ಸಮಾನತೆ ಹಾಗೂ ರಾಷ್ಟ್ರೀಯ ಐಕ್ಯತೆಗಾಗಿ ಸಮವಸ್ತ್ರವನ್ನು ಜಾರಿಗೊಳಿಸಿ ! – ಸವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ನವ ದೆಹಲಿ – ಸಮಾನತೆ ಹಾಗೂ ರಾಷ್ಟ್ರೀಯ ಐಕ್ಯತೆಗೆ ಚಾಲನೆ ನೀಡಲು ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಾನವಾದ ಸಮವಸ್ತ್ರವನ್ನು ಜಾರಿಗೊಳಿಸಬೇಕು ಹಾಗೂ ಅದಕ್ಕಾಗಿ ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶವನ್ನು ನೀಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ನಿಖಿಲ್ ಉಪಾಧ್ಯಾಯರು ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಹಾಗೂ ನ್ಯಾಯವಾದಿ ಶ್ರೀ. ಅಶ್ವಿನಿ ದುಬೆ ಇವರ ಮೂಲಕ ಈ ಅರ್ಜಿಯನ್ನು ದಾಖಲಿಸಲಾಗಿದೆ.

ಈ ಅರ್ಜಿಯಲ್ಲಿ `ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಸಮಾಜವಾದ, ಜಾತ್ಯತೀತ, ಸಹೋದರತ್ವ ಹಾಗೂ ರಾಷ್ಟ್ರೀಯ ಐಕ್ಯತೆಯ ಭಾವನೆಯು ನಿರ್ಮಾಣವಾಗಲಿ ಇದಕ್ಕಾಗಿ ನ್ಯಾಯಾಲಯದ ಆಯೋಗ ಅಥವಾ ತಜ್ಞರ ಸಮಿತಿಯ ಸ್ಥಾಫನೆ ಮಾಡುವುದಕ್ಕಾಗಿ ಕೇಂದ್ರಕ್ಕೆ ಆದೇಶ ನೀಡಬೇಕು. ಸಂವಿಧಾನದ ಹಾಗೂ ಮೂಲಭೂತ ಅಧಿಕಾರಗಳ ರಕ್ಷಕವೆಂದು ಭಾರತೀಯ ವಿಧಿ ಆಯೋಗಕ್ಕೆ 3 ತಿಂಗಳಳೊಳಗೆ ಉಪಾಯಯೋಜನೆ ಸೂಚಿಸುವ ವರದಿಯನ್ನು ಸಿದ್ಧಗೊಳಿಸುವಂತೆ ಆದೇಶವನ್ನು ನೀಡಬೇಕು’, ಎಂದು ಬೇಡಿಕೆ ಮಾಡಲಾಗಿದೆ.