ಪೂಜಾರಿಯನ್ನು ಕಟ್ಟಿಹಾಕಿ ಆಭರಣಗಳನ್ನು ಕದ್ಯೋದರು

ಬುಲ್ಡಾಣ – ಸಮರ್ಥ ರಾಮದಾಸ ಸ್ವಾಮಿಯವರು ಸ್ಥಾಪನೆ ಮಾಡಿರುವ 11 ಮಾರುತಿಗಳಲ್ಲಿ ಒಂದಾಗಿರುವ ಸತ್ಪುದದ ತಪ್ಪಲಿನಲ್ಲಿರುವ ‘ವಾರಿ ಹನುಮಾನ್ ಮಂದಿರ’ದಲ್ಲಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ದೇವಾಲಯವು ಬುಲ್ಡಾಣ ಜಿಲ್ಲೆಯಲ್ಲಿನ ಮಧ್ಯಪ್ರದೇಶದ ಗಡಿಭಾಗದಲ್ಲಿದೆ. ದೇವಸ್ಥಾನದಲ್ಲಿ ಕಳ್ಳತನ ಮಾಡುತ್ತಿದ್ದಾಗ ಅಪರಿಚಿತ ದರೋಡೆಕೋರರು ಹನುಮಂತನ ವಿಗ್ರಹದ ಆಭರಣಗಳನ್ನು ಕದ್ದರು. ದರೋಡೆಕೋರರು ಪೂಜಾರಿಯನ್ನು ಕಟ್ಟಿಹಾಕಿ ಸುಮಾರು ಐದೂವರೆ ಕೆ.ಜಿ. ಬೆಳ್ಳಿ ಆಭರಣ ಮತ್ತು ಕಾಣಿಕೆ ಹುಂಡಿಯಲ್ಲಿದ್ದ 1 ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ. ಘಟನೆಯ ಮಾಹಿತಿ ಸಿಕ್ಕ ಕೂಡಲೇ ಸೋನಾಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸತ್ಪುಡಾದ ತಪ್ಪಲಿನಲ್ಲಿ ಈ ಪುರಾತನ ಜಾಗೃತ ಹನುಮಾನ್ ದೇವಾಲಯವಿದೆ. ಅನೇಕ ರಾಜ್ಯಗಳಿಂದ ಭಕ್ತರು ಈ ಸ್ಥಳಕ್ಕೆ ಬರುತ್ತಿರುತ್ತಾರೆ.
ಸಂಪಾದಕೀಯ ನಿಲುವುಹಿಂದೂಗಳ ದೇಶದಲ್ಲಿ ಹಿಂದೂಗಳ ದೇವಾಲಯಗಳು ಅಸುರಕ್ಷಿತವಾಗಿವೆ, ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಇದಕ್ಕಾಗಿ ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರಿಹಾರ, ಇದನ್ನು ಗಮನದಲ್ಲಿಡಿ ! |
ದೆಹಲಿ-ಎನ್.ಸಿ.ಆರ್.ನಲ್ಲಿ ದೊಡ್ಡ ದಾಳಿಯ ಸಂಚು ವಿಫಲ
ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!
ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ‘ನೀಟ್’ ನ ಪ್ರಶ್ನೆ ಪತ್ರಿಕೆಗಳು ಅಕೋಲಾ ತಲುಪಿದವು!
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App