ಭಾರತದಲ್ಲಿ ಗಲಭೆಕೊರರಿಂದ ನಷ್ಟ ಪರಿಹಾರವನ್ನು ವಸೂಲಿ ಮಾಡಲು ವಿರೋಧ ವ್ಯಕ್ತವಾಗುತ್ತದೆ, ಆದರೆ ಕೆನಡಾದಲ್ಲಿ ಯಾವುದೇ ಸೂಕ್ತ ಪ್ರಕ್ರಿಯೆಯಿಲ್ಲದೆ ಅರೋಪಿಗಳೆಂದು ನಿರ್ಧರಿಸಲಾಗುತ್ತದೆ ! – ಚಿಂತಕ ಬ್ರಹ್ಮ ಚೆಲಾನಿ

ಹೊಸ ದೇಹಲಿ – ಭಾರತದ ಸರ್ವೋಚ್ಚ ನ್ಯಾಯಾಲಯವು ರಾಜ್ಯವೊಂದರ ಅಧಿಖಾರಿಗಳಿಗೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡಿದ್ದಕ್ಕಾಗಿ ಗಲಭೆಕೊರರಿಗೆ ನೀಡಿದ ನೋಟಿಸ್ ಹಿಂಪಡೆಯುವಂತೆ ಮಾಡಿತು. ಮತ್ತೊಂದೆಡೆ, ಕೆನಡಾದಲ್ಲಿ ಶಾಂತಿಯುತ ಚಳುವಳಿಯು ಸೂಕ್ತ ಪ್ರಕ್ರಿಯೆಯಿಲ್ಲದೆ ಅಪರಾಧವೆಂದು ನಿರ್ಧರಿಸಲಾಗುತ್ತದೆ. ಪ್ರತಿಭಟನಾಕಾರರ ವೈಯಕ್ತಿಕ ಬ್ಯಾಂಕ್ ಖಾತೆಗಳು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ, ಎಂದು ಪತ್ರಕರ್ತ ಮತ್ತು ಚಿಂತಕ ಬ್ರಹ್ಮ ಚೆಲಾನಿ ಇವರು ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ, ತಿದ್ದುಪಡಿ ಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ನಷ್ಟ ಪರಿಹಾರವನ್ನು ವಸೂಲಿ ಮಾಡುವಂತೆ ಕೋರಿ ಗಲಭೆಕೊರರಿಗೆ ರಾಜ್ಯ ಸರಕಾರ ನೋಟಿಸ್ ನೀಡಿತ್ತು. ಅದನ್ನು ಹಿಂಪಡೆಯುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿತ್ತು. ಬ್ರಹ್ಮ ಚೆಲಾನಿ ಇದನ್ನು ಕೆನಡಾದಲ್ಲಿ ಕಡ್ಡಾಯವಾದ ಕರೋನಾ ಲಸಿಕೆ ವಿರುದ್ಧದ ಚಳುವಳಿಗೆ ಹೋಲಿಸಿದ್ದಾರೆ.