ಉಕ್ರೇನ್ ನ ಜೊತೆಗಿನ ಯುದ್ಧವನ್ನು ನಿಲ್ಲಿಸಿ ಅಮೇರಿಕದಿಂದ ಪ್ರಸ್ತಾಪ; ರಷ್ಯಾದಿಂದ ತಿರಸ್ಕಾರ

ಮಾಸ್ಕೋ (ರಷ್ಯಾ) – ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಅಮೇರಿಕಾವು ನೀಡಿದ ಸೂತ್ರಗಳು ಮತ್ತು ಪರಿಹಾರಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ; ಆದರೆ ಅದನ್ನು ಸಧ್ಯದ ಪರಿಸ್ಥಿತಿಯಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ, ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆಯ್ ರಿಯಾಬ್ ಕೋವ್ ಹೇಳಿದ್ದಾರೆ. ಅವರು ರಷ್ಯಾದ ಪತ್ರಿಕೆಯಾದ ‘ಇಂಟರ್ನ್ಯಾಷನಲ್ ಅಫೇರ್ಸ್’ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿ ಅಮೇರಿಕ ಮತ್ತು ರಷ್ಯಾ ನಡುವಿನ ಮಾತುಕತೆಗಳು ಸ್ಥಗಿತಗೊಂಡಿರುವುದು ಈ ಮೂಲಕ ಕಂಡು ಬರುತ್ತಿದೆ.

ಉಕ್ರೇನ್ ನ್ಯಾಟೋದಲ್ಲಿ ಅರ್ಥಾತ್ “ನ್ಯಾಟೋ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್” ನಲ್ಲಿ ಸೇರುವ ಮಹತ್ವಾಕಾಂಕ್ಷೆಗಳನ್ನು ತ್ಯಜಿಸಬೇಕು, ಉಕ್ರೇನ್‌ನ ಸೈನ್ಯದ ಗಾತ್ರವನ್ನು ಮಿತಿಗೊಳಿಸಬೇಕು ಮತ್ತು ನಾಲ್ಕು ಉಕ್ರೇನಿಯನ್ ಪ್ರದೇಶಗಳ ಮೇಲೆ ರಷ್ಯಾಕ್ಕೆ ನಿಯಂತ್ರಣ ನೀಡಬೇಕು, ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಅವರು ಆಗ್ರಹಿಸಿದ್ದಾರೆ. ಈ ಬೇಡಿಕೆಗಳನ್ನು ಸ್ವೀಕರಿಸಿದರೆ ರಷ್ಯಾಗೆ ಶರಣಾದಂತೆ ಎಂದು ಉಕ್ರೇನ್ ಪ್ರತ್ಯುತ್ತರ ನೀಡಿದೆ.