Saudi Arabia Jailed Pakistan Citizens: ಸೌದಿ ಅರೇಬಿಯಾ 10 ಸಾವಿರ ಪಾಕಿಸ್ತಾನಿಗಳನ್ನು ಜೈಲಿಗೆ ಅಟ್ಟಿದೆ !

ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್

ಇಸ್ಲಾಮಾಬಾದ್ – ಇಸ್ಲಾಮಿಕ್ ರಾಷ್ಟ್ರಗಳ ನಾಯಕ ಸೌದಿ ಅರೇಬಿಯಾ ಜೊತೆಗಿನ ಸಂಬಂಧಗಳು ತುಂಬಾ ಬಲಿಷ್ಠವಾಗಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ತಮ್ಮ ಸಹೋದರ ಎಂದು ಕರೆಯುತ್ತಾರೆ. ಅದೇ ಶಹಬಾಜ್ ಸರಕಾರ ಈಗ ಸೌದಿ ಅರೇಬಿಯಾ ಪಾಕಿಸ್ತಾನಿಗಳ ಮೇಲೆ ತುಂಬಾ ಕಠೋರವಾಗಿದೆ ಎಂದು ಒಪ್ಪಿಕೊಂಡಿದೆ; ಏಕೆಂದರೆ ಸೌದಿ ಅರೇಬಿಯಾ 10 ಸಾವಿರ ಪಾಕಿಸ್ತಾನಿಗಳನ್ನು ಜೈಲಿನಲ್ಲಿಟ್ಟಿದೆ.

ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಇವರು ಸಂಸತ್ತಿನಲ್ಲಿ, ಪ್ರಪಂಚದಾದ್ಯಂತ ಸುಮಾರು 20 ಸಾವಿರ ಪಾಕಿಸ್ತಾನಿಗಳು ಜೈಲುಗಳಲ್ಲಿದ್ದಾರೆ, ಅದರಲ್ಲಿ 10 ಸಾವಿರ ಜನರು ಸೌದಿ ಅರೇಬಿಯಾದಲ್ಲಿಯೇ ಇದ್ದಾರೆ. ಈ ಪಾಕಿಸ್ತಾನಿ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದರಿಂದ ಸೌದಿ ಸರಕಾರ ಅವರನ್ನು ಜೈಲಿಗೆ ಹಾಕಿದೆ. ಒಂದು ಅಂಕಿಅಂಶದ ಪ್ರಕಾರ, 10 ದೇಶಗಳಲ್ಲಿ 68 ಪಾಕಿಸ್ತಾನಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಪಾಕಿಸ್ತಾನಿಗಳ ಮೇಲೆ ಭಯೋತ್ಪಾದನೆ, ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಇತ್ಯಾದಿಗಳ ಆರೋಪಗಳಿವೆ ಎಂದು ಬಹಿರಂಗ ಪಡಿಸಿದ್ದಾರೆ. (ಇದರಿಂದ ಅಪರಾಧ ಪ್ರವೃತ್ತಿಯನ್ನು ಹೊಂದಿರುವ ಪಾಕಿಸ್ತಾನಿಗಳು ಜಗತ್ತಿನ ಎಲ್ಲೆಡೆ ಅಪರಾಧಗಳನ್ನು ಮಾಡುತ್ತಾರೆ ಎಂದು ತೋರುತ್ತದೆ, ಅದು ಬ್ರಿಟನ್‌ನಲ್ಲಿ ‘ಗ್ರೂಮಿಂಗ್ ಗ್ಯಾಂಗ್’ ಆಗಿರಬಹುದು ಅಥವಾ ಸೌದಿ ಅರೇಬಿಯಾದಲ್ಲಿ ಕಳ್ಳಸಾಗಣೆದಾರರಾಗಿರಬಹುದು. ಇದರಿಮದ ಪಾಕಿಸ್ತಾನಿಗಳು ಪ್ರಪಂಚದಾದ್ಯಂತದ ಸಮಾಜಕ್ಕೆ ಅಪಾಯಕಾರಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪಾಕಿಸ್ತಾನದ ಮೇಲೆ ಜಗತ್ತು ನಿರ್ಬಂಧಗಳನ್ನು ಹೇರುವುದು ಸರಿಯಾಗಿರುತ್ತದೆ ! – ಸಂಪಾದಕರು)