ದೇಶದ ೭೭೫ ಜಿಲ್ಲೆಗಳ ಪೈಕಿ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರು !

ಎಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಅಲ್ಲಿ ರಾಜ್ಯ ಸರಕಾರ ಅವರನ್ನು ಅಲ್ಪಸಂಖ್ಯಾತರೆಂದು ಘೋಷಿಸಬಹುದು ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜಿಲ್ಲಾವಾರು ಜನಸಂಖ್ಯೆಯನ್ನು ಗಮನಿಸಿದರೆ ದೇಶದ ೧೦೨ ಜಿಲ್ಲೆಗಳಲ್ಲಿ ಹಿಂದೂ ಅಲ್ಪಸಂಖ್ಯಾತರಿದ್ದಾರೆ.

ಸಿಬಿಐ ತನ್ನ ಕಳೆದುಕೊಂಡಿರುವ ವಿಶ್ವಾಸವನ್ನು ಪುನಃ ಗಳಿಸಲು ರಾಜಕಾರಣಿಗಳ ಜೊತೆಗಿನ ಸಂಬಂಧ ಮುರಿಯಬೇಕು !

ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿಶ್ವಾಸ ಕಳೆದುಕೊಂಡಿದೆ. ನಿಮಗೆ ವಿಶ್ವಾಸ ಮತ್ತೆ ಗಳಿಸಬೇಕಿದ್ದರೆ, ಮೊದಲು ನೀವು ರಾಜಕಾರಣಿಗಳ ಜೊತೆಗಿರುವ ಸಂಬಂಧ ಕಳೆದುಕೊಳ್ಳಬೇಕು ಮತ್ತು ವಿಶ್ವಾಸ ಪುನಃ ಗಳಿಸಲು ಮತ್ತೆ ಕೆಲಸ ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಹೇಳಿದರು.

ತಮಿಳುನಾಡು ಸರಕಾರವು ವಾನಿಯಾರ ಸಮಾಜಕ್ಕೆ ನೀಡಿರುವ ಮೀಸಲಾತಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ರದ್ದು !

ತಮಿಳುನಾಡು ಸರಕಾರವು ರಾಜ್ಯದ ವಾನಿಯಾರ ಸಮಾಜಕ್ಕೆ ಓಬಿಸಿ ಮೀಸಲಾತಿ ಕೋಟಾದಡಿಯಲ್ಲಿ ಶೇ. ೧೦.೫ ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. ಈ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ.

ಹಿಜಾಬ್ ಪ್ರಿಯರಿಗೊಂದು ಆಘಾತ

ಈ ಎಲ್ಲಾ ವಿವಾದಗಳಿಂದ ಕಲಿಯಬೇಕಾದ ಪಾಠ ಏನೆಂದರೆ, ಹಿಂದೂಗಳ ಸಂಘಟನೆ ಬೆಳೆಯುತ್ತಿದ್ದಂತೆ, ಹಿಂದೂಗಳು ಜಾಗೃತರಾಗುತ್ತಿದ್ದಾರೆ, ಹಿಂದೂವಿರೋಧಿಗಳು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಒಂದಲ್ಲ ಒಂದು ಕಾರಣಕ್ಕಾಗಿ ಮತಾಂಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿನ ಬೀದಿ ನಾಯಿಗಳ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ !

ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದವರೆಗೂ ಬೀದಿ ನಾಯಿಯ ಸಮಸ್ಯೆ ಬಗೆಹರಿಸದಿರುವ ಏಕೈಕ ದೇಶವೆಂದರೆ ಭಾರತ !

ಮನೆ ಬಾಡಿಗೆ ಕೊಡದಿರುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯ

ಬಾಡಿಗೆದಾರನು ಅಡಚಣೆಯಿಂದ ಮನೆ ಬಾಡಿಗೆಯನ್ನು ಕೊಡದಿರುವುದು, ಇದು ಅಪರಾಧವಲ್ಲ ಎಂದು ಹೇಳಿ ಸರ್ವೋಚ್ಚ ನ್ಯಾಯಾಲಯವು ಓರ್ವ ಮನೆ ಮಾಲೀಕನು ಅವನ ಬಾಡಿಗೆದಾರನ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ನಿರಾಕರಿಸಿದೆ

`ದ ಕಶ್ಮೀರ ಫೈಲ್ಸ್’ ಚಲನಚಿತ್ರವನ್ನು ನಿಷೇಧಿಸಿ ಇಲ್ಲವಾದರೆ ಧಾರ್ಮಿಕ ಬಿರುಕು ನಿರ್ಮಾಣವಾಗಬಹುದು !’ – ಶಾಸಕ ಬದರುದ್ದಿನ್ ಅಜ್ಮಲ

ಶಾಸಕ ಅಜ್ಮಲ ಇವರ ಈ ಬೇಡಿಕೆ ಎಂದರೆ ಸತ್ಯವನ್ನು ಮುಚ್ಚಿಡುವ ಪ್ರಯತ್ನವಾಗಿದೆ, ಹೀಗೆ ಅಸತ್ಯದ ಪರವಹಿಸುವ ಶಾಸಕ ಹೇಗೆ ಆಡಳಿತ ನಡೆಸುತ್ತಿರಬಹುದು, ಇದರ ವಿಚಾರ ಮಾಡದೇ ಇರುವುದೇ ಒಳ್ಳೆಯದು !

ಹಿಜಾಬ ನಿರ್ಬಂಧದ ಮೇಲೆ ಕರ್ನಾಟಕ ಉಚ್ಚ ನ್ಯಾಯಾಲಯದ ಅಸ್ತು !

ಕೊನೆಗೂ ಅನೇಕ ವಾರಗಳಿಂದ ಬಾಕಿ ಉಳಿದಿದ್ದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಧರಿಸುವುದರ ಮೇಲಿನ ನಿರ್ಬಂಧದ ಸಂದರ್ಭದಲ್ಲಿನ ತೀರ್ಪು ಬಂದೇ ಬಿಟ್ಟಿತು. ಕರ್ನಾಟಕ ಉಚ್ಚ ನ್ಯಾಯಾಲಯವು ‘ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಹಿಜಾಬನ್ನು ಧರಿಸಲು ನಿರ್ಬಂಧವಿರಲಿದೆ’ ಎಂದು ತೀರ್ಪು ನೀಡಿದೆ.

ಕಳೆದ ೨೫ ವರ್ಷಗಳಿಂದ ಪಾಕಿಸ್ತಾನದ ಜೈಲಿನಲ್ಲಿರುವ ಸೇನಾಧಿಕಾರಿಯ ಮಗನನ್ನು ಬಿಡುಗಡೆ ಮಾಡುವಂತೆ ವೃದ್ಧ ತಾಯಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ !

ಕಳೆದ ೨೫ ವರ್ಷಗಳಿಂದ ಪಾಕಿಸ್ತಾನದ ಸೆರೆಮನೆಯಲ್ಲಿರುವ ಸೇನಾಧಿಕಾರಿಯನ್ನು ಬಿಡುಗಡೆ ಮಾಡುವಂತೆ ಕೋರಿ ಅತನ ತಾಯಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಮಗನ ಬಿಡುಗಡೆಗೆ ರಾಜಕೀಯ ಮಟ್ಟದಲ್ಲಿ ಪ್ರಯತ್ನ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಆದೇಶ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.

‘ಲವ್ ಜಿಹಾದ್’ನಲ್ಲಿ ಸಿಲುಕಿರುವ ಹಿಂದೂ ಸ್ತ್ರೀಯರೇ, ಇಸ್ಲಾಮೀ ಕಾನೂನುಗಳ ಬಗ್ಗೆ ನಿಮಗೆ ಇದು ತಿಳಿದಿದೆಯೇ ?

ಆದುದರಿಂದ ಧರ್ಮವನ್ನು ಬದಲಾಯಿಸಿದರೆ, ಅವನು ಒಂದು ರೀತಿಯಲ್ಲಿ ಸಮಾಜದಿಂದ ಬಹಿಷ್ಕೃತನಾಗುತ್ತಾನೆ. ಮುಸಲ್ಮಾನನು ಮತಾಂತರಗೊಂಡರೆ, ಅವನಿಗೆ ಅವನ ಮುಸ್ಲಿಂ ಪತ್ನಿಯೊಂದಿಗಿರುವ ಸಂಬಂಧ ತಾನಾಗಿಯೇ ಕಡಿದುಹೋಗುತ್ತದೆ.