ಬಂದೂಕಿನಿಂದ ಹೆದರಿಸಿ ದೇಣಿಗೆ ಪೆಟ್ಟಿಗೆಯನ್ನು ಒಡೆದರು
ಚಂದ್ರಾಪುರ – ಇಲ್ಲಿನ ದಾತಾಳಾ ರಸ್ತೆಯಲ್ಲಿರುವ ಪ್ರಸಿದ್ಧ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಜನವರಿ 11 ರಂದು ರಾತ್ರಿ 1 ಗಂಟೆ ಸುಮಾರಿಗೆ ಏಳು ಮಂದಿ ಬಂದೂಕುಧಾರಿಗಳು ದರೋಡೆ ಮಾಡಿದ್ದಾರೆ. ದೇವಸ್ಥಾನದಲ್ಲಿದ್ದ ಕಾವಲುಗಾರನೊಬ್ಬನ ಕೈ ಕಾಲು ಕಟ್ಟಿ ಹಾಕಿ ಒಂದು ಕೊಠಡಿಯೊಳಗೆ ಬಂಧಿಸಿಟ್ಟರು. ಕಾಣಿಕೆ ಪೆಟ್ಟಿಗೆ ಒಡೆದು ಲಕ್ಷಾಂತರ ಹಣ ದೋಚಿದ್ದಾರೆ. ಜನವರಿ 12 ರಂದು ಬೆಳಗ್ಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ದಾಖಲಾಗಿದೆ.
1. ದರೋಡೆಕೋರರು ದೇವಸ್ಥಾನಕ್ಕೆ ಪ್ರವೇಶಿಸಿದ ತಕ್ಷಣ ಸಿಸಿಟಿವಿ ಕ್ಯಾಮೆರಾ ಮೇಲೆ ಬಟ್ಟೆ ಹೊದಿಸಿದ್ದಾರೆ. ಹಾಗಾಗಿ ಆ ಸಿಸಿಟಿವಿಯಲ್ಲಿ ಯಾವುದೇ ಕಳ್ಳ ಸೆರೆಯಾಗಿಲ್ಲ. ಕಾವಲುಗಾರನಿಂದ 3 ಸಾವಿರ ರೂಪಾಯಿ ಹಾಗೆಯೇ ಅವನು ಯಾರನ್ನೂ ಸಂಪರ್ಕಿಸಬಾರದೆಂದು; ಕಳ್ಳರು ಅವನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
2. ತಿರುಪತಿ ಬಾಲಾಜಿ ದೇವಸ್ಥಾನವು ದಾತಾಳಾ ಮಾರ್ಗದಲ್ಲಿ ಈರೈ ನದಿಯ ದಡದಲ್ಲಿದೆ. ಜನವರಿ 11ರ ತಡರಾತ್ರಿ ವ್ಯಕ್ತಿಯೊಬ್ಬ ದೇವಸ್ಥಾನಕ್ಕೆ ಬಂದಿದ್ದಾನೆ. ಅವನು ಇಡೀ ದೇವಸ್ಥಾನವನ್ನು ಪರಿಶೀಲಿಸಿದನು. ಗರ್ಭಗುಡಿಯನ್ನು ನೋಡಿದ ನಂತರ ಅವನು ಹೊರಟುಹೋದನು.
3. ಆನಂತರ ಮಧ್ಯರಾತ್ರಿ 1 ಗಂಟೆಗೆ 7 ಶಸ್ತ್ರಸಜ್ಜಿತ ದರೋಡೆಕೋರರು ದೇವಸ್ಥಾನದ ಒಳಗೆ ಪ್ರವೇಶಿಸಿದ್ದಾರೆ. ಕಾಣಿಕೆ ಪೆಟ್ಟಿಗೆಯನ್ನು ಒಡೆದ ನಂತರ, ಎಲ್ಲಾ ಏಳು ಕಳ್ಳರು ತಿರುಪತಿ ಬಾಲಾಜಿಯ ವಿಗ್ರಹವನ್ನು ಹೊಂದಿರುವ ದೇವಾಲಯದ ಬಾಗಿಲುಗಳು ಹಾಗೆಯೇ ಪಕ್ಕದ ದೇವಾಲಯದ ಬಾಗಿಲುಗಳನ್ನು ಒಡೆಯಲು ಪ್ರಯತ್ನಿಸಿದ್ದಾರೆ; ಆದರೆ ಅದರ ಬೀಗ ಮುರಿಯದ ಕಾರಣ ಕಳ್ಳರು ಪರಾರಿಯಾಗಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ಅಸುರಕ್ಷಿತ ದೇವಾಲಯಗಳು ! |