ವಿಡಿಯೋ ವೈರಲ್ ಆದ ನಂತರ ನಗರಸೇವಕ ಜಾಕಿರ್ ಹುಸೇನ್ ವಿರುದ್ಧ ಟೀಕೆ
(ಡಿಎಂಕೆ ಎಂದರೆ ದ್ರಾವಿಡ ಮುನ್ನೇತ್ರ ಕಳಗಂ – ದ್ರಾವಿಡ ಪ್ರಗತಿ ಒಕ್ಕೂಟ)
ಚೆನ್ನೈ (ತಮಿಳುನಾಡು) – ಡಿಎಂಕೆ ನಗರಸೇವಕ ಜಾಕಿರ್ ಹುಸೇನ್ ಹಿಂದಿ ಭಾಷೆಯ ವಿರುದ್ಧದ ಪ್ರತಿಭಟನೆಯಲ್ಲಿ ಪ್ರತಿಜ್ಞೆ ಮಾಡುತ್ತಿರುವಾಗ ಪಕ್ಕದಲ್ಲಿ ನಿಂತಿದ್ದ ಮಹಿಳಾ ನಾಯಕಿಯ ಕೈಯಿಂದ ಚಿನ್ನದ ಬಳೆ ಕದಿಯಲು ಪ್ರಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಭಾಜಪ ಬಿಡುಗಡೆ ಮಾಡಿದೆ. ಡಿಎಂಕೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಈ ವಿಡಿಯೋದಲ್ಲಿ, ಎಲ್ಲಾ ನಾಯಕರು ಒಂದು ಕೈಯನ್ನು ಮುಂದೆ ಇಟ್ಟು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಕಂಡುಬರುತ್ತದೆ. ಆಗ ಜಾಕಿರ್ ಹುಸೇನ್ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಕೈಯನ್ನು ಪದೇ ಪದೇ ಮುಟ್ಟುತ್ತಿದ್ದಾರೆ. ಅವರು ಮಹಿಳೆಯ ಕೈಯಿಂದ ಬಳೆ ಕದಿಯಲು ಪ್ರಯತ್ನಿಸುತ್ತಿರುವಾಗ, ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಮಹಿಳೆ ಜಾಕಿರ್ ಕೈಗೆ ಹೊಡೆದು ಅವರನ್ನು ದೂರ ತಳ್ಳುತ್ತಾಳೆ; ಆದರೆ ಜಾಕಿರ್ ಹುಸೇನ್ ಮತ್ತೆ ಮತ್ತೆ ಬಳೆ ಕದಿಯಲು ಪ್ರಯತ್ನಿಸುತ್ತಾರೆ.
ಕಳ್ಳತನ ಮತ್ತು ಡಿಎಂಕೆ ಎಂದಿಗೂ ಬೇರ್ಪಡಿಸಲಾಗದು! – ಭಾಜಪ
ಭಾಜಪದ ತಮಿಳುನಾಡು ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಈ ವಿಡಿಯೋವನ್ನು ಹಂಚಿಕೊಂಡು, “ಕುನ್ನೂರಿನ 25ನೇ ವಾರ್ಡ್‌ನ ಡಿಎಂಕೆ ನಗರಸೇವಕ ಹಿಂದಿ ವಿರೋಧಿ ಪ್ರತಿಭಟನೆಯ ನೆಪದಲ್ಲಿ ಬಳೆ ಕದ್ದಿದ್ದಾನೆ. ಕಳ್ಳತನ ಮತ್ತು ಡಿಎಂಕೆ ಎಂದಿಗೂ ಬೇರ್ಪಡಿಸಲಾಗದು” ಎಂದು ಬರೆದಿದ್ದಾರೆ.
ಸಂಪಾದಕೀಯ ನಿಲುವು
|