ಅಮೇರಿಕದಿಂದ ರಶಿಯಾದ ರಾಷ್ಟ್ರಾಧ್ಯಕ್ಷ ಪುತಿನರ ಮೇಲೆ ವೈಯಕ್ತಿಕ ನಿರ್ಬಂಧ

ರಶಿಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್

ವಾಷಿಂಗ್ಟನ್ (ಅಮೇರಿಕ) – ರಶಿಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ವಿದೇಶಮಂತ್ರಿ ಸೆರಗೆ ಲಾವಹರೋವಹ ಇವರನ್ನು ರಶಿಯಾದ ಯುಕ್ರೆನ್ ಮೇಲಿನ ಆಕ್ರಮಣಕ್ಕಾಗಿ ನೇರ ಜವಾಬ್ದಾರಿಯನ್ನು ಮಾಡಿ ಅಮೇರಿಕವು ಅವರ ಮೇಲೆ ವೈಯಕ್ತಿಕ ನಿರ್ಬಂಧವನ್ನು ಹಾಕಿದೆ. ಅಮೇರಿಕವು ರಶಿಯಾದ ರಕ್ಷಣಾಮಂತ್ರಿ ಸರ್ಗೆಯಿ ಶೊಯಿಗು, ಹಾಗೆಯೇ ರಶಿಯಾದ ಸೈನ್ಯದಳದ ಪ್ರಮುಖ ವಹ್ಯಲೆರೀ ಗೆರಾಸಿಮೊವಹ ಇವರ ಮೇಲೆಯು ನಿರ್ಬಂಧವನ್ನು ಹಾಕಿದೆ.

1. ಅಮೇರಿಕದ ಹಣಕಾಸು ವಿಭಾಗವು ಜಾರಿಗೊಳಿಸಿದ ನಿವೇದನೆಯಲ್ಲಿ ಪುತಿನ್, ಲಾವಹರೊವಹ ಹಾಗೂ ವಿಶ್ವ ಸಂಸ್ಥೆಯ ಸುರಕ್ಷಾ ಪರಿಷತ್ತಿನ ರಶಿಯಾದ ಸದಸ್ಯರ ಮೇಲೆಯು ನಿರ್ಬಂಧವನ್ನು ಹಾಕಿ ಅಮೇರಿಕವು ತನ್ನದೆ ಮಿತ್ರರಾಷ್ಟ್ರ ಹಾಗೂ ಭಾಗೀದಾರರ ಸಹಾಯದಿಂದ ರಶಿಯಾದ ಯುಕ್ರೆನ್ ಮೇಲಿನ ಆಕ್ರಮಣಕ್ಕೆ ಪ್ರತ್ಯುತ್ತರ ನೀಡುತ್ತಿದೆ ಎಂದು ಹೇಳಿದೆ.

2. ಹಣಕಾಸು ವಿಭಾಗವು ಯಾವುದೇ ದೇಶದ ಪ್ರಮುಖರ ಮೇಲೆ ನಿರ್ಬಂಧವನ್ನು ಹೇರುವುದು ಈ ವಿಷಯವು ಅತ್ಯಂತ ದುರ್ಲಭ ವಿಷಯವಾಗಿದೆ ಹೀಗೆ ನಿರ್ಬಂಧ ಹಾಕಿರುವ ಮುಖಂಡರ ಪಟ್ಟಿಯಲ್ಲಿ ಪುತಿನ್ ರೊಂದಿಗೆ ಉತ್ತರ ಕೊರಿಯಾದ ಕಿಮ್ ಜೋಂಗ ಉನ, ಬೆಲಾರೂಸನ ಅಧ್ಯಕ್ಷ ಅಲೆಕ್ಸಾಂದ್ರ ಲುಕಾಶೊಂಕಾ ಹಾಗೂ ಸೀರಿಯಾದ ಅಧ್ಯಕ್ಷ ವಶಿಲ ಅಲ್ ಅಸದ ಇವರುಗಳಿದ್ದಾರೆ.