ಮೊದಲು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಆಲಿಕೆಯಾಗಲಿ ! – ಸರ್ವೋಚ್ಚ ನ್ಯಾಯಾಲಯ

ಕರ್ನಾಟಕದಲ್ಲಿನ ಹಿಜಾಬಿನ ಪ್ರಕರಣದಲ್ಲಿ ತಕ್ಷಣ ತೀರ್ಪು ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ

ನವದೆಹಲಿ– ಕರ್ನಾಟಕದಲ್ಲಿನ ಹಿಜಾಬ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಹಸ್ತಾಂತರಿಸುವ ಬಗ್ಗೆ ವಿನಂತಿಸುವ ಅರ್ಜಿಯ ಮೇಲೆ ತಕ್ಷಣ ಆಲಿಕೆ ನಡೆಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದೆ. ನ್ಯಾಯಾಲಯವು ಈ` ಪ್ರಕರಣವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಆಲಿಕೆಯಲ್ಲಿದೆ. ಈ ಹಂತದಲ್ಲಿ ಸರ್ವೋಚ್ಚ ನ್ಯಾಯಾಲಯವು ಏಕೆ ಹಸ್ತಕ್ಷೇಪ ಮಾಡಬೇಕು ?’ ಎಂಬ ಪ್ರಶ್ನೆಯನ್ನು ಕೇಳಿದೆ. ಕಾಂಗ್ರೆಸ್ ನೇತಾರ ಕಪಿಲ ಸಿಬ್ಬಲರವರು ಈ ಅರ್ಜಿಯನ್ನು ದಾಖಲಿಸಿದ್ದರು. ಸಿಬ್ಬಲರವರ ಬೇಡಿಕೆಗೆ ಸರ್ವೋಚ್ಚ ನ್ಯಾಯಾಲಯವು `ಬಹುಶಃ ಕರ್ನಾಟಕ ಉಚ್ಚ ನ್ಯಾಯಾಲಯವೇ ನಿಮಗೆ ಧೈರ್ಯ/ನ್ಯಾಯ ನೀಡಬಲ್ಲುದು. ಮೊದಲು ಅಲ್ಲಿ ಆಲಿಕೆಯಾಗಲಿ’ ಎಂದು ಹೇಳಿದೆ. ಸರ್ವೋಚ್ಚ ನ್ಯಾಯಾಲಯವು ಈ ಅರ್ಜಿಯ ಮೇಲಿನ ಮುಂದಿನ ಆಲಿಕೆಗೆ ಯಾವುದೇ ದಿನಾಂಕ ನೀಡಲು ನಿರಾಕರಿಸಿದೆ.

ಕಪಿಲ ಸಿಬ್ಬಲರವರು ಯುಕ್ತಿವಾದ ಮಂಡಿಸುತ್ತ `2 ತಿಂಗಳಲ್ಲಿ ಪರೀಕ್ಷೆಗಳಿವೆ ಮತ್ತು ಹುಡುಗಿಯರನ್ನು ಶಾಲೆಗೆ ಬರದಂತೆ ತಡೆಯಲಾಗುತ್ತಿದೆ. ಅವರ ಮೇಲೆ ಕಲ್ಲುತೂರಾಟ ಮಾಡಲಾಗುತ್ತಿದೆ. ಇದು 9 ನ್ಯಾಯಾಧೀಶರ ವಿಭಾಗೀಯ ಪೀಠವು ಆಲಿಕೆ ನಡೆಸಿರುವ ಧಾರ್ಮಿಕ ಪ್ರಕರಣದಂತೆ ಇದೆ’ ಎಂದು ಹೇಳಿದರು. ಕೇರಳದ ಶಬರಿಮಲೆ ದೇವಸ್ಥಾನದಲ್ಲಿ 10 ರಿಂದ 55 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿತ್ತು, ಈ ಪ್ರಕರಣದಲ್ಲಿ ಸರ್ವೋಚ್ಚ 3 ನ್ಯಾಯಾಧೀಶರ ವಿಭಾಗೀಯ ಪೀಠವು ಹಿಜಾಬ್ ಪ್ರಕರಣದಲ್ಲಿ ಆಲಿಕೆ ನಡೆಸುತ್ತಿದೆ. ನ್ಯಾಯಾಲಯದ 9 ನ್ಯಾಯಾಧೀಶರ ವಿಭಾಗೀಯ ಪೀಠವು ಆಲಿಕೆ ನಡೆಸಿತ್ತು. ಸಿಬ್ಬಲರವರು ಇದರ ಸಂದರ್ಭವನ್ನು ನೀಡಿದ್ದರು. ಸದ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 3 ನ್ಯಾಯಾಧೀಶರ ವಿಭಾಗೀಯ ಪೀಠವು ಹಿಜಾಬ್ ಪ್ರಕರಣದಲ್ಲಿ ಆಲಿಕೆ ನಡೆಸುತ್ತಿದೆ.