ಟೇಟ್ ಇನಸ್ಟಿಟ್ಯುಟ್ ಆಫ್ ಇಂಟರನ್ಯಾಷನಲ್ ರಿಲೇಶನ್’ ನ ಪ್ರಾಧ್ಯಾಪಕ ವಾಲೆರಿ ಸೊಲೊವಿ ಇವರ ಹೇಳಿಕೆಯ ಪ್ರಕಾರ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ತಮ್ಮ ಕುಟುಂಬವನ್ನು ಸೈಬೇರಿಯಾದಲ್ಲಿಯ ಅಲ್ತಾಯಿ ಪರ್ವತದಲ್ಲಿರುವ ಶಿಬಿರದಲ್ಲಿ ಅಡಗಿಸಿಟ್ಟಿದ್ದಾರೆ. ಈ ಶಿಬಿರವು ಪರಮಾಣು ದಾಳಿಯಿಂದಲೂ ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ. ಪರಮಾಣು ದಾಳಿಯಾಗುವ ಸಾಧ್ಯತೆ ಇರುವುದರಿಂದ ಪುತಿನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

( ಸೌಜನ್ಯ  : news.com.au )

1. ಸೊಲೊವಿ ಅವರು ಪುತಿನ್ ಅವರ ಆಡಳಿತದ ಅನೇಕ ಆಧಿಕಾರಿಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿರುವದರಿಂದ, ಅವರು ಅನೇಕ ರಹಸ್ಯಗಳನ್ನು ತಿಳಿದಿದ್ದಾರೆ ಎಂದು ನಂಬಲಾಗಿದೆ. ರಷ್ಯಾದ ನಾಯಕರ ಚಲನವಲನಗಳ ಬಗ್ಗೆ ಸೊಲೊವಿಗೆ ರಹಸ್ಯ ಮಾಹಿತಿ ಇದೆ ಎನ್ನಲಾಗಿದೆ.

2. ಮಂಗೋಲಿಯಾ, ಕಝಾಕಿಸ್ಥಾನ ಮತ್ತು ಚೀನಾದ ಗಡಿಯಲ್ಲಿರುವ ಸೈಬೇರಿಯನ್ ಪ್ರಾಂತ್ಯವು ತುರ್ತು ಪರಿಸ್ಥಿತಿಯಲ್ಲಿ ದೇಶದಿಂದ ಪಲಾಯನ ಮಾಡಲು ಸೂಕ್ತವಾಗಿದೆ.