ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಕೃಪೆಯಿಂದ ಮತ್ತು ಅವರ ಮಾರ್ಗದರ್ಶನಕ್ಕನುಸಾರ ‘ಗುರುಕೃಪಾ ಯೋಗಾನುಸಾರ ಸಾಧನೆ ಮಾಡಿ ೧೫.೫.೨೦೨೪ರ ವರೆಗೆ ೧೨೭ ಜನ ಸಾಧಕರು ಸಂತರಾಗಿದ್ದಾರೆ, ೧ ಸಾವಿರದ ೫೮ ಜನ ಸಾಧಕರು ಸಂತತ್ವದ ದಿಕ್ಕಿನಲ್ಲಿ ಮಾರ್ಗಕ್ರಮಣ ಮಾಡುತ್ತಿದ್ದಾರೆ.
೨೦೧೭ ರಲ್ಲಿ ಒಮ್ಮೆ ನಾನು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ ಇವರಲ್ಲಿ “ನಿಮ್ಮ ಕೃಪೆಯಿಂದ ಅನೇಕ ಸಾಧಕರು ಸಂತರಾಗಿದ್ದಾರೆ. ಅವರು ಕ್ರಮೇಣ “ಸದ್ಗುರು ಆಗುತ್ತಿದ್ದಾರೆ ಮತ್ತು ಮುಂದೆ ಪರಾತ್ಪರ ಗುರುಗಳೂ ಆಗಬಹುದು. ಸದ್ಯ ನಿಮ್ಮ ಹೆಸರಿನ ಮುಂದೆ ನಾವು ಪರಾತ್ಪರ ಗುರು ಎಂದು ಉಪಾಧಿ ಹಾಕುತ್ತಿದ್ದೇವೆ. ಆದರೆ ನಿಮ್ಮ ಸ್ಥಾನ ಎಲ್ಲರಿಗಿಂತ ಭಿನ್ನವಾಗಿದೆ ಮತ್ತು ಅದು ಬೇರೆಯೇ ಇರಬೇಕು ಮತ್ತು ಕಾಣಿಸಬೇಕು. ನಿಮ್ಮ ಹೆಸರಿನ ಮೊದಲು ಎಲ್ಲಕ್ಕಿಂತ ಬೇರೆ ಉಪಾಧಿ ಹಾಕೋಣವೇ ? ಎಂದು ಕೇಳಿದೆ. ಇದರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು “ಈಗ ಅದರ ವಿಚಾರ ಮಾಡುವುದು ಬೇಡ ಎಂದು ಹೇಳಿದರು.
೨೦೨೨ ರಲ್ಲಿ ಜೀವನಾಡಿಪಟ್ಟಿವಾಚನದ ಮಾಧ್ಯಮದಿಂದ ಮಹರ್ಷಿಗಳು ಪರಾತ್ಪರ ಗುರು ಡಾಕ್ಟರರಿಗೆ ‘ಸಚ್ಚಿದಾನಂದ ಪರಬ್ರಹ್ಮ ಈ ಉಪಾಧಿಯನ್ನು ಹಾಕಲು ಹೇಳಿದರು. ಇದು ತಿಳಿದ ಮೇಲೆ ನನಗೆ ತುಂಬಾ ಆನಂದವಾಯಿತು. ‘ನನ್ನ ಪ್ರಾರ್ಥನೆಯನ್ನು ಈಶ್ವರನು ಕೇಳಿಸಿಕೊಂಡನು ಎಂದು ನನಗೆ ಅನಿಸಿತು. ಅನಂತರ ಪರಾತ್ಪರ ಗುರು ಡಾಕ್ಟರರು ಹಾಗೆ ಉಪಾಧಿ ಯನ್ನು ಹಾಕತೊಡಗಿದರು. ಕೆಲವು ತಿಂಗಳುಗಳ ನಂತರ ಪುನಃ ಅವರು ಪರಾತ್ಪರ ಗುರು ಎಂದೇ ಉಪಾಧಿ ಹಾಕಲು ಪ್ರಾರಂಭಿಸಿದರು. ಆಗ ನಾವು ಅವರಿಗೆ ‘ಮಹರ್ಷಿಯವರು ಸಚ್ಚಿದಾನಂದ ಪರಬ್ರಹ್ಮ ಈ ಉಪಾಧಿಯನ್ನು ಹಾಕಲು ಹೇಳಿದ್ದಾರೆ. ಅದಕ್ಕನುಸಾರ ಮಾಡುವುದು ಯೋಗ್ಯವಾಗಿದೆ ಎಂದು ಹೇಳಿದೆವು. ಅದರ ನಂತರ ಅವರು ಪುನಃ ಈ ಹೊಸ ಉಪಾಧಿಯನ್ನು ಹಾಕಲು ಪ್ರಾರಂಭಿಸಿದರು.
ಈ ಪ್ರಸಂಗದಿಂದ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ತೀರಾ ಸರಳತನ ಗಮನಕ್ಕೆ ಬಂದಿತು. ತಾವು ಇತರರಿಗಿಂತ ಪ್ರತ್ಯೇಕ ಅಥವಾ ಶ್ರೇಷ್ಠರಾಗಿದ್ದೇವೆ ಎಂಬ ಭಾವನೆಯೇ ಅವರಲ್ಲಿ ಇಲ್ಲ. ಇಂದು ವಿವಿಧ ಸೇವೆಯ ಜವಾಬ್ದಾರಿ ತೆಗೆದುಕೊಳ್ಳುವ ಸಾಧಕರಲ್ಲಿ ಸ್ವತಃ ಬೇರೆಯೇ ಪ್ರತಿಷ್ಠೆಯನ್ನು ಜೋಪಾಸನೆ ಮಾಡುವ ಭಾವನೆ ಇರುತ್ತದೆ ಮತ್ತು ಇತರ ಸಾಧಕರು ನಾನು ಹೇಳಿದಂತೆ ಕೇಳಬೇಕು, ನನಗೆ ಗೌರವ ನೀಡಬೇಕು, ಹೀಗೆಯೂ ಅನಿಸುತ್ತದೆ. ಇಂತಹ ಸಾಧಕರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಈ ಉದಾಹರಣೆಯಿಂದ ಖಂಡಿತವಾಗಿಯೂ ಅಂತರ್ಮುಖರಾಗಬಹುದು.
– (ಪೂ.) ಸಂದೀಪ ಆಳಶಿ