(ಗ್ರೂಮಿಂಗ್ ಜಿಹಾದ್ ಸಧ್ಯ ಬ್ರಿಟನ್‌ನಲ್ಲಿ ನಡೆಯುತ್ತಿದೆ, ಇದರಲ್ಲಿ ಪಾಕಿಸ್ತಾನಿ ಮೂಲದ ಜನರು ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಮೋಸಗೊಳಿಸಿ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ)
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನಿ ನಾಗರಿಕರು ತಮ್ಮ ದೇಶದಲ್ಲಿನ ಬಡತನ ಮತ್ತು ಹದಗೆಡುತ್ತಿರುವ ಪರಿಸ್ಥಿತಿಗಳಿಂದ ಎಷ್ಟು ಕಂಗಾಲಾಗಿದ್ದಾರೆ ಎಂದರೆ, ಅವರು ಇತರ ದೇಶಗಳಿಗೆ ಹೋಗಿ ವಾಸಿಸಲು ಪ್ರತಿಯೊಂದು ಇತಿಮಿತಿಯನ್ನು ಮೀರುತ್ತಿದ್ದಾರೆ. ಕೆಲವೊಮ್ಮೆ ಅವರು ಹಜ್ ಅಥವಾ ಉಮ್ರಾ (ಮೆಕ್ಕಾದ ಒಂದು ಸಣ್ಣ ಯಾತ್ರೆ) ನೆಪದಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿ ಭಿಕ್ಷೆ ಬೇಡುತ್ತಾರೆ, ಕೆಲವೊಮ್ಮೆ ಇತರ ದೇಶಗಳಿಗೆ ಹೋಗಿ ಕಳ್ಳತನ ಮತ್ತು ದರೋಡೆಯಂತಹ ಅಪರಾಧಗಳನ್ನು ಮಾಡುತ್ತಾರೆ. ಇದರಿಂದಾಗಿ 7 ಕ್ಕೂ ಹೆಚ್ಚು ದೇಶಗಳು ಅಂತಹ ಪಾಕಿಸ್ತಾನಿ ನಾಗರಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿವೆ. ಪಾಕಿಸ್ತಾನಿ ಸುದ್ದಿ ವಾಹಿನಿ ‘ಸಾಮಾ ನ್ಯೂಸ್’ ಪ್ರಕಾರ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಚೀನಾ ಸೇರಿದಂತೆ 7 ದೇಶಗಳಿಂದ 258 ಪಾಕಿಸ್ತಾನಿ ನಾಗರಿಕರನ್ನು ಅವರ ದೇಶಕ್ಕೆ ವಾಪಸ್ಸು ಕಳುಹಿಸಿದೆ. ಈ ನಾಗರಿಕರಲ್ಲಿ ಹದಿನಾರು ಜನರನ್ನು ಕರಾಚಿ ತಲುಪುತ್ತಲೇ ವಿವಿಧ ಕಾನೂನು ಪ್ರಕ್ರಿಯೆಗಳ ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಯಿತು.
1. ಸೌದಿ ಅರೇಬಿಯಾದಿಂದ 232 ಜನರನ್ನು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ 21 ಜನರನ್ನು ಗಡಿಪಾರು ಮಾಡಲಾಯಿತು, ಇದರಲ್ಲಿ 7 ಭಿಕ್ಷುಕರು ಸೇರಿದ್ದಾರೆ. ಸೌದಿ ಅರೇಬಿಯಾದಿಂದ ಗಡಿಪಾರು ಮಾಡಲಾದ 16 ಜನರ ವೀಸಾಗಳು ಅವಧಿ ಮುಗಿದ ನಂತರವೂ ಅವರು ಅಲ್ಲಿಯೇ ಇದ್ದರು.
2. ಪಾಕಿಸ್ತಾನ ತನ್ನ ಆತ್ಮೀಯ ಮಿತ್ರ ಎಂದು ಪರಿಗಣಿಸುವ ಚೀನಾ ಕೂಡ ಪಾಕಿಸ್ತಾನಿ ಜನರಿಗೆ ತನ್ನ ದೇಶದಿಂದ ಹೊರಗಿನ ದಾರಿಯನ್ನು ತೋರಿಸಿದೆ. ಚೀನಾ, ಕತಾರ್, ಇಂಡೋನೇಷ್ಯಾ, ಸೈಪ್ರಸ್ ಮತ್ತು ನೈಜೀರಿಯಾದಿಂದ ತಲಾ ಒಬ್ಬ ಪಾಕಿಸ್ತಾನಿಯನ್ನು ಗಡೀಪಾರು ಮಾಡಲಾಗಿದೆ.
ಮಾದಕವಸ್ತು ಕಳ್ಳಸಾಗಣೆಯಲ್ಲಿ ಪಾಕಿಸ್ತಾನಿಗಳ ಸಹಭಾಗ
ಸೌದಿ ಅರೇಬಿಯಾದಲ್ಲಿ 27 ಪಾಕಿಸ್ತಾನಿಗಳು ಅನುಮತಿಯಿಲ್ಲದೆ ಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ಮಾದಕವಸ್ತು ಕಳ್ಳಸಾಗಣೆಯಲ್ಲೂ ಭಾಗಿಯಾಗಿದ್ದರು.
ಸಂಪಾದಕೀಯ ನಿಲುವುವಿಶ್ವ ಮಟ್ಟದಲ್ಲಿ ಪಾಕಿಸ್ತಾನಿ ನಾಗರಿಕರ ಯೋಗ್ಯತೆ ಇದೇ ಆಗಿದೆ. ಭಯೋತ್ಪಾದನೆ, ‘ಗ್ರೂಮಿಂಗ ಜಿಹಾದ್’ ಮುಂತಾದ ಕೃತ್ಯಗಳನ್ನು ಎಸಗುವವರಿಂದ ತುಂಬಿರುವ ಈ ದೇಶದ ಮೇಲೆ ಜಗತ್ತು ಈಗ ಎಲ್ಲಾ ರೀತಿಯ ಬಹಿಷ್ಕಾರಗಳನ್ನು ಹೇರುವ ಮೂಲಕ ಪಾಠ ಕಲಿಸುವುದು ಅನಿವಾರ್ಯವಾಗಿದೆ ! |