ಹಿಜಾಬ್ ಪ್ರಥೆಯು ಸಂವಿಧಾನಾತ್ಮಕ ನೈತಿಕತೆಯ ಪರೀಕ್ಷೆಯನ್ನು ಪೂರ್ಣಗೊಳಿಸುತ್ತದೆಯೇ ?

ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಸರಕಾರದ ಉಚ್ಚನ್ಯಾಯಾಲಯದಲ್ಲಿ ಪ್ರಶ್ನೆ

ಬೆಂಗಳೂರು – ಕೇರಳದ ಶಬರಿಮಲೆ ದೇವಸ್ಥಾನದೊಳಗೆ 10 ರಿಂದ 50 ವರ್ಷದ ವಯಸ್ಸಿನ ಮಹಿಳೆಯರಿಗೆ ಪ್ರವೇಶಜ ಪ್ರಕರಣದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ನೈತಿಕತೆಯ ಹಾಗೂ ವ್ಯಕ್ತಿಯ ಗೌರವದ ಪರೀಕ್ಷೆಯನ್ನು ಸ್ಪಷ್ಟ ಮಾಡಿದೆ. ಈ ಪರೀಕ್ಷೆಯಲ್ಲಿ ಹಿಜಾಬ್ (ಮುಸಲ್ಮಾನ ಮಹಿಳೆಯರು ತಲೆಗೆ ಹಾಗೂ ಕುತ್ತಿಗೆಯನ್ನು ಮುಚ್ಚುವ ವಸ್ತ್ರ)ಹಾಕುವ ಪದ್ದತಿಯು ಉಳಿಯುತ್ತದೆಯೇ ?, ಇದನ್ನು ನೋಡಬೇಕು ಎಂದು ಸರಕಾರವು ಹಿಜಾಬ್ ಪ್ರಕರಣದ ಬೇಡಿಕೆಯ ಮೇಲಿನ ಅರ್ಜಿಯ ವಿಚಾರಣೆಯ ಸಮಯದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹೇಳಿದೆ.

ಕರ್ನಾಟಕದ ಮಹಾ ನ್ಯಾಯವದಿಯು ಯುಕ್ತಿವಾದ ಮಾಡುವಾಗ, ‘ಕರ್ನಾಟಕ ಸರಕಾರದ ಫೆಬ್ರವರಿ 5 ರ ಆದೇಶದಿಂದ ಸಂವಿಧಾನದ ಕಲಂ 25 ಹಾಗೆಯೇ ಕಲಂ 19(1) (ಅ)ದ ಕೂಡ ಉಲ್ಲಂಘನೆಯಾಗಿಲ್ಲ, ರಾಜ್ಯ ಸರಕಾರದ ಈ ಆದೇಶ ಕಾನೂನಿನನುಸಾರವಾಗಿದ್ದು ಅದರಲ್ಲಿ ಆಕ್ಷೇಪವನ್ನು ತೆಗೆಯುವಂತೆ ಏನೂ ಇಲ್ಲ.’ ಈ ಕಲಂ ಮೂಲಕ ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದರು.