ಆಧ್ಯಾತ್ಮಿಕ ಉಪಾಯವನ್ನು ಮಾಡುವಾಗ ಸ್ಥೂಲದಿಂದ ಆವರಣ ತೆಗೆಯಲು ಮತ್ತು ನ್ಯಾಸ ಮಾಡಲು ಸಾಧ್ಯವಾಗದಿದ್ದರೆ ಸೂಕ್ಷ್ಮದಿಂದ ಮಾಡಿರಿ !

(ಪೂ.) ಶ್ರೀ. ಸಂದೀಪ ಆಳಶಿ

‘ಆಧ್ಯಾತ್ಮಿಕ ಉಪಾಯವನ್ನು ಮಾಡುವಾಗ ಮೊದಲು ನಮ್ಮ ದೇಹದ ಮೇಲಿನ ಆವರಣವನ್ನು ತೆಗೆಯುವುದು ಮಹತ್ವದ್ದಾಗಿರುತ್ತದೆ; ಏಕೆಂದರೆ ಅದನ್ನು ತೆಗೆಯದಿದ್ದರೆ ಉಪಾಯಗಳ ಸಮಯದಲ್ಲಿ ಈಶ್ವರೀ ಶಕ್ತಿಯನ್ನು ಪರಿಣಾಮಕಾರಿಯಾಗಿ ಗ್ರಹಿಸಲು ಸಾಧ್ಯವಾಗುವುದಿಲ್ಲ. ಮುದ್ರೆಯನ್ನು ಮಾಡುವಾಗ ನ್ಯಾಸವಿದ್ದರೆ ಅದನ್ನು ಮಾಡುವುದೂ ಆವಶ್ಯಕವಿರುತ್ತದೆ; ಏಕೆಂದರೆ ನ್ಯಾಸದಿಂದ ಉಪಾಯದ ಸಮಯದಲ್ಲಿ ಗ್ರಹಿಸಲ್ಪಟ್ಟ ಈಶ್ವರೀ ಶಕ್ತಿಯು ದೇಹದಲ್ಲಿರುವ ತೊಂದರೆಯಿರುವ ಮೂಲಸ್ಥಾನಕ್ಕೆ ಪರಿಣಾಮಕಾರಿಯಾಗಿ ಪ್ರಕ್ಷೇಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ತೊಂದರೆಯು ಸ್ವಲ್ಪ ಸಮಯದಲ್ಲಿ ಕಡಿಮೆಯಾಗಲು ಸಹಾಯವಾಗುತ್ತದೆ.

ಕೆಲವೊಮ್ಮೆ ವ್ಯಕ್ತಿಗೆ ಅತೀ ದಣಿವು ಆಗಿರುವುದರಿಂದ ಅಥವಾ ಕೈ ನೋಯುತ್ತಿರುವುದರಿಂದ ಆವರಣ ತೆಗೆಯಲು ಅಥವಾ ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಪ್ರವಾಸವನ್ನು ಮಾಡುವಾಗ, ಯಾವುದಾದರೊಂದು ಕಚೇರಿಗೆ ಹೋದನಂತರ ಅಲ್ಲಿ ನಾಮಜಪವನ್ನು ಮಾಡಲು ಸ್ವಲ್ಪ ಸಮಯ ಸಿಕ್ಕಿದರೂ ಅಂತಹ ಸ್ಥಳದಲ್ಲಿಯೂ ಹೆಚ್ಚಾಗಿ ಆವರಣ ತೆಗೆಯಲು ಮತ್ತು ನ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಸೂಕ್ಷ್ಮದಿಂದ ಆವರಣ ತೆಗೆಯುವುದು ಮತ್ತು ನ್ಯಾಸವನ್ನು ಮಾಡಬೇಕು. ಈ ಎರಡೂ ಕ್ರಿಯೆಗಳು ಸೂಕ್ಷ್ಮದಿಂದ ಮಾಡುವುದು, ಅಂದರೆ ಈ ಕ್ರಿಯೆಯನ್ನು ನಾವು ಸ್ಥೂಲದಿಂದ ಹೇಗೆ ಮಾಡುತ್ತೇವೆಯೋ, ಹಾಗೆಯೇ ಮನಸ್ಸಿನಿಂದ ಮಾಡಬೇಕು. ‘ನಾವು ಈ ಕ್ರಿಯೆಯನ್ನು ಸ್ಥೂಲದಿಂದ ಮಾಡಿದ ನಂತರ ಎಷ್ಟು ಲಾಭವಾಗುತ್ತದೆಯೋ, ಸೂಕ್ಷ್ಮದಿಂದ ಮಾಡುವುದರಿಂದಲೂ ಅಷ್ಟೇ ಲಾಭವಾಗುತ್ತದೆ’, ಹೀಗೆ ನಾನು ಅನೇಕಬಾರಿ ಅನುಭವಿಸಿದ್ದೇನೆ.

‘ಗುರುದೇವರು ನಮಗೆ ಸೂಕ್ಷ್ಮದಿಂದ ಉಪಾಯದ ಮಹತ್ವವನ್ನು ಹೇಳಿ ಮತ್ತು ಕಲಿಸಿ ನಮ್ಮ ಮೇಲೆ ಎಷ್ಟು ಕೃಪೆಯನ್ನು ಮಾಡಿದ್ದಾರೆ’, ಎಂಬ ಕೃತಜ್ಞತಾಭಾವವನ್ನು ಮನಸ್ಸಿನಲ್ಲಿಟ್ಟು ಉಪಾಯವನ್ನು ಮಾಡಬೇಕು.’

– (ಪೂ.) ಸಂದೀಪ ಆಳಶಿ (೨.೧೧.೨೦೨೪)