ಶಿವಮೊಗ್ಗ – ದೇಶಾದ್ಯಂತ ಮಾರ್ಚ್ 31 ರಂದು ಮುಸ್ಲಿಮರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಈದ್ಗಾ ಮೈದಾನದಲ್ಲಿ ನಮಾಜ್ ನಂತರ, ಮುಸ್ಲಿಮರು ಪ್ಯಾಲೆಸ್ಟೈನ್ ಪರ ಘೋಷಣೆಗಳನ್ನು ಕೂಗಿದರು ಮತ್ತು ‘ಫ್ರೀ ಪ್ಯಾಲೆಸ್ಟೈನ್’ ಎಂದು ಬರೆದ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಜೊತೆಗೆ, ‘ಪ್ಯಾಲೆಸ್ಟೈನ್ ಮತ್ತು ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ನ ಆಕ್ರಮಣವನ್ನು ನಿಲ್ಲಿಸಿ’ ಎಂಬ ಪೋಸ್ಟರ್‌ಗಳನ್ನು ಸಹ ಪ್ರದರ್ಶಿಸಲಾಯಿತು. ಈ ವೇಳೆ ಕೇಂದ್ರ ಸರಕಾರದ ವಕ್ಫ್ ಸುಧಾರಣಾ ಮಸೂದೆಯನ್ನು ವಿರೋಧಿಸಿ ಮುಸ್ಲಿಮರು ಕಪ್ಪು ಪಟ್ಟಿಗಳನ್ನು ಕಟ್ಟಿಕೊಂಡು ಸಾಮೂಹಿಕ ನಮಾಜ್ ಮಾಡಿದರು. ಪ್ಯಾಲೆಸ್ಟೈನ್ ಪರ ಘೋಷಣೆಗಳನ್ನು ಕೂಗಿದವರಲ್ಲಿ ‘ಎಸ್‌ಡಿಪಿಐ’ ಸಂಘಟನೆಯ ಕಾರ್ಯಕರ್ತರು ಸೇರಿದ್ದರು.
ಸಂಘ ಪರಿವಾರವನ್ನು ಅವಮಾನಿಸುವ ಪೋಸ್ಟರ್‌ಗಳ ಪ್ರದರ್ಶನ!
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ರಂಜಾನ್ ನಮಾಜ್ ಸಮಯದಲ್ಲಿ ಸಂಘ ಪರಿವಾರವನ್ನು ಅವಮಾನಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದ ‘ಎಸ್‌ಡಿಪಿಐ’ ಕಾರ್ಯಕರ್ತರ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಮತಾಂಧ ಮುಸ್ಲಿಮರು ತಮ್ಮ ಹಬ್ಬಗಳ ಸಮಯದಲ್ಲಿ ಹಿಂದೂ ಮತ್ತು ಹಿಂದೂತ್ವನಿಷ್ಠ ಸಂಘಟನೆಗಳ ವಿರುದ್ಧ ವಿಷ ಕಾರುವ ಕೆಲಸ ಮಾಡುತ್ತಾರೆ ಎಂಬುದನ್ನು ಗಮನಿಸಿ! – ಸಂಪಾದಕರು) ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ.
ಸಂಪಾದಕೀಯ ನಿಲುವುಭಾರತದ ಮುಸ್ಲಿಮರಿಗೆ ಪ್ಯಾಲೆಸ್ಟೈನ್ ಬಗ್ಗೆ ಅಷ್ಟೊಂದು ಪ್ರೀತಿ ಇದ್ದರೆ, ಸರಕಾರವು ಅವರನ್ನು ಅಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು! |