ಪಂಢರಪುರದ ಪಾದಯಾತ್ರೆಗಾಗಿ (ವಾರಕರಿಗೆ) ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ !

ಕೊರೊನಾದಿಂದಾಗಿ ಕಳೆದ ವರ್ಷ ಪಂಢರಪುರ ಪಾದಯಾತ್ರೆಯನ್ನು ರದ್ದುಪಡಿಸಲಾಗಿತ್ತು. ಈ ವರ್ಷವೂ ಕೂಡ ರಾಜ್ಯಸರಕಾರ ಪಾದಯಾತ್ರೆಗೆ ಅನುಮತಿ ನೀಡಲಿಲ್ಲ; ಆದರೆ ೧೦ ಮುಖ್ಯ ದಿಂಡಿಗಳಿಗೆ ಬಸ್ ಮೂಲಕ ಹೋಗಲು ಅನುಮತಿ ನೀಡಲಾಗಿದೆ.

ಬಕ್ರೀದ್ ಗಾಗಿ ಕೊರೋನಾ ನಿಯಮದ ಸಡಿಲಿಕೆ, ಕೇರಳದ ಸರಕಾರದ ಬಳಿ ಉತ್ತರ ಕೋರಿದ ಸರ್ವೋಚ್ಚ ನ್ಯಾಯಾಲಯ !

ಬಕ್ರೀದ್ ಗಾಗಿ ಕೇರಳದ ಕಮ್ಯುನಿಸ್ಟ ಸರಕಾರವು ಕೊರೋನಾದ ನಿಯಗಳನ್ನು ಸಡಿಲಗೊಳಿಸಿದೆ. ಇದನ್ನು ಪ್ರಶ್ನಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (‘ಐ.ಎಮ್.ಎ.’ಯು) ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಆಲಿಕೆ ಮಾಡುವಾಗ ಈ ಬಗ್ಗೆ ಉತ್ತರಿಸುವಂತೆ ಸರಕಾರಕ್ಕೆ ಆದೇಶ ನೀಡಿದೆ.

ದೇಶದಲ್ಲಿ ೨೦೧೪ ರಿಂದ ೨೦೧೯ ಈ ಕಾಲಾವಧಿಯಲ್ಲಿ ಒಟ್ಟು ೩೨೬ ದೇಶದ್ರೋಹದ ಅಪರಾಧದ ಪ್ರಕರಣದಲ್ಲಿ ಕೇವಲ ೬ ಜನರಿಗೆ ಮಾತ್ರ ಶಿಕ್ಷೆ ! – ಕೇಂದ್ರ ಗೃಹ ಮಂತ್ರಾಲಯದ ಮಾಹಿತಿ

ದೇಶದಲ್ಲಿ ಅಪರಾಧಿಗಳಿಗೆ ಅನೇಕ ವರ್ಷಗಳ ನಂತರವೂ ಶಿಕ್ಷೆಯಾಗದೇ ಇದ್ದಲ್ಲಿ, ಅಪರಾಧಗಳು ಎಂದಾದರೂ ಕಡಿಮೆಯಾಗಬಹುದೇನು ? ಈ ಸ್ಥಿತಿಯು ಇಂದಿನವರೆಗಿನ ಎಲ್ಲಾ ಪಕ್ಷದ ರಾಜ್ಯಕರ್ತರಿಗೆ ನಾಚಿಕೆಯ ವಿಷಯವಾಗಿದೆ !

ಸರ್ವೋಚ್ಚ ನ್ಯಾಯಾಲಯದ ಎಚ್ಚರಿಕೆಯ ನಂತರ ಉತ್ತರಪ್ರದೇಶದ ಕಾವಡ ಯಾತ್ರೆ ರದ್ದು !

ಸರ್ವೋಚ್ಚ ನ್ಯಾಯಾಲಯ ನೀಡಿದ ಎಚ್ಚರಿಕೆಯ ನಂತರ, ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿ ಕಾವಡ ಯಾತ್ರೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದೆ. ಜುಲೈ ೨೫ ರಿಂದ ಆಗಸ್ಟ್ ೬ ರವರೆಗೆ ಯಾತ್ರೆ ನಡೆಯಬೇಕಿತ್ತು.

ಕಾವಡ ಯಾತ್ರೆಗೆ ಅನುಮತಿ ಬಗ್ಗೆ ಪುನರ್ವಿಚಾರ ಮಾಡಿ ಇಲ್ಲದಿದ್ದರೆ ನಮಗೆ ಆದೇಶ ನೀಡಬೇಕಾಗುತ್ತದೆ ! – ಸರ್ವೋಚ್ಚ ನ್ಯಾಯಾಲಯದಿಂದ ಉತ್ತರಪ್ರದೇಶ ಸರಕಾರಕ್ಕೆ ಎಚ್ಚರಿಕೆ

ಉತ್ತರಪ್ರದೇಶ ಸರಕಾರವು ಕಾವಡ ಯಾತ್ರೆಗೆ ನೀಡಿದ ಅನುಮತಿಯ ಆದೇಶದ ಬಗ್ಗೆ ಪುನರ್ವಿಚಾರ ಮಾಡಬೇಕು ಇಲ್ಲದಿದ್ದರೆ ನಮಗೆ ಯೋಗ್ಯವಾದ ಆದೇಶ ನೀಡಬೇಕಾಗಬಹುದು, ಎಂದು ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದೆ.

ಲೋಕಮಾನ್ಯ ತಿಲಕ ಮತ್ತು ಗಾಂಧಿಯ ವಿರುದ್ಧ ಉಪಯೋಗಿಸಿದ್ದ ಬ್ರಿಟೀಷರ ‘ದೇಶದ್ರೋಹಿ ಕಾನೂನು’ ಈಗ ಅಗತ್ಯವೇ ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

‘ದೇಶದ್ರೋಹ ಕಾನೂನು’ ಇದು ಬ್ರಿಟಿಷರ ಕಾನೂನು ಆಗಿದೆ. ಬ್ರಿಟಿಷರು ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅದನ್ನು ಉಪಯೋಗಿಸಿದ್ದರು ಅದನ್ನು ಮ. ಗಾಂಧಿ ಮತ್ತು ಲೋಕಮಾನ್ಯ ತಿಲಕ ಇವರ ವಿರುದ್ಧ ಉಪಯೋಗಿಸಲಾಗಿತ್ತು.

ಕೊರೊನಾ ಕಾಲಾವಧಿಯಲ್ಲಿ ಕಾವಡ ಯಾತ್ರೆಗೆ ಅನುಮತಿ ಏಕೆ ?

ಈ ವರ್ಷ ಜುಲೈ ೨೫ ರಿಂದ ಉತ್ತರಪ್ರದೇಶದಲ್ಲಿ ಕಾವಡ ಯಾತ್ರೆ ಪ್ರಾರಂಭವಾಗಲಿದೆ. ಕೆಲವು ಷರತ್ತುಗಳೊಂದಿಗೆ ಅದಕ್ಕೆ ಸರಕಾರವು ಅನುಮತಿಸಿದೆ. ಉತ್ತರಪ್ರದೇಶ ಸರಕಾರದ ಅನುಮತಿಯ ನಂತರ, ಅನುಮತಿ ನಿರಾಕರಿಸುವ ನಿರ್ಧಾರವನ್ನು ಮರುಪರಿಶೀಲಿಸುವುದಾಗಿ ಉತ್ತರಾಖಂಡ ಸರಕಾರವು ಹೇಳಿದೆ.

ಶೇರ್ ಬಹದ್ದೂರ್ ದೆವುಬಾನನ್ನು ಪ್ರಧಾನಿಯನ್ನಾಗಿಸಬೇಕೆಂದು ನೇಪಾಲದ ಸರ್ವೋಚ್ಚ ನ್ಯಾಯಾಲಯದ ಆದೇಶ

ನೇಪಾಲದ ಸರ್ವೋಚ್ಚ ನ್ಯಾಯಾಲಯವು ಉಸ್ತುವಾರಿ ಪ್ರಧಾನಿ ಕೆ.ಪಿ. ಶರ್ಮಾ ಓಲಿಗೆ ‘ವಿರೋಧಿ ಪಕ್ಷವಾಗಿರುವ ನೇಪಾಲಿ ಕಾಂಗ್ರೆಸ್‍ನ ಅಧ್ಯಕ್ಷ ಶೇರ ಬಹಾದೂರ್ ದೆಉಬಾ ಇವರನ್ನು ೨ ದಿನದೊಳಗೆ ದೇಶದ ಪ್ರಧಾನಿಯನ್ನಾಗಿ ಮಾಡಿ’, ಎಂದು ಆದೇಶ ನೀಡಿದೆ. ಅದೇ ರೀತಿ ಸಂಸತ್ತನ್ನು ವಿಸರ್ಜಿಸುವ ಆದೇಶವನ್ನೂ ರದ್ದು ಪಡಿಸಿದೆ.

ಟ್ವಿಟರ್ ನಿಂದ ದೂರು ನಿವಾರಣೆ ಅಧಿಕಾರಿಯೆಂದು ವಿನಯ ಪ್ರಕಾಶ್ ಇವರ ನೇಮಕ

ಕೇಂದ್ರ ಸರಕಾರವು ನೂತನವಾಗಿ ಜಾರಿಗೆ ತಂದಿರುವ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಆರಂಭದಲ್ಲಿ ಟ್ವಿಟರ್ ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಟ್ವಿಟರ್ ಅವುಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿತ್ತು. ಅದಕ್ಕನುಸಾರ ದೂರು ನಿವಾರಣೆ ಅಧಿಕಾರಿಯನ್ನು ನೇಮಿಸಲಾಗಿದೆ.

ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶ ದೊರಕಿರುವುದು ನನ್ನ ಭಾಗ್ಯ!- ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಇಂದು ‘ಹಿಂದೂ ಇಕೋಸಿಸ್ಟಂ’ ಸಂಘಟನೆಯು ರಾಷ್ಟ್ರ ಮತ್ತು ಧರ್ಮಗಳಿಗಾಗಿ ಹೋರಾಡುವ ನ್ಯಾಯವಾದಿಗಳನ್ನು ಗೌರವಿಸುವ ಅವಕಾಶವನ್ನು ನನಗೆ ಲಭಿಸಿದೆ ಮತ್ತು ಅವರು ಮಾಡಿರುವ ಕಾರ್ಯಗಳನ್ನು ಅರಿಯಲು ನನಗೆ ಸಾಧ್ಯವಾಗಿರುವುದು ನನ್ನ ಭಾಗ್ಯವೆಂದು ತಿಳಿಯುತ್ತೇನೆ ಎಂದು ಕೇಂದ್ರ ಸಚಿವಗಿರಿರಾಜ್ ಸಿಂಗ್ ಇವರು ಪ್ರತಿಪಾದಿಸಿದರು.