ಕರ್ಣಾವತಿ (ಗುಜರಾತ) ಬಾಂಬ್ ಸ್ಫೋಟದ ಪ್ರಕರಣದ ತೀರ್ಪಿನ ವಿರುದ್ಧ ಗುಜರಾತ್ ಉಚ್ಛ ನ್ಯಾಯಾಲಯಕ್ಕೆ ಹೋಗುವೆವು ! – ಜಮೀಯತ್ ಉಲೇಮಾ-ಎ-ಹಿಂದ

ಮತಾಂಧರಿಗೆ ಯಾವಾಗಲೂ ನ್ಯಾಯಾಲಯದ ಅವರ ವಿರೋಧದಲ್ಲಿ ನೀಡಿರುವ ತೀರ್ಪು ಸ್ವೀಕಾರ ಆಗುವುದಿಲ್ಲ. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಏನಾದರೂ ಕನಿಷ್ಠ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದರೆ, ಆದರೂ ಅದು ಅವರಿಂದ ಸ್ವೀಕರಿಸಲಾಗುವುದಿಲ್ಲ. ಶ್ರೀ ರಾಮ ಜನ್ಮಭೂಮಿಯ ತೀರ್ಪು ಸಹ ಅವರಿಗೆ ಸ್ವೀಕಾರ ಆಗಿರಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು 

ಜಮೀಯತ್ ಉಲೇಮಾ-ಎ-ಹಿಂದ ಈ ಸಂಘಟನೆಯ ಅಧ್ಯಕ್ಷ ಮೌಲಾನ ಅರ್ಷದ್ ಮದನಿ

ನವ ದೆಹಲಿ – ಜಮೀಯತ್ ಉಲೇಮಾ-ಎ-ಹಿಂದ ಈ ಸಂಘಟನೆಯ ಅಧ್ಯಕ್ಷ ಮೌಲಾನ (ಇಸ್ಲಾಂ ಧಾರ್ಮಿಕ ನಾಯಕ) ಅರ್ಷದ್ ಮದನಿ ಇವರು 2008 ರಲ್ಲಿ ಕರ್ಣಾವತಿ (ಗುಜರಾತ) ಇಲ್ಲಿಯ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ತೀರ್ಪಿಗೆ ಉಚ್ಚನ್ಯಾಯಾಲಯದಲ್ಲಿ ಸವಾಲು ನೀಡಲಾಗುವುದು, ಎಂದು ಅವರು ಹೇಳಿದರು.

ಮೌಲಾನಾ ರ್ಷದ್ ಮದನಿ, “ಈ ಮೊದಲು ಗುಜರಾತ್‍ನ ಅಕ್ಷರಧಾಮ ಮಂದಿರದ ಮೇಲೆ ಆಕ್ರಮಣದ ಪ್ರಕರಣದಲ್ಲಿ 3 ಜನರಿಗೆ ಗಲ್ಲು ಶಿಕ್ಷೆ ಹಾಗೂ 4 ಜನರಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಉಚ್ಚ ನ್ಯಾಯಾಲಯವು ಕನಿಷ್ಠ ನ್ಯಾಯಾಲಯದ ತೀರ್ಪಿಗೆ ಎತ್ತಿಹಿಡಿದಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯವು ಎಲ್ಲರನ್ನು ಖುಲಾಸೆ ಗೊಳಿಸಿತ್ತು. ಇಷ್ಟೇ ಅಲ್ಲದೆ, ನ್ಯಾಯಾಲಯವು ನಿರಪರಾಧಿಗಳನ್ನು ಇದರಲ್ಲಿ ಸಿಲುಕಿಸಿದ್ದರಿಂದ ತರಾಟೆಗೆ ತೆಗೆದೊಕೊಂಡಿತ್ತು. ಈ ಪ್ರಕರಣದಲ್ಲಿಯೂ ಹಾಗೆ ಆಗುವುದು”. ಎಂದು ಹೇಳಿದರು. (ಹಾಗೇನಾದರೂ ಆಗದಿದ್ದರೆ, ಆಗ ಮದನಿ ನ್ಯಾಯಾಲಯದ ತೀರ್ಪು ಸ್ವೀಕಾರ ಮಾಡುವರೆ ? – ಸಂಪಾದಕರು)