|
(‘ಪೆರೋಲ್’ ಎಂದರೆ ಆರೋಪಿಗೆ ನೀಡಲಾದ ತಾತ್ಕಾಲಿಕ ರಜೆ)
ಅಳೆಫಾಟಾ (ಪುಣೆ ಜಿಲ್ಲೆ) – ಗುಜರಾತ್‌ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಲೀಂ ಅಲಿಯಾಸ್ ಸಲ್ಮಾನ್ ಜರ್ದಾ ಹೆಸರಿನ ಆರೋಪಿ ಪೆರೋಲ್ ನಲ್ಲಿದ್ದಾಗ ಪರಾರಿಯಾಗಿದ್ದನು. ಅವನು ಈ ಸಮಯದಲ್ಲಿ, ಮಹಾರಾಷ್ಟ್ರಕ್ಕೆ ಹೋಗಿ ಕಳ್ಳತನ ಮಾಡಿದನು. ನಗರ-ಕಲ್ಯಾಣ್ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ಟೆಂಪೋದಲ್ಲಿದ್ದ ಟಾಯರ್ ಅನ್ನು 4 ಜನರ ಸಹಾಯದಿಂದ ಕಳ್ಳತನ ಮಾಡಿದ್ದ. ಅಳೆಫಾಟಾ ಪೊಲೀಸರು ಅಪರಾಧದ ಬಗ್ಗೆ ಕೂಲಂಕಷ ತನಿಖೆ ನಡೆಸಿ ಪ್ರಮುಖ ಆರೋಪಿ ಸೇರಿದಂತೆ, ಸಾಹಿಲ್ ಪಠಾಣ, ಸುಫಿಯಾನ ಚಾಂದಕಿ, ಅಯೂಬ ಸುನಠಿಯಾ ಮತ್ತು ಇರ್ಫಾನ ದುರವೇಶ ಅವರನ್ನು ಬಂಧಿಸಿದ್ದಾರೆ. ಪುಣೆಯ ಮಂಚರ್ ಪೊಲೀಸ್ ಠಾಣೆ ಮತ್ತು ನಾಸಿಕ್ ಜಿಲ್ಲೆಯ ಸಿನ್ನರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧಗಳನ್ನು ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಮತ್ತು ತನಿಖೆಯಿಂದ ಆತನ ವಿರುದ್ಧ ಮಹಾರಾಷ್ಟ್ರದಲ್ಲಿ 3 ಮತ್ತು ಗುಜರಾತ್‌ನಲ್ಲಿ 13 ಒಟ್ಟು 16 ಅಪರಾಧಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಈ ಆರೋಪಿಗಳಿಂದ ಟೆಂಪೋ ಸೇರಿದಂತೆ ಕಳ್ಳತನವಾಗಿದ್ದ ಸೊತ್ತು ಒಟ್ಟು 14 ಲಕ್ಷ 40 ಸಾವಿರದ 878 ರೂಪಾಯಿ ಮೌಲ್ಯದ ಕದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಗೋಧ್ರಾ ಹತ್ಯಾಕಾಂಡದ ಪ್ರಮುಖ ಆರೋಪಿ ಸಲ್ಮಾನ್ ಜರ್ದಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆ ಕಾಲಾವಧಿಯಲ್ಲಿ, ಅವನು ಶಿಕ್ಷೆ ಅನುಭವಿಸುತ್ತಿದ್ದಾಗ 8 ಬಾರಿ ಪೆರೋಲ್ ನಲ್ಲಿದ್ದಾಗ ಮರಳಿ ಜೈಲಿಗೆ ಹಿಂತಿರುಗದೇ, ಗುಂಪು ಮಾಡಿ ಕಳ್ಳತನ ಅಪರಾಧಗಳನ್ನು ಮಾಡಿರುವುದು ಪೊಲೀಸ್ ತನಿಖೆಗಳು ಬಹಿರಂಗವಾಗಿದೆ.
ಸಂಪಾದಕೀಯ ನಿಲುವುಗಂಭೀರ ಅಪರಾಧದಲ್ಲಿ ಶಿಕ್ಷೆಗೊಳಗಾದ ಅಪರಾಧಿಗೆ ಪೆರೋಲ್ ಹೇಗೆ ಸಿಗುತ್ತದೆ ?, ಇದು ಸಾಮಾನ್ಯ ಜನರನ್ನು ಕಾಡುವ ಪ್ರಶ್ನೆಯಾಗಿದೆ. ಪೆರೋಲ್ ಮೇಲೆ ಹೊರಬಂದ ಅಪರಾಧಿಯೊಬ್ಬ ಪದೇ ಪದೇ ಅಪರಾಧ ಕೃತ್ಯಗಳನ್ನು ಎಸಗುತ್ತಿರುವಾಗ ಅವನಿಗೆ ಮೇಲಿಂದ ಮೇಲೆ ಪೆರೋಲ ಸಿಗುವುದು ಮತ್ತು ವ್ಯವಸ್ಥೆಯಿಂದ ಅದಕ್ಕೆ ಯಾವುದೇ ವಿರೋಧ ವ್ಯಕ್ತವಾಗದಿರುವುದು, ಆಶ್ಚರ್ಯಕರ ! |