Shoot Cow Thieves : ಗೋಕಳ್ಳತನ ಮಾಡುವವರನ್ನು ಕಂಡ ತಕ್ಷಣ ಗುಂಡು ಹಾರಿಸಬೇಕೆಂದು ನಾನು ಆದೇಶಿಸುತ್ತೇನೆ !

ರಾಜ್ಯದ ಕಾಂಗ್ರೆಸ್ ಸರಕಾರದ ರಾಜ್ಯ ಸಚಿವ ಮಂಕಾಳ ವೈದ್ಯ ಅವರ ಹೇಳಿಕೆ

ಕಾಂಗ್ರೆಸ್ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಮಂಕಾಳ ವೈದ್ಯ

ಬೆಂಗಳೂರು – ಗೋ ಕಳ್ಳತನದ ಹೆಚ್ಚುತ್ತಿದ್ದರಿಂದ ಆರೋಪಿಗಳನ್ನು ಕಂಡ ತಕ್ಷಣ ಗುಂಡು ಹಾರಿಸಲು ಆದೇಶ ಹೊರಡಿಸಲಾಗುವುದು ಎಂದು ರಾಜ್ಯದ ಕಾಂಗ್ರೆಸ್ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಮಂಕಾಳ ವೈದ್ಯ ಹೇಳಿದರು. ಉತ್ತರ ಕನ್ನಡದಲ್ಲಿ ಹೆಚ್ಚುತ್ತಿರುವ ಗೋ ಕಳ್ಳತನದ ಘಟನೆಗಳ ಕುರಿತು ಅವರು ಮಾತನಾಡುತ್ತಿದ್ದರು.

ಮಂಕಾಳ್ ವೈದ್ಯ ಮಾತನಾಡುತ್ತಾ, ಯಾವುದೇ ಸಂದರ್ಭದಲ್ಲೂ ಗೋವುಗಳ ಕಳ್ಳತನ ನಡೆಯಬಾರದು. ನಾನು ಪೊಲೀಸರಿಗೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದೇನೆ. ಅವರು ಯಾರೇ ಆಗಿರಲಿ. ಇಂತಹ ಘಟನೆಗಳು ಮತ್ತೆ ಸಂಭವಿಸಿದರೆ, ಅಪರಾಧಿಗಳನ್ನು ಸ್ಥಳದಲ್ಲೇ ಗುಂಡು ಹಾರಿಸಲು ನಾನು ಆದೇಶಿಸುತ್ತೇನೆ.(ಘಟನೆ ಸಂಭವಿಸಿದ ಬಳಿಕ ಮಾಡುವುದಕ್ಕಿಂತ, ಮೊದಲೇ ಮಾಡಿದ್ದರೆ, ಮತ್ತೆ ಇಂತಹ ಘಟನೆಗಳು ಸಂಭವಿಸುವುದಿಲ್ಲ ಎಂದು ಸಚಿವರ ಗಮನಕ್ಕೆ ಏಕೆ ಬರುವುದಿಲ್ಲ ? – ಸಂಪಾದಕರು)