ಸಾಧಕರು ಸೇವೆ ಮಾಡುವಾಗ ಪ್ರತಿ ೧-೨ ಗಂಟೆಗಳಿಗೊಮ್ಮೆ ವ್ಯಷ್ಟಿ ಸಾಧನೆಯ ಪ್ರಯತ್ನ ಮಾಡುವುದು ಆವಶ್ಯಕ !

(ಪೂ.) ಶ್ರೀ. ಸಂದೀಪ ಆಳಶಿ

‘ಸದ್ಯದ ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅನೇಕ ಸಾಧಕರ ಮೇಲೆ ಮೇಲಿಂದ ಮೇಲೆ ಕಪ್ಪು ಆವರಣ (ತೊಂದರೆದಾಯಕ ಶಕ್ತಿಯ ಆವರಣ) ಬರುತ್ತದೆ. ಸಾಧಕರು ನಿರಂತರ ಸೇವೆ ಅಥವಾ ವೈಯಕ್ತಿಕ ಕೆಲಸಗಳಿಗೆ ಆದ್ಯತೆ ನೀಡುವುದರಿಂದ ಅವರ ಆಧ್ಯಾತ್ಮಿಕ ಉಪಾಯ ಮತ್ತು ವ್ಯಷ್ಟಿ ಸಾಧನೆಯ ಪ್ರಯತ್ನ ಸರಿಯಾಗಿ ಆಗುವುದಿಲ್ಲ. ಇದರ ಪರಿಣಾಮದಿಂದ ಅವರ ತೊಂದರೆಗಳು ಹೆಚ್ಚಳವಾಗುತ್ತದೆ, ಉದಾ. ಮನಸ್ಸಿನಲ್ಲಿ ಕಿರಿಕಿರಿಯಾಗುವುದು, ನಕಾರಾತ್ಮಕತೆ ಬರುವುದು, ಸೇವೆಯನ್ನು ಮಾಡುವಾಗ ಹೊಳೆಯದಿರುವುದು ಇತ್ಯಾದಿ. ಇದನ್ನು ತಪ್ಪಿಸಲು ಸಾಧಕರು ಸಾಧ್ಯವಿದ್ದರೆ ಪ್ರತಿ ೧-೨ ಗಂಟೆ ಗಳಿಗೊಮ್ಮೆ ನಡೆದಿರುವ ಸೇವೆ ಅಥವಾ ವೈಯಕ್ತಿಕ ಕೆಲಸಗಳನ್ನು ನಿಲ್ಲಿಸಿ ಮುಂದಿನ ಪ್ರಯತ್ನಗಳನ್ನು ಅನುಕ್ರಮವಾಗಿ ಮಾಡಬೇಕು. ೨-೩ ನಿಮಿಷಗಳ ಕಾಲ ಆವರಣ ತೆಗೆಯುವುದು, ಪ್ರಾರ್ಥನೆ ಮಾಡುವುದು, ಅರ್ಧ ನಿಮಿಷಕ್ಕಾಗಿ ಯಾವುದಾದರೂ ಭಾವ ಪ್ರಯೋಗ ಮಾಡುವುದು, ಯಾವುದಾದರೂ ಸ್ವಯಂಸೂಚನೆ ನೀಡುವುದು.

ಅನೇಕ ಸಾಧಕರು ಮೇಲಿನ ರೀತಿಯಲ್ಲಿ ಪ್ರಯತ್ನಿಸಿದಾಗ ಅವರಿಗೆ ಮನಸ್ಸಿನಿಂದ ಸಕಾರಾತ್ಮಕ ಮತ್ತು ಸ್ಥಿರವಾಗಿರಲು ಸಾಧ್ಯವಾಗುವುದು, ಅವರ ಈಶ್ವರೀ ಅನುಸಂಧಾನದಲ್ಲಿ ಹೆಚ್ಚಳವಾಗುವುದು, ಅವರಿಗೆ ಮುಂದಿನ ಸೇವೆಗಾಗಿ ಊರ್ಜೆ ಸಿಗುವುದು ಇವುಗಳಂತಹ ಲಾಭವಾಯಿತು. ಎಲ್ಲ ಸಾಧಕರು ಈ ರೀತಿ ಪ್ರಯತ್ನಿಸಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಅಪೇಕ್ಷಿತ ರೀತಿ ಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಚೆನ್ನಾಗಿ ಮಾಡಲು ಪ್ರಯತ್ನಿಸಬೇಕು !’

ಪೂ. ಸಂದೀಪ ಆಳಶಿ (೨.೧೨.೨೦೨೪)

ಭಾವದ ವಿಷಯದಲ್ಲಿ ಉಪಯುಕ್ತ ದೃಷ್ಟಿಕೋನ !

೧. ‘ಈಶ್ವರಪ್ರಾಪ್ತಿಯಾಗಲು ನಮ್ಮಲ್ಲಿ ಕೇವಲ ಭಾವವಲ್ಲ ಆದರೆ ಶುದ್ಧ ಭಾವ (ಭಕ್ತಿ) ನಿರ್ಮಾಣವಾಗುವುದು ಆವಶ್ಯಕವಾಗಿರುತ್ತದೆ. ಅಂತಃಕರಣ ಶುದ್ಧವಾಗದ ಹೊರತು ಭಾವವು ಶುದ್ಧ ಭಾವದಲ್ಲಿ ರೂಪಾಂತರವಾಗಲು ಸಾಧ್ಯವಿಲ್ಲ.

೨. ‘ಯಾವ ನಾಮಜಪವನ್ನು ಮಾಡುತ್ತೇವೆ ?’ ಇದು ಎಷ್ಟು ಮಹತ್ವದ್ದಾಗಿದೆಯೋ, ಅಷ್ಟೇ ‘ಅದನ್ನು ಮಾಡುವ ಹಿಂದಿನ ಮತ್ತು ಮಾಡುವಾಗಿನ ಭಾವ’ವೂ ಮಹತ್ವದ್ದಾಗಿದೆ.

೩. ಇತರರ ಬಗ್ಗೆ ನಕಾರಾತ್ಮಕ ಮಾತನಾಡುವುದರಿಂದ ನಮ್ಮಲ್ಲಿರುವ ಭಾವದ ಮಟ್ಟ ಕಡಿಮೆಯಾಗತೊಡಗುತ್ತದೆ.

೪. ಪ್ರತಿಕೂಲ ಪರಿಸ್ಥಿತಿಯಲ್ಲಿ ಭಾವದ ಮಟ್ಟದಲ್ಲಿರಬೇಕಿದ್ದರೆ ಅನುಕೂಲ ಸ್ಥಿತಿ ಇರುವಾಗಲೇ ಭಾವವನ್ನು ಜಾಗೃತವಾಗಿಡಲು ನಿರಂತರ ಪ್ರಯತ್ನಿಸಬೇಕಾಗುತ್ತದೆ.’

(ಪೂ.) ಸಂದೀಪ ಆಳಶಿ (೧೬.೯.೨೦೨೪)