ಬೆಂಗಳೂರಿನ ದಂಗೆಯ ಪ್ರಕರಣದಲ್ಲಿ ಮತಾಂಧನಿಗೆ ಜಾಮೀನು ನೀಡಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ !

ದೆಹಲಿ – ಸರ್ವೋಚ್ಚ ನ್ಯಾಯಾಲಯವು ೨೦೨೦ರಲ್ಲಿ ನಡೆದ ಬೆಂಗಳೂರಿನ ದಂಗೆಯ ಪ್ರಕರಣದ ಆರೋಪಿಯಾದ ಮಹಮ್ಮದ ಕಲೀಮನಿಗೆ ಜಾಮೀನು ನೀಡಲು ನಿರಾಕರಿಸಿದೆ. ಕಲೀಮನು ಜಾಮೀನಿಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದನು. ಫೆಬ್ರುವರಿ ೨೮ರಂದು ಈ ಅರ್ಜಿಯನ್ನು ತಿರಸ್ಕರಿಸಲಾಯಿತು. ಈ ಹಿಂದೆಯೂ ಕಲೀಮನು ಉಚ್ಚ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಲಯದ ಜಾಮೀನು ನೀಡದಿರುವ ತೀರ್ಪಿಗೆ ಸವಾಲು ಹಾಕಿದ್ದನು; ಆದರೆ ಉಚ್ಚ ನ್ಯಾಯಾಲಯವು ವಿಶೇಷ ನ್ಯಾಯಾಲಯದ ಜಾಮೀನು ತಿರಸ್ಕರಿಸಿರುವ ನಿರ್ಣಯವನ್ನು ಸಮರ್ಥಿಸಿತ್ತು. ಅನಂತರ ಅವನು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದನು. ಸರ್ವೋಚ್ಚ ನ್ಯಾಯಾಲಯದ ೨ ಸದಸ್ಯರ ವಿಭಾಗೀಯ ಪೀಠದ ಬಳಿ ಈ ಆಲಿಕೆ ನಡೆದಿತ್ತು.
ಕರ್ನಾಟಕ ಉಚ್ಚ ನ್ಯಾಯಾಲಯವು ವಿಶೇಷ ನ್ಯಾಯಾಲಯದ ತೀರ್ಪನ್ನು ಸಮರ್ಥಿಸುತ್ತ ‘ಅನೇಕ ಪುರಾವೆಗಳ ತಪಾಸಣೆಯಿಂದ ಕಲೀಮನು ದಂಗೆಯ ಸಮಯದಲ್ಲಿ ಅಲ್ಲಿ ಉಪಸ್ಥಿತನಿದ್ದನು ಮತ್ತು ಅವನು ಸರಕಾರಿ ಮತ್ತು ವೈಯಕ್ತಿಕ ಮಾಲಿಕತ್ವದ ಸಂಪತ್ತಿನ ಹಾನಿ ಮಾಡಿದ್ದಾನೆ. ಆ ಸಮಯದಲ್ಲಿ ಪೊಲೀಸರ ಮೇಲೆಯೂ ಆಕ್ರಮಣ ಮಾಡಿ ಜನರ ಮನಸ್ಸಿನಲ್ಲಿ ಭಯ ನಿರ್ಮಾಣ ಮಾಡಿದನು’ ಎಂದು ಹೇಳಿದೆ.

ಅಗಸ್ಟ ೧೧, ೨೦೨೦ರಂದು ಬೆಂಗಳೂರಿನಲ್ಲಿ ದಂಗೆ ನಡೆದಿತ್ತು !

ಅಗಸ್ಟ ೧೧, ೨೦೨೦ರಂದು ಕಾಂಗ್ರೆಸ್ಸಿನ ಶಾಸಕರಾದ ಶ್ರೀನಿವಾಸ ಮೂರ್ತಿಯವರ ಸಂಬಂಧಿಯು ಮಹಮ್ಮದ ಪೈಗಂಬರರ ಬಗೆಗಿನ ಕಥಿತ ಆಕ್ಷೇಪಾರ್ಹ ಪೋಸ್ಟನ್ನು ಪ್ರಸಾರ ಮಾಡಿರುವುದಾಗಿ ಆರೋಪಿಸಿ ೨೦೦ ರಿಂದ ೩೦೦ ಮತಾಂಧರು ಮೂರ್ತಿಯವರ ವಾಹನದ ಮೇಲೆ ಆಕ್ರಮಣ ಮಾಡುತ್ತ ಕಟ್ಟಡವನ್ನು ಒಡೆದು ಹಾಕಿದರು. ಈ ಸಮಯದಲ್ಲಿ ಅವರು ಪೊಲೀಸರ ವಾಹನಗಳಿಗೂ ಬೆಂಕಿ ಹಚ್ಚಿದರು. ಈ ದಂಗೆಯ ಸಮಯದಲ್ಲಿ ೨ ಪೊಲೀಸ ಠಾಣೆಗಳ ಮೇಲೆ ಆಕ್ರಮಣ ಮಾಡಿ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟವನ್ನೂ ಮಾಡಲಾಗಿತ್ತು.