ವಕ್ಫ್ ಸುಧಾರಣಾ ಮಸೂದೆ ಅಂಗೀಕಾರವಾದರೆ ದೇಶವ್ಯಾಪಿ ಹೋರಾಟ! – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎಚ್ಚರಿಕೆ

ನವದೆಹಲಿ – ವಕ್ಫ್ ಸುಧಾರಣಾ ಮಸೂದೆಯನ್ನು ಏಪ್ರಿಲ್ ೨ ರಂದು ಲೋಕಸಭೆಯಲ್ಲಿ ಮಂಡಿಸಿದಾಗ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ವಕ್ತಾರ ಡಾ. ಸೈಯದ್ ಕಾಸಿಂ ರಸೂಲ್ ಇಲಿಯಾಸ್, “ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದರೆ, ನಾವು ಅದರ ವಿರುದ್ಧ ದೇಶವ್ಯಾಪಿ ಚಳವಳಿಯನ್ನು ಪ್ರಾರಂಭಿಸುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ. ನಮ್ಮ ಬಳಿ ಇರುವ ಎಲ್ಲಾ ಕಾನೂನು ಮತ್ತು ಸಾಂವಿಧಾನಿಕ ಅವಕಾಶಗಳನ್ನು ಬಳಸುತ್ತೇವೆ. ಪ್ರಸ್ತಾವಿತ ಸುಧಾರಣೆಗಳನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಡಾ. ಇಲಿಯಾಸ್ ಮಾತು ಮುಂದುವರಿಸಿ, “ಈ ಮಸೂದೆಯು ತಾರತಮ್ಯ ಮತ್ತು ಧಾರ್ಮಿಕ ಪ್ರೇರಿತವಾಗಿದೆ. ಜಂಟಿ ಸಂಸದೀಯ ಸಮಿತಿಯ ವಿರೋಧ ಪಕ್ಷದ ಸದಸ್ಯರ ಅಭಿಪ್ರಾಯಗಳನ್ನು ಸಹ ಪರಿಗಣಿಸದಿರುವುದು ದುಃಖಕರವಾಗಿದೆ” ಎಂದು ಅವರು ಖೇದ ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

ಪ್ರಜಾಪ್ರಭುತ್ವದ ದುರುಪಯೋಗ ಮಾಡಿಕೊಂಡು ಮುಸ್ಲಿಂ ಸಂಘಟನೆಗಳು ಸಮಾಜವನ್ನು ಹೇಗೆ ಒತ್ತೆಯಾಳಾಗಿಸುತ್ತಿವೆ ಎಂಬುದಕ್ಕೆ ಇದೊಂದು ಉದಾಹರಣೆ. ಇಂತಹ ಸಂಘಟನೆಗಳಿಗೆ ಸರಕಾರ ತಕ್ಕ ಪಾಠ ಕಲಿಸಬೇಕು!