US Court Rejects Pannu Statement : ಅಮೇರಿಕದ ನಾಗರಿಕ ಖಲಿಸ್ತಾನಿ ಭಯೋತ್ಪಾದಕ ಪನ್ನುನ ದಾವೆಯನ್ನು ನಿರಾಕರಿಸಿದ ಅಮೇರಿಕಾ ನ್ಯಾಯಾಲಯ!

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಅವರಿಗೆ ಅಮೇರಿಕ ಸಮನ್ಸ್ ನೀಡಿದೆ ಎಂದು ಹೇಳಿದ್ದನು!

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ ಪನ್ನು

ವಾಷಿಂಗ್ಟನ (ಅಮೇರಿಕಾ) – ಕಳೆದ ಫೆಬ್ರವರಿಯಲ್ಲಿ ವಾಷಿಂಗ್ಟನ್ ಪ್ರವಾಸದ ಸಂದರ್ಭದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಅವರಿಗೆ ಯಾವುದೇ ನ್ಯಾಯಾಲಯದ ದಾಖಲೆಗಳನ್ನು ಸಲ್ಲಿಸಲಾಗಿಲ್ಲ, ಎಂದು ಅಮೇರಿಕದ ನ್ಯಾಯಾಲಯವೊಂದು ಸ್ಪಷ್ಟಪಡಿಸಿದೆ. ದೋವಲ ಅವರಿಗೆ ಸಮನ್ಸ್ ಮತ್ತು ಇತರ ನ್ಯಾಯಾಲಯದ ದಾಖಲೆಗಳನ್ನು ನೀಡಲಾಗಿದೆ ಎಂದು ಅಮೇರಿಕದ ನಾಗರಿಕನಾಗಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ ಪನ್ನು ಹೇಳಿಕೊಂಡಿದ್ದನು.

ಪನ್ನು ದೋವಲ ಮತ್ತು ಮತ್ತೊಬ್ಬ ಭಾರತೀಯ ನಾಗರಿಕ ನಿಖಿಲ ಗುಪ್ತಾ ವಿರುದ್ಧ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾನೆ. ಅಮೇರಿಕದಲ್ಲಿ ಪನ್ನು ಹತ್ಯೆಯ ಸಂಚಿನಲ್ಲಿ ಗುಪ್ತಾ ಅವರು ಭಾರತೀಯ ಸರಕಾರಿ ನೌಕರರೊಂದಿಗೆ ಕಾರ್ಯ ಮಾಡಿದ್ದಾರೆ ಎಂದು ಸರಕಾರಿ ವಕೀಲರು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಭಾರತದ ವಿರುದ್ಧ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿರುವ ಪನ್ನು ಇನ್ನೂ ಹೊರಗಡೆ ಹೇಗೆ? ಅಮೇರಿಕಾ ಆತನನ್ನು ಬಂಧಿಸಿ ಭಾರತಕ್ಕೆ ಏಕೆ ಒಪ್ಪಿಸುವುದಿಲ್ಲ? ಜಗತ್ತಿನಾದ್ಯಂತದ ಭಯೋತ್ಪಾದನೆಯ ವಿರುದ್ಧ ಇರುವ ಅಮೇರಿಕಾ ಭಾರತದ ವಿರುದ್ಧ ಇರುವ ಖಲಿಸ್ತಾನಿ ಭಯೋತ್ಪಾದನೆಗೆ ಸೊಪ್ಪು ಹಾಕುತ್ತಿದೆ ಎಂಬುದನ್ನು ಗಮನಿಸಬೇಕು!