ತನ್ನ ಸಮಯವನ್ನು ವ್ಯರ್ಥ ಮಾಡುವುದೆಂದರೆ ದೇವರ ಸಮಯವನ್ನೇ ವ್ಯರ್ಥ ಮಾಡಿದಂತೆ !

(ಪೂ.) ಶ್ರೀ. ಸಂದೀಪ ಆಳಶಿ,

‘ದೇವರು ಸಾಧನೆಗಾಗಿ ನಮಗೆ ಈ ಭೂಮಿಯಲ್ಲಿ ಜನ್ಮ ನೀಡಿದ್ದಾನೆ. ಆದರೆ ಕೆಲವು ಸಾಧಕರು ಅನಾವಶ್ಯಕ ವಿಷಯ ಗಳ ಬಗ್ಗೆ ಮಾತನಾಡುವುದು,  ಸಂಚಾರವಾಣಿಯಲ್ಲಿ (ಮೊಬೈಲ್‌ ನಲ್ಲಿ) ಹರಟೆ ಹೊಡೆಯುವುದು, ಸಂಚಾರವಾಣಿ ಅಥವಾ ದೂರದರ್ಶನದಲ್ಲಿ (ಟಿವಿ) ಮನೋರಂಜನೆಯ ಕಾರ್ಯಕ್ರಮ ನೋಡುವುದು ಮುಂತಾದ ವಿಷಯಗಳಲ್ಲಿ ಸಮಯ ವ್ಯರ್ಥ ಮಾಡುತ್ತಾರೆ. ನಾವು ಯಾವಾಗ ಸಾಧನೆ ಮಾಡುತ್ತೇವೆಯೋ, ಆಗ ನಾವು ನಮ್ಮನ್ನು ಮರೆತು ಗುರುಚರಣಗಳಲ್ಲಿ ಅಥವಾ ಭಗವಂತನ ಚರಣಗಳಲ್ಲಿ ಸಮರ್ಪಿತವಾಗಲು ಪ್ರಯತ್ನಿಸುತ್ತೇವೆ. ಹೀಗಿರುವಾಗ ನಮಗೆ ಸ್ವತಃದ ಸಮಯವೂ ಎಲ್ಲಿ ಸ್ವಂತದ್ದಾಗಿರುತ್ತದೆ ? ಅದು ಕೂಡ ಭಗವಂತನದ್ದೇ ಆಗಿರುತ್ತದೆ ! ಹೀಗಿರುವಾಗ ಸಮಯ ವ್ಯರ್ಥ ಮಾಡುವ ಅಧಿಕಾರ ಎಲ್ಲಿರುತ್ತದೆ ?

ಹಿಂದೆ ನಾನು ಕೆಲವೊಮ್ಮೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬಳಿ ನನ್ನ ಸೇವೆಯಲ್ಲಿನ ಸಂದೇಹ ಕೇಳಲು ಹೋಗುತ್ತಿದ್ದೆನು. ಆಗ ಅವರು ಗಣಕಯಂತ್ರದಲ್ಲಿ ಗ್ರಂಥಲೇಖನ ಪರಿಶೀಲನೆಯ ಸೇವೆ ಮಾಡುತ್ತಿದ್ದರು. ‘ಅವರು ಅರ್ಧ ಪರಿಶೀಲನೆ ಮಾಡಿರುವ ಲೇಖನವನ್ನು ಪೂರ್ಣ ಪರಿಶೀಲನೆಯಾಗುವ ತನಕ ಸ್ವಲ್ಪ ಕಾಯೋಣ’ ಎಂದು ವಿಚಾರ ಮಾಡಿ ನಾನು ಕೆಲವು ಕ್ಷಣ ಹಾಗೆಯೇ ನಿಂತಿದ್ದೆ. ‘ನಾನು ನಿಂತಿರುವುದು’ ಅವರ ಗಮನಕ್ಕೆ ಬಂದಾಗ ಅವರು ತಮ್ಮ ಸೇವೆಯನ್ನು ತಕ್ಷಣ ನಿಲ್ಲಿಸುತ್ತಿದ್ದರು ಮತ್ತು ”ಅರೇ, ಕೂಡಲೇ ಕೇಳಬೇಕಿತ್ತು: ಕಾದು ಸಮಯ ಏಕೆ ವ್ಯರ್ಥ ಮಾಡಿದಿರಿ ?’’ಎಂದು ಹೇಳುತ್ತಿದ್ದರು. ಸ್ವತಃ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಕೂಡ ಇತರರ ಸಮಯ ವ್ಯರ್ಥವಾಗಬಾರದೆಂದು ವಿಚಾರ ಮಾಡುತ್ತಾರೆ. ಹಾಗಿರುವಾಗ ನಾವು ಕನಿಷ್ಠ ನಮ್ಮ ಸ್ವಂತ ಸಮಯದ ಬಗ್ಗೆಯಾದರೂ ವಿಚಾರ ಮಾಡಬೇಕಲ್ಲವೇ ? ವ್ಯರ್ಥವಾದ ಸಮಯ ಎಂದೂ ಮರಳಿ ಬರುವುದಿಲ್ಲ. ಆದ್ದರಿಂದ ನಾವು ಪ್ರತಿ ಕ್ಷಣವನ್ನು ಸತ್‌ಗಾಗಿ ಅರ್ಪಿಸಬೇಕು. ಹೀಗೆ ಮಾಡುವುದರಿಂದ ನಮ್ಮ ಸಾಧನೆ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಮತ್ತು ಶೀಘ್ರ ಪ್ರಗತಿ ಆಗುತ್ತದೆ.

– ಪೂ. ಸಂದೀಪ ಆಳಶಿ, ರಾಮನಾಥಿ, ಗೋವಾ (೨೭.೯.೨೦೨೩)